ಸೋಮವಾರ, ಮೇ 23, 2022
20 °C

ತಹಶೀಲ್ದಾರ ಭರವಸೆ: ಸತ್ಯಾಗ್ರಹ ಹಿಂದಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೀನಗಡ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಗ್ರಾಮ ಹಿತರಕ್ಷಣಾ ಸಮಿತಿ ಇಲ್ಲಿನ ನಾಡ ಕಾರ್ಯಾಲಯದ ಎದುರು ಸೋಮವಾರದಿಂದ ಪ್ರಾರಂಭಿಸಿದ್ದ ಅನಿರ್ಧಿಷ್ಟ ಸರದಿ ಸತ್ಯಾಗ್ರಹವನ್ನು ಹಿಂಪಡೆಯಲಾಗಿದೆ.ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಹುನಗುಂದ ತಹಶೀಲ್ದಾರ ಶ್ರೀಮತಿ ಅಪರ್ಣಾ ಪಾವಟೆ ಅವರು, ಬೇಡಿಕೆಗಳನ್ನು ಶೀಘ್ರದಲ್ಲಿಯೇ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಸತ್ಯಾಗ್ರಹ ಕೈಬಿಡಬೇಕು ಎಂದು ಪ್ರತಿಭಟನಾಕಾರರ ಮನವೊಲಿಸಲು ಯಶಸ್ವಿಯಾದರು.ಉಪತಹಶೀಲ್ದಾರ ಎಫ್.ಬಿ. ಗೌಡರ, ಆಹಾರ ಇಲಾಖೆಯ ಎ.ಎಚ್.ಢವಳಗಿ, ಗ್ರಾಮಲೆಕ್ಕಾಧಿಕಾರಿ ಹೆಬ್ಬಳ್ಳಿ, ವಕೀಲ ರವಿಕುಮಾರ ಪಟ್ಟದಕಲ್ಲ, ಹಿತರಕ್ಷಣಾ ಮುಖಂಡರಾದ ಪಿ.ಜಿ. ಮೂಲಿಮನಿ, ಸಿ.ಆರ್. ಗೋಕಾವಿ, ಸಿದ್ದಣ್ಣ ಕಂಬಳಿ, ದೊಡಮನಿ, ಶೇಖರಪ್ಪ ಜಿರ್ಲಿ, ಧರ್ಮವ್ವ ಕಂಗಳ, ದಾನಮ್ಮ ಇಂಗಳಗಿ, ಮುತ್ತಣ್ಣ ಹಿರೇಮಠ, ಭಾಗವಹಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.