ತಾಯಂದಿರ ಪಾದ ಪೂಜೆ

ಮುಳಬಾಗಲು: ತಾಯಂದಿಯರು ಹೆಣ್ಣು ಮಕ್ಕಳೊಂದಿಗೆ ಸ್ನೇಹದಿಂದ ವರ್ತಿಸಿ ಮನಸ್ಸನ್ನು ಗೆಲ್ಲುವು ಮೂಲಕ ಅನಾಹುತಗಳನ್ನು ತಪ್ಪಿಸಬಹುದು ಎಂದು ಶಾಲೆಯ ಕಾರ್ಯದರ್ಶಿ ಕೆ.ರಾಮಚಂದ್ರ ಹೇಳಿದರು.
ತಾಲ್ಲೂಕಿನ ನಂಗಲಿ ಗ್ರಾಮದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಈಚೆಗೆ ನಡೆದ ತಾಯಂದಿಯರ ಸಭೆಯಲ್ಲಿ ಮಾತನಾಡಿದರು.
ಮನೆಯಲ್ಲಿ ಮಕ್ಕಳ ಮೇಲೆ ಹಲವು ವಿಷಯಗಳಲ್ಲಿ ಅಧಿಕ ಒತ್ತಡ ಹೇರದೆ ತಾಳ್ಮೆಯಿಂದ ತಿಳಿವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.
ಮನೆಯಲ್ಲಿ ಪೋಷಕರು ಶಾಲಾ ತರಗತಿಗಳಲ್ಲಿ ನಡೆದ ಪಾಠ ಪ್ರವಚನಗಳ ಬಗ್ಗೆ ಚರ್ಚಿಸಬೇಕು. ಹೆಣ್ಣು ಮಕ್ಕಳ ಬಗ್ಗೆ ತಾಯಂದಿಯರು ಜಾಗರೂಕತೆಯಿಂದ ನಿರ್ಣಯಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದ ಆಂಗ್ಲ ಶಾಲೆ ಮುಖ್ಯ ಶಿಕ್ಷಕ ಡಿ.ಸಿ.ಜನಾರ್ದನ್, ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಂ.ಶ್ರೀನಿವಾಸ್, ಶಿಕ್ಷಕರಾದ ಬಾಬು, ಸುಬ್ರಮಣಿ, ದೇವರಾಜ್, ಮಾನಸಾ ಮತ್ತಿತರರು ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.