ಬಂಟ್ವಾಳ: ಸಮೀಪದ ಕುಳ ಗ್ರಾಮದ ಕಲ್ಲಂದಡ್ಕ ಎಂಬಲ್ಲಿ ಶುಕ್ರವಾರ ತಡ ರಾತ್ರಿ ಮಾನಸಿಕ ಅಸ್ವಸ್ಥನಾದ ಕೃಷ್ಣಪ್ಪ (30) ತನ್ನ ತಾಯಿ ಭವಾನಿ (60)ಗೆ ಸೀಮೆಎಣ್ಣೆ ಸುರಿದ್ದು ಬೆಂಕಿ ಹಚ್ಚಿ ಕೊಲೆ ಮಾಡಿ, ತಾನೂ ಅದೇ ಬಗೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಸ್ಥಳೀಯರ ಪ್ರಕಾರ ಕಳೆದ ನಾಲ್ಕು ತಿಂಗಳಿನಿಂದ ಕೃಷ್ಣಪ್ಪ ಹೆಂಡತಿಯನ್ನು ಬಿಟ್ಟು ತಾಯಿಯೊಂದಿಗೆ ಇಲ್ಲಿ ವಾಸವಾಗಿದ್ದನು. ಮಾನಸಿಕ ರೋಗಿಯಾದ ಇತನು ಕೂಲಿ ಕಾರ್ಮಿಕನಾಗಿದ್ದು, ಕುಡಿತದ ಚಟಕ್ಕೆ ದಾಸನಾಗಿದ್ದನು. ತಾಯಿ ಭವಾನಿ ಅಂಗವಿಕಲೆಯಾಗಿದ್ದು, ಹಲವು ವರ್ಷಗಳಿಂದ ಅನಾರೋಗ್ಯದಿಂದ ನರಳುತ್ತಿದ್ದಳು.

ತಾಯಿಯ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುವುದನ್ನು ಕಂಡ ಆತನು ತಾಯಿ ಮಂಚದಲ್ಲಿ ಮಲಗಿರುವಾಗಲೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿ, ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.