ರಾಯಚೂರು: ಸುಮಾರು ಇಪ್ಪತೈದು ವರ್ಷಗಳಿಂದಲೂ ಒಂದೇ ಸ್ಥಳದಲ್ಲಿ ವಾಸಿಸುವ ಈ ತಾಂಡದ ವಾಸಿಗಳಿಗೆ ಇದುವರೆಗೂ ಸೂರು ದೊರಕಿಲ್ಲ. ಧ್ವನಿ ಇಲ್ಲದೇ ಇರುವವರಿಗೆ ಸೂರೂ ಇಲ್ಲ ಎಂಬ ಸಂದೇಶ ಈ ತಾಂಡಾದ ಗುಡಿಸಲು ವಾಸಿಗಳ ಜೀವನ ಹೇಳುತ್ತದೆ.

ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕಲ್ಲೂರು ಗ್ರಾಮ ಪಂಚಾಯಿತಿ 9ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಮತ್ತು ಕಲ್ಲೂರು ಗ್ರಾಮದಿಂದ ಸ್ವಲ್ಪ ದೂರ ಇರುವ ಪುಟ್ಟ ಪುಟ್ಟ ಗುಡಿಸಲುಗಳಿರುವ ಬಾಲಾಜಿ ಕ್ಯಾಂಪ್ನ ಸ್ಥಿತಿ ಇದು.
ಈ ಬಾಲಾಜಿ ಕ್ಯಾಂಪ್ ತಾಂಡಾದಲ್ಲಿ ಸುಮಾರು 14 ಗುಡಿಸಲು ಇವೆ. ಗುಡಿಸಲು ವಾಸಿಗಳ ಕಾಯಕ ಕಟ್ಟಿಗೆ ಕಡಿದು ಮಾರಾಟ ಮಾಡುವುದು. ರಾಯಚೂರಿಗೆ ಬಂದು ಮಾರಾಟ ಮಾಡಿದರೆ ಜೀವನ. ಇಲ್ಲದೇ ಇದ್ದರೆ ಕಷ್ಟ. ಹೀಗೆ ಸುಮಾರು ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ. ಇಂದಿಗೂ ಗುಡಿಸಲು ವಾಸವೇ ಗತಿ.

ಮತದಾರರ ಪಟ್ಟಿಯಲ್ಲಿ ಈ ಗುಡಿಸಲು ವಾಸಿಗಳ ಹೆಸರು ಇದೆ! ಮತದಾನವನ್ನೂ ಮಾಡ್ತಾರೆ. ಹೀಗೆ ಹತ್ತಾರು ಚುನಾವಣೆಯಲ್ಲಿ ಮತ ಚಲಾಯಿಸಿದ್ದರೂ ಜೀವನ ಸ್ಥಿತಿಗತಿ ಬದಲಾಗಿಲ್ಲ. ಜನಪ್ರತಿನಿಧಿಗಳು ಕಣ್ತೆರೆದು ನೋಡಿಲ್ಲ ಎಂಬುದನ್ನು ಈಗಿನ ಸ್ಥಿತಿ ಬಿಚ್ಚಿಡುತ್ತದೆ.

ಸರ್ಕಾರ ಮಾತ್ರ ಗುಡಿಸಲು ರಹಿತ ರಾಜ್ಯ ನಿರ್ಮಾಣ ಮಾಡುವ ಘೋಷಣೆ ಮೊಳಗಿಸಿದೆ. ಜನಪ್ರತಿನಿಧಿಗಳೂ ಭರವಸೆ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಈ ತಾಂಡಾ ರಾಯಚೂರು ಮಾನ್ವಿ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಇದೆ. ಈ ರಸ್ತೆಯಲ್ಲಿ ಅನೇಕ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರು ಉನ್ನತ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಸಂಚಾರ ಮಾಡಿದ್ದರೂ ಯಾರಿಗೂ ತಮ್ಮ ತಾಂಡಾ ಕಣ್ಣಿಗೆ ಬಿದ್ದಿಲ್ಲ ಎಂದು ತಾಂಡ ನಿವಾಸಿಗಳ ಪ್ರಶ್ನಿಸುತ್ತಾರೆ.

ಈ ಮೊದಲು ಕಲ್ಮಲಾ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೊಳಪಟ್ಟಿತ್ತು. ಈಚೆಗೆ ವಿಧಾನಭಾ ಕ್ಷೇತ್ರಗಳ ಮರು ವಿಗಂಡಣೆ ಸಂದರ್ಭದಲ್ಲಿ ಮಾನ್ವಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿ ಬಂದಿದೆ. 2004ರಲ್ಲಿ ಈ ತಾಂಡದ ಜನರಿಗೆ ಆಶ್ರಯ ಯೋಜನೆಯಡಿಯಲ್ಲಿ ಮನೆ ನಿರ್ಮಾಣಕ್ಕಾಗಿ ಶಂಕುಸ್ಥಾಪನೆಯನ್ನು ಆಗ ಬಂಧಿಖಾನೆ ಸಚಿವರಾಗಿದ್ದ ರಾಜಾ ಅಮರೇಶ್ವರ ನಾಯಕ ನೆರವೇರಿಸಿದ್ದರು.

ಆದರೆ, ಶಂಕಸ್ಥಾಪನೆಗೆ ಹಾಕಿದ ಕಲ್ಲು ಬೇಲಿಯಲ್ಲಿ ಮುಚ್ಚಿ ಹೋಯ್ತೆ ಹೊರತುತಮ್ಮಂಥ ಗುಡಿಸಲು ವಾಸಿಗಳ ಮನೆ ಕನಸು ನನಸಾಗಿಲ್ಲ ಎಂದು ತಾಂಡಾವಾಸಿಗಳು ನೊಂದು ನುಡಿಯುತ್ತಾರೆ.

ಸರ್ಕಾರದ ಜಾಗೆಯಲ್ಲಿದ್ದರೂ ತಾಂಡದ ಜನರಿಗೆ ಮನೆ ನಿರ್ಮಾಣ ಮಾಡಿಕೊಡುವಲ್ಲಿ ಅನೇಕ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಗಮನಹರಿಸಿಲ್ಲ ಎಂದು ತಾಂಡದ ನಿವಾಸಿ ಸತ್ಯಪ್ಪ ತಿಳಿಸುತ್ತಾರೆ.

ಈ ತಾಂಡದಲ್ಲಿರುವ ಜನರಿಗೆ ನಿವೇಶನಗಳನ್ನು ಸರ್ಕಾರ ನೀಡಿದೆ. ತಾಂಡದಲ್ಲಿರುವ 20ರಿಂದ 25 ಮಕ್ಕಳು ಕಸ್ಬೆ ಕ್ಯಾಂಪ್ನಲ್ಲಿರುವ ಸರ್ಕಾರಿ ಶಾಲೆಗೆ ನಡೆದುಕೊಂಡು ಹೋಗುತ್ತಾರೆ. ಶಾಲೆ ಹಾಗೂ ತಾಂಡಾ ನಿವಾಸಿಗಳಿಗೆ ವಿದ್ಯುತ್ ಕಲ್ಪಿಸಿಕೊಡಬೇಕು. ಇದರಿಂದ ಇಲ್ಲಿನ ನಿವಾಸಿಗಳ ಮಕ್ಕಳಿಗೆ ಶಿಕ್ಷಣ ದೊರಕಿಸಿಕೊಡಲು ಸಹಕಾರಿಯಾಗುತ್ತದೆ ಎಂದು ಸೋಮಾ ನಾಯ್ಕ ಅವರು ಒತ್ತಾಯಿಸುತ್ತಾರೆ.
ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ತಾಂಡದ ಜನರಿಗೆ ಸೂರು ಕಲ್ಪಿಸಿಕೊಟ್ಟು ಮಾನವೀಯತೆ ಮೆರೆಯುತ್ತಾರೆಯೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.