ಭಾನುವಾರ, ಜೂನ್ 20, 2021
25 °C

ತವರಿನಲ್ಲಿ ಸಹಕಾರಿ ಕ್ಷೇತ್ರದ ಸಾಧನೆ ಕುಂಠಿತ:ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಇಡೀ ದೇಶಕ್ಕೆ ಸಹಕಾರ ತತ್ವವನ್ನು ತಿಳಿಸಿಕೊಟ್ಟ ಶ್ರೇಯಸ್ಸು ಅಖಂಡ ಧಾರವಾಡ ಜಿಲ್ಲೆಗೆ ಸಲ್ಲುತ್ತಿದ್ದರೂ, ಆ ಕ್ಷೇತ್ರದಲ್ಲಿ ನಮಗೆ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಸಾಧಿಸಲು ಸಾಧ್ಯವಾಗಿಲ್ಲ ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್. ಪಾಟೀಲ ಹೇಳಿದರು.ನಗರದ ಕೃಷ್ಣ ಕಲ್ಯಾಣ ಮಂಟಪದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್‌ಗಳ ಮಹಾಮಂಡಳ, ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳ ಹಾಗೂ ಹಾವೇರಿ ಜಿಲ್ಲಾ ಸಹಕಾರ ಯೂನಿಯನ್ ಆಶ್ರಯದಲ್ಲಿ ಬುಧವಾರ ನಡೆದ ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕ್‌ಗಳ ಮತ್ತು ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಸಿಇಓಗಳಿಗೆ ಕಾರ್ಯದಕ್ಷತೆ ವೃದ್ಧಿಸುವ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಾ ಗಾರದಲ್ಲಿ  ಅವರು ಮಾತನಾಡಿದರು.ಒಂದು ಶತಮಾನದ ಹಿಂದೆಯೇ ಗದಗ ಜಿಲ್ಲೆ ಕಣಗಿನಹಾಳದ ಸಿದ್ದನಗೌಡ ಪಾಟೀಲರು ಸಹಕಾರ ಕ್ಷೇತ್ರವನ್ನು ಹುಟ್ಟು ಹಾಕಿದರು. ನಂತರದ ವರ್ಷಗಳಲ್ಲಿ ಆ ಕುರಿತು ಹೆಚ್ಚಿನ ಕೆಲಸವಾಗಲಿಲ್ಲ. ಹೀಗಾಗಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಿಲ್ಲ ಎಂದರು.

ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಾಪೂಗೌಡ ಪಾಟೀಲ, ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳದ ನಿರ್ದೇಶಕ ಗುರು ರಾಜ ಹುಣಸೀಮರದ ಮಾತನಾಡಿ ದರು.ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಶಿವನಗೌಡ ಬಿರಾದಾರ ತರಬೇತಿಗೆ ಚಾಲನೆ ನೀಡಿದರು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ  ಎಸ್.ವೈ. ಪಾಟೀಲ, ನಿರ್ದೇಶಕರಾದ ಕೊಟ್ರೇಶಪ್ಪ ಬಸೇಗಣ್ಣಿ, ಶಿವಯೋಗಿ ಸ್ವಾಮಿ ಹಿರೇಮಠ, ಎಸ್.ಎಂ. ಪಾಟೀಲ, ಶಂಭಣ್ಣ ಬಸೇಗಣ್ಣಿ, ವಿಜಯೇಂದ್ರ ಕನವಳ್ಳಿ, ಮಂಜುಳಾ ಬಾಳಿಕಾಯಿ ಇತರರು ಹಾಜರಿದ್ದರು.ಮಹಿಳಾ ಸಹಕಾರ ಶಿಕ್ಷಣಾಧಿಕಾರಿ ಅನ್ನಪೂರ್ಣ ಹೊಸಮಠ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಮಲ್ಲಿಕಾ ರ್ಜುನ ಸಾತೇನಹಳ್ಳಿ ಸ್ವಾಗತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.