ಚನ್ನಗಿರಿ: ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿ ಹಾಗೂ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶೀಲಾ ಗದ್ದಿಗೇಶ್ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೊದಲು ತಾಲ್ಲೂಕು ಪಂಚಾಯ್ತಿ ಕಚೇರಿಗೆ ಭೇಟಿ ನೀಡಿ ಹಾಜರಿ ಪುಸ್ತಕ ಪರಿಶೀಲನೆ ನಡೆಸಿ ಹಾಜರಿ ಪುಸ್ತಕದಲ್ಲಿ 17 ಸಿಬ್ಬಂದಿ ಸಹಿ ಹಾಕದೇ ಇರುವುದನ್ನು ಗಮನಿಸಿ ಅವರಿಗೆ ನೋಟಿಸ್ ಜಾರಿ ಮಾಡುವಂತೆ ಅಧಿಕಾರಿಗೆ ಆದೇಶಿಸಿದರು.

ಸಮಯಕ್ಕೆ ಸರಿಯಾಗಿ ಸಿಬ್ಬಂದಿ ಕೆಲಸಕ್ಕೆ ಹಾಜರಾಗಬೇಕು. ಕಡ್ಡಾಯವಾಗಿ ಮೊದಲು ಹಾಜರಿ ಪುಸ್ತಕದಲ್ಲಿ ಸಹಿ ಮಾಡಬೇಕು. ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ತುರ್ತು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಎಸ್.ಟಿ. ಬಸವರಾಜಪ್ಪ ಅವರಿಗೆ ಸೂಚನೆ ನೀಡಿದರು.

ತಾಲ್ಲೂಕಿನ 61 ಗ್ರಾಮ ಪಂಚಾಯ್ತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ರೂ 22 ಕೋಟಿಗಳ ವಿವಿಧ ಕಾಮಗಾರಿಗಳನ್ನು ಮಾಡಲಾಗಿದೆ. ಇನ್ನು ರೂ 5.38 ಕೋಟಿ ಅನುದಾನ ಬಿಡುಗಡೆಯಾಗಬೇಕಿದೆ. ಇದರಲ್ಲಿ 557 ಕಾರ್ಮಿಕರಿಗೆ ಕೂಲಿ ನೀಡುವುದು ಬಾಕಿ ಉಳಿದಿದೆ ಎಂದು ಇಒ ಎಸ್.ಟಿ. ಬಸವರಾಜಪ್ಪ ಮಾಹಿತಿ ನೀಡಿದರು.

ನಂತರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಹಾಜರಿ ಪುಸ್ತಕವನ್ನು ಪರಿಶೀಲಿಸಿ ಮಾತನಾಡಿ ಇಲ್ಲೂ ಕೂಡಾ ಇಬ್ಬರು ಸಿಬ್ಬಂದಿ ಕರ್ತವ್ಯಕ್ಕೆ ಗೈರುಹಾಜರಾಗಿದ್ದಾರೆ. ಮೊದಲನೇ ಸಾರಿ ಎಚ್ಚರಿಕೆ ಕೊಡುತ್ತಿದ್ದೇನೆ. ಮತ್ತೆ ಹೀಗೆ ಆಗದಂತೆ ನೋಡಿಕೊಳ್ಳಬೇಕು. ಡೆಂಗೆ ಜ್ವರ ಎಲ್ಲ ಕಡೆ ಹರಡುತ್ತಿದ್ದು, ಇದರ ನಿಯಂತ್ರಣದ ಬಗ್ಗೆ ಜಾಗೃತಿ ವಹಿಸುವುದು ಅಗತ್ಯವಾಗಿದೆ. ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಿ, ರೋಗಿಗಳಿಗೆ ಸ್ಪಂದಿಸುವಂತೆ ವೈದ್ಯರಿಗೆ ಸೂಚಿಸಿದರು.

ಪ್ರತಿವರ್ಷ ಈ ಆರೋಗ್ಯ ಕೇಂದ್ರಕ್ಕೆ ರೂ 20 ಲಕ್ಷ ಮೌಲ್ಯದ ಗುಳಿಗೆ, ಔಷಧಿಗಳು ಸರಬರಾಜು ಆಗುತ್ತದೆ. ಇನ್ನು ರೂ 17.50 ಲಕ್ಷ ಮೌಲ್ಯದ ಗುಳಿಗೆ, ಔಷಧಿಗಳು ಸರಬರಾಜು ಆಗಬೇಕಾಗಿದೆ. ಆರೋಗ್ಯ ಕೇಂದ್ರದ ಸ್ವಚ್ಛತೆಯನ್ನು ನಿರ್ವಹಿಸಲು ಬಿಕೆಆರ್ ಸ್ವಾಮಿ ಎಂಬ ಗುತ್ತಿಗೆದಾರರು ಗುತ್ತಿಗೆಯನ್ನು ಪಡೆದುಕೊಂಡಿದ್ದು, ಇದುವರೆಗೆ ಅವರು ಈ ಆಸ್ಪತ್ರೆಯ ಸ್ವಚ್ಚತೆಗೆ ಬಂದಿರುವುದಿಲ್ಲ ಎಂದು ಆಡಳಿತ ವೈದ್ಯಾಧಿಕಾರಿ ಡಾ. ರಾಜಪ್ಪ ಮಾಹತಿ ನೀಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಜಿ. ಮರುಳಸಿದ್ದಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಎ.ಬಿ. ಶಿವಕುಮಾರ್, ಸದಸ್ಯರಾದ ಎಸ್.ಕೆ. ಹಾಲೇಶಪ್ಪ, ಗಣೇಶ್ ನಾಯ್ಕ, ಶಿವಲಿಂಗಪ್ಪ, ಗದ್ದಿಗೇಶ್, ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.