ಅಥಣಿ: ಅಕಾಲಿಕ ಮಳೆಯಿಂದಾದ ಬೆಳೆ ಹಾನಿ ವೀಕ್ಷಿಸಲು ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರವಾಸದಲ್ಲಿ ಕೆಲವು ಹಳ್ಳಿಗಳನ್ನು ತಹಶೀಲ್ದಾರ್ ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದ ರೈತರ ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರತಿಭಟನೆ ವೇಳೆ ತಹಶೀಲ್ದಾರ್ ಜೀಪ್ ತಡೆದು, ಕಲ್ಲು ತೂರಿ, ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿದ ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ರೈತ ಮುಖಂಡರಾದ ಕಿರಣಗೌಡ ಪಾಟೀಲ, ಮಹೇಶ ಕುಮಟಳ್ಳಿ, ಎಸ್.ಎಂ. ನಾಯಿಕ, ಅರ್ಷದ್ ಹುಸೇನ್ ಗದ್ಯಾಳ, ಅನಿಲ ಸುಣಧೋಳಿ, ಸುನೀಲ ಸಂಕ, ಮಹದೇವ ಕೋರೆ, ಸಲಾಂ ಕಲ್ಲಿ, ಬಸನಗೌಡ ಪಾಟೀಲ, ದೇಸಾಯಿ ಮತ್ತು ಇತರರ ವಿರುದ್ಧ ಅಥಣಿ ಸಬ್ಇನ್ಸ್ಪೆಕ್ಟರ್ ಎಸ್.ಎಂ. ಶಿರಗುಪ್ಪಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಅಲ್ಲದೇ ಈ ಪ್ರಕರಣದ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಬಸನಗೌಡ ಪಾಟೀಲ ಅವರನ್ನು ಶನಿವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ರಡ್ಡೇರಹಟ್ಟಿ, ಸಂಕೋನಹಟ್ಟಿ ಮತ್ತು ಅವರಖೋಡ ಗ್ರಾಮಗಳಿಗೂ ಮುಖ್ಯಮಂತ್ರಿ ಭೇಟಿ ಕಾರ್ಯಕ್ರಮವಿತ್ತು. ಆದರೆ ಈ ಹಳ್ಳಿಗಳಿಗೆ ಅವರು ಭೇಟಿ ನೀಡದೆ ಇರಲು ತಹಶೀಲ್ದಾರ್ ಅವರೇ ಕಾರಣವೆಂದು ಆರೋಪಿಸಿ ಶುಕ್ರವಾರ ರೈತರು ಪ್ರತಿಭಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.