ಗುರುವಾರ , ಜನವರಿ 23, 2020
29 °C

ತಮಿಳರ ಸಮಸ್ಯೆಗೆ ಸ್ಥಳೀಯವಾಗಿ ಪರಿಹಾರ­: ರಾಜಪಕ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ (ಪಿಟಿಐ): ತಮಿಳರ ಸಮ­ಸ್ಯೆಗಳ ನಿವಾರಣೆಗೆ ಬೇರೆ ದೇಶ­ಗಳತ್ತ ನೋಡುವ ಬದಲು ದೇಶ­ದೊಳಗೇ ಸೌಹಾರ್ದ­ಯುತ­ ಪರಿಹಾರ ಕಂಡು­ಕೊಳ್ಳಲು ಸರ್ಕಾರ­ದೊಂದಿಗೆ ಕೈ­ಜೋಡಿ­ಸು­ವಂತೆ ಪ್ರಮುಖ ತಮಿಳು ಪಕ್ಷಗಳ ನಾಯಕರಿಗೆ ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆ ಮನವಿ ಮಾಡಿದ್ದಾರೆ.‘ಶಾಂತಿ ಮತ್ತು ಸಾಮರಸ್ಯ ನಿರ್ವ­ಹಣೆ­­ಗಾಗಿ ತಮ್ಮೊಂದಿಗೆ ಕೈಜೋಡಿಸು­ವಂತೆ  ಟಿಎನ್‌ಎ ನಾಯಕ ಸಂಪತ್ತನ್ ಮತ್ತು ಉತ್ತರ ಪ್ರಾಂತ್ಯದ ಮುಖ್ಯಮಂತ್ರಿ ವಿಘ್ನೇಶ್ವರನ್‌ ಅವರನ್ನು ಕೇಳಿಕೊಳ್ಳು­ತ್ತೇನೆ’ ಎಂದು ಸಂಸತ್ತಿನಲ್ಲಿ ಶುಕ್ರವಾರ  2014ರ ಬಜೆಟ್‌ ಚರ್ಚೆಯ ಸಂದರ್ಭದಲ್ಲಿ ರಾಜಪಕ್ಸೆ ತಿಳಿಸಿದ್ದಾರೆ.ಎಲ್ಲ ಸಮುದಾಯದವರೂ ಶಾಂತಿ­ಯ ಜೊತೆ ಬರಬೇಕೇ ಹೊರತು ದ್ವೇಷದ ಜೊತೆ­­ಗಲ್ಲ. ಇದು ರಾಷ್ಟ್ರೀಯ ಸಾಮ­­ರಸ್ಯಕ್ಕಾಗಿ ನಮ್ಮ ಬದ್ಧತೆಯನ್ನು ತೋರಿ­ಸುವ ಸಮಯ’ ಎಂದು ಅವರು ಹೇಳಿದ್ದಾರೆ.‘ನಾವು ಬೇರೆಯ­ವರಿಗೆ ಮಾದರಿ­ಯಾಗುವ ರೀತಿ ಪರಿಹಾರ­ವನ್ನು ಕಂಡುಕೊಳ್ಳಬೇಕು. ಮುಂದಿನ ಜನಾಂಗದ ದೃಷ್ಟಿಯಿಂದ ಇದು ನಮ್ಮ ಜವಾಬ್ದಾರಿಯಾಗಿದೆ’ ಎಂದರು.

ಪ್ರತಿಕ್ರಿಯಿಸಿ (+)