ಮಂಗಳವಾರ, ಮೇ 24, 2022
31 °C

ತಾಂಬಾದಲ್ಲಿ ನಾಡದೇವಿ ಉತ್ಸವ: ಚಂಡಿ ಹೋಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಂಬಾ: ಸಂಸಾರದ ಜಂಜಾಟದಿಂದ ಸ್ವಲ್ಪ ಹೊರಬಂದು ದೇವರಲ್ಲಿ ಅನನ್ಯ ಭಕ್ತಿ ಭಾವದಿಂದ ನಮಿಸಿದಾಗ ಮನಸ್ಸು ಉಲ್ಲಾಸಗೊಳ್ಳುತ್ತದೆ. ಮಾನವನ ಬದುಕಿನಲ್ಲಿ  ಮನಸ್ಸಿನ ಕಾಮನೆಗಳ ಬಗ್ಗೆ ಹಿಡಿತವಿರಬೇಕು. ಅಂದಾಗ ಜೀವನ ಮುಕ್ತಿ ಪಥದತ್ತ ಕೊಂಡೊಯ್ಯಲು ಸಾಧ್ಯ ಎಂದು ಜಿ.ಪಂ.ಸದ್ಯಸ್ಯ ದೇವಾನಂದ ಚವ್ಹಾಣ ಹೇಳಿದರು.ಗ್ರಾಮದ ಅಂಬಾಭವಾನಿ ಎಜ್ಯುಕೇಶನ್ ಟ್ರಸ್ಟ್ ಆವರಣದಲ್ಲಿ ನವರಾತ್ರಿ ಉತ್ಸವದ ನಿಮಿತ್ತ ಹಮ್ಮಿಕೊಂಡಿರುವ `ನಮ್ಮೂರ ನಾಡದೇವಿ ಉತ್ಸವ~ದ ಚಂಡಿ ಹೋಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

 

ನಾಡದೇವಿ ಮಂದಿರದಲ್ಲಿ ನಡೆದ ಚಂಡಿ ಹೋಮ ಕಾರ್ಯಕ್ರಮದಲ್ಲಿ ಅರ್ಚಕ ಕೃಷ್ಣಭಟ ಆಚಾರ್ಯ, ಅಚ್ಯುತ್ ಆಚಾರ್ಯ ಅವರು ನಾಡದೇವಿಗೆ ಮಹಾರುದ್ರಾಭಿಷೇಕ ಬಿಲ್ವಾರ್ಚನೆ, ಹೋಮ ಹವನ ಕಾರ್ಯಕ್ರಮ ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಎಫ್.ಎನ್.ಚವ್ಹಾಣ, ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಸುನೀತಾ ಚವ್ಹಾಣ, ಗ್ರಾಮ ಪಂಚಾಯಿತಿ ಸದಸ್ಯೆ ಮಮತಾ ಚವ್ಹಾಣ, ರವಿಕುಮಾರ ಚವ್ಹಾಣ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.