ಚಿಕ್ಕಮಗಳೂರು:ಬೀನ್ಸ್ ಕೆ.ಜಿ. 50 ರೂಪಾಯಿ; ಹಸಿ ಮೆಣಸಿನಕಾಯಿ ಕೆ.ಜಿ. 40 ರೂಪಾಯಿ; ಟೊಮೆಟೊ ಕೆ.ಜಿ. 30 ರೂಪಾಯಿ; ಗೆಡ್ಡೆಕೋಸು ಕೆ.ಜಿ. 25 ರೂಪಾಯಿ; ಹೀರೆಕಾಯಿ ಕೆ.ಜಿ. 20 ರೂಪಾಯಿ...... ಮಾರುಕಟ್ಟೆಯಲ್ಲಿ ಯಾವುದೇ ತರಕಾರಿಯೂ ಕೆ.ಜಿ. ಒಂದಂಕಿ ರೂಪಾಯಿಗೆ ಸಿಗದ ಪರಿಸ್ಥಿತಿ ತಲೆದೋರಿದೆ. ದಿನದಿನಕ್ಕೂ ತರಕಾರಿ ಬೆಲೆ ಗಗನಕ್ಕೇರುತ್ತಿದೆ. ಪರಿಣಾಮ ಗ್ರಾಹಕರ ಚಿಂತೆ ನೂರ್ಮಡಿಯಾಗುತ್ತಿದೆ.

ಎಷ್ಟ್ ಬಾರಿ ಹೇಳಿದರೂ `ಮನೆಗೆ ಒಂದ್ ಸಾಮಾನು ತಂದರೆ ಇನ್ನೊಂದ್ ತರೋಲ್ಲ~ ಮಹಿಳೆಯರ ಗೊಣಗಾಟ ಪ್ರತಿ ಮನೆಯಲ್ಲಿ ಕೇಳುತ್ತಿದೆ. `ಪಾಕಶಾಲೆ~ ನಿಭಾಯಿಸುವ ಗೃಹಿಣಿಯರನ್ನು ಸಮಾಧಾನಪಡಿಸಲು ಪತಿರಾಯಂದಿರು ಪರದಾಡುವಂತಾಗಿದೆ. ಹೋಟೆಲ್ ಊಟದ ಫಲ್ಯ, ಸಾಂಬಾರಿನಲ್ಲಿ ತರಕಾರಿ ಪ್ರಮಾಣ ಕ್ಷೀಣಿಸುತ್ತಿದೆ. ಮಾಂಸಾಹಾರ ಪ್ರಿಯರು ತರಕಾರಿ ಬೆಲೆ ಕೇಳಿ ತರಕಾರಿ ಮಾರುಕಟ್ಟೆಯತ್ತ ಸುಳಿಯುತ್ತಲೂ ಇಲ್ಲ.

ಒಂದು ಕೆ.ಜಿ. ಬೀನ್ಸ್ ಕೊಂಡೊಯ್ಯುವ ಬದಲು ಒಂದು ಕೆ.ಜಿ ಕೆರೆ ಮೀನು ಅಥವಾ ಬಂಗಡೆ ಮೀನು ಕೊಂಡೊಯ್ಯುವುದೇ ಲೇಸೆಂದು ಮೀನು ಮಾರುಕಟ್ಟೆಯತ್ತ ಮುಖ ಮಾಡುತ್ತಿರುವ ಪ್ರಸಂಗಗಳೂ ಕಾಣುತ್ತಿವೆ.
`ಯುಗಾದಿ ಹಬ್ಬದಲ್ಲಿ ನುಗ್ಗೆಕಾಯಿ ಕೆ.ಜಿ. 60ರಿಂದ 70 ರೂಪಾಯಿಗೆ ಏರಿಕೆ ಆಗಿತ್ತು. ಕಳೆದ ಎರಡು ವಾರಗಳಿಂದ ಕೆ.ಜಿ. ನುಗ್ಗೆಕಾಯಿ 12 ರೂಪಾಯಿಗೆ ಇಳಿದಿದೆ. ಉಳಿದ ಯಾವುದೇ ತರಕಾರಿಗಳ ಬೆಲೆಯೂ ಇಳಿದಿಲ್ಲ. ಇನ್ನೂ ಬೀನ್ಸ್ ಬೆಲೆ ದಿನದಿನಕ್ಕೂ ಏರುತ್ತಿದೆ. ಟೊಮೆಟೊ ಹುಳಿ ಕಾಯಿಸಿ ಪರಿಸ್ಥಿತಿ ನಿಭಾಯಿಸಲೆಂದರೆ ಕೆ.ಜಿ. ಐದಾರು ರೂಪಾಯಿಗೆ ಸಿಗುತ್ತಿದ್ದ ಟೊಮೆಟೊ ಕೂಡ 30 ರೂಪಾಯಿಗೆ ಬಂದು ನಿಂತಿದೆ. ಹೀಗಾದರೆ ಹೇಗೆ ಜೀವನ ನಡೆಸುವುದು ಹೇಳಿ~ ಎನ್ನುತ್ತಾರೆ ಶುಕ್ರವಾರ ಎಂ.ಜಿ.ರಸ್ತೆ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುತ್ತಿದ್ದ ಬಸವರಾಜು.
`ನಮ್ಮ ತಂದೆ ನೂರು ರೂಪಾಯಿ ಇಟ್ಟುಕೊಂಡು ಸಂತೆಗೆ ಹೋದರೆ ಬ್ಯಾಗು (ಚೀಲ) ಭರ್ತಿ ತರಕಾರಿ, ಪುರಿ-ಕಡ್ಲೆ, ಬೋಂಡಾ ತರುತ್ತಿದ್ದರು. ಈಗ ನಾವು 500 ರೂಪಾಯಿ ಗಾಂಧಿ ನೋಟಿನೊಂದಿಗೆ ಸಂತೆಗೆ ಹೋದರೂ ಅರ್ಧ ಬ್ಯಾಗು ತರಕಾರಿ ಬರುವುದಿಲ್ಲ. ಏಳೆಂಟು ವರ್ಷಗಳು ಕಳೆಯುವುದ ರೊಳಗೆ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ ನೋಡಿ~ ಎಂದು ಬೆಲೆ ಏರಿಕೆಯಿಂದ ಆಗಿರುವ ಸಮಸ್ಯೆಯನ್ನು ಅವರು `ಪ್ರಜಾವಾಣಿ~ ಬಳಿ ತೋಡಿಕೊಂಡರು.

ಕಳೆದ ವರ್ಷ ಇದೇ ಋತುವಿನಲ್ಲಿ ಟೊಮೆಟೊ ಕೆ.ಜಿ. 5ರಿಂದ 6 ರೂಪಾಯಿಗೆ ರೈತರು ಕೊಯ್ದು ನೀಡಿದ್ದಾರೆ. ಬೆಲೆ ಕುಸಿದಿದ್ದರಿಂದ ಕೆಲವೆಡೆ ಬೆಳೆಗಾರರು ಟೊಮೆಟೊ ಕೊಯ್ಲು ಮಾಡಲೇ ಇಲ್ಲ. ಈ ಬಾರಿ ಬೆಳೆಗಾರರ ಅದೃಷ್ಟವೂ ಖುಲಾಯಿಸಿದೆ. ಟೊಮೆಟೊಗೆ ಬಂಪರ್ ಬೆಲೆ ಬಂದಿದೆ. ರೈತರ ಜಮೀನಿನಲ್ಲೇ ಕೆ.ಜಿ. ಟೊಮೆಟೊಗೆ 20 ರೂಪಾಯಿ ನೀಡಿ ವರ್ತಕರು ಖರೀದಿಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಟೊಮೆಟೊ ಬೆಲೆ ಇನ್ನಷ್ಟು ಏರಿಕೆಯಾದರೂ ಅಚ್ಚರಿಪಡಬೇಕಿಲ್ಲ ಎನ್ನುತ್ತಾರೆ ರಾಜ್ಯ ರೈತ ಸಂಘದ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಶಶಿಧರ್.

ಗೆಡ್ಡೆಕೋಸು ಕೇಳುವವರೇ ದಿಕ್ಕಿರುತ್ತಿರಲಿಲ್ಲ. ಈಗ ಗೆಡ್ಡೆಕೋಸು ಕೂಡ ಕೆ.ಜಿ. 25 ರೂಪಾಯಿ ಆಗಿದೆ. 60 ಕೆ.ಜಿ. ಚೀಲಕ್ಕೆ 1200 ರೂಪಾಯಿ ಇದೆ. ಗೆಡ್ಡೆಕೋಸು ಬೆಳೆದವರಿಗೆ ಈ ಬಾರಿ ಕೈತುಂಬ ಲಾಭ ಸಿಗುತ್ತಿದೆ.

ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ ಹೋಬಳಿ, ಸಖರಾಯಪಟ್ಟಣ ಹೋಬಳಿಗಳಲ್ಲಿ ಅತೀ ಹೆಚ್ಚು ತರಕಾರಿ ಬೆಳೆಯಲಾಗುತ್ತಿತ್ತು. ಆದರೆ, ಈ ಬಾರಿ ವಿದ್ಯುತ್ ಅಭಾವದಿಂದ ಸಕಾಲಕ್ಕೆ ನೀರು ಉಣಿಸಲು ಆಗದೆ ತರಕಾರಿ ಬೆಳೆಗಳು ಕೈಕೊಟ್ಟಿವೆ. ಚಿಕ್ಕಮಗಳೂರು ತರಕಾರಿ ಮಾರುಕಟ್ಟೆಗೆ ಬೆಳಗಾವಿಯಿಂದ ಗೆಡ್ಡೆಕೋಸು ತರಿಸಿಕೊಂಡು ಮಾರಾಟ ಮಾಡುವ ಪರಿಸ್ಥಿತಿ ಬಂದೊದಗಿದೆ ಎನ್ನುತ್ತಾರೆ ಬೆಳವಾಡಿ ರೈತ ಶಿವಣ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.