ಸೋಮವಾರ, ಜೂನ್ 21, 2021
27 °C

ತನಿಖಾ ಠಾಣೆ ನಿದ್ರಾವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಲು: ತಾಲ್ಲೂಕಿನಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಣಿಕೆ ತಡೆಯಲು ಈಚೆಗೆ ಪಟ್ಟಣದ ನರಸಿಂಹತೀರ್ಥದಲ್ಲಿ ಮರಳು ಸಾಗಾಣಿಕಾ ತನಿಖಾ ಠಾಣೆ ಸ್ಥಾಪಿಸಲಾಗಿದೆ. ಆದರೆ ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ಮೀನಾಮೇಷ ಎಣಿಸಿದ್ದರಿಂದ ಠಾಣೆ ಪ್ರಾರಂಭವಾಗದೇ ಉಳಿದಿತ್ತು.ಈಚೆಗೆ ದಿನದ ಎರಡೂ ಪಾಳಿಗೆ 3 ಜನ ಗುತ್ತಿಗೆ ಸಿಬ್ಬಂದಿಯನ್ನು ನಿಯೋಜಿಸಿದೆ. ಈ ಸಿಬ್ಬಂದಿಯೊಂದಿಗೆ ಕಂದಾಯ. ಪೊಲೀಸ್ ಇಲಾಖೆಗಳಿಂದ ತಲಾ ಒಬ್ಬ ಸಿಬ್ಬಂದಿ ನಿಯೋಜಿಸಿ ಮರಳು ಲಾರಿ ಪರಿಶೀಲಿಸುವ ಕೆಲಸ ನೀಡಿದೆ.

 

ನಿಯೋಜಿತ ಸಿಬ್ಬಂದಿ ಪರ್ಮಿಟ್ ಇರುವ ಲಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ. ಆದರೆ ಅದಕ್ಕಿಂತ ಎರಡರಷ್ಟು ಲಾರಿಗಳು ಯಾವುದೇ ಆದೇಶವಿಲ್ಲದೆ ಆಕ್ರಮವಾಗಿ ಮರಳು ಸಾಗಣಿಕೆ ಮಾಡುತ್ತಿವೆ. ಇಂತಹ ದಂಧೆಯನ್ನು ತಡೆಯುವಲ್ಲಿ ನಿರ್ಲಕ್ಷಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.