ಹೊಸನಗರ: ತಾಲ್ಲೂಕಿನಲ್ಲಿ ಕಳೆದ 4 ವರ್ಷಗಳಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಕಲ್ಪದ ಫಲವಾಗಿ ಸುಮಾರು ್ಙ 800 ಕೋಟಿ ಅಭಿವೃದ್ಧಿ ಕಾಮಗಾರಿ ನಡೆದಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಭಾನುವಾರ ತಾಲ್ಲೂಕಿನ ಮುಂಬಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ರಾಜ್ಯ ಬಜೆಟ್ ಅನುದಾನದಲ್ಲಿ ಸುಮಾರು ರೂ650 ಲಕ್ಷ ವೆಚ್ಚದ ರಾಜ್ಯ ಹೆದ್ದಾರಿ 26ರ ವಿಸ್ತರಣೆ ಮತ್ತು ರೂ70 ಲಕ್ಷ ವೆಚ್ಚದ ಮುಂಬಾರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಎರಡು ತಾಲ್ಲೂಕುಗಳಿಗೆ ಹಬ್ಬಿರುವ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಸಾಗರ ಮತ್ತು ಹೊಸನಗರ ತಾಲ್ಲೂಕುಗಳಿಗೆ ಸಮ ಹಾಗೂ ಪಕ್ಷಾತೀತವಾಗಿ ಅಭಿವೃದ್ಧಿ ಹಣ ವಿತರಿಸಿರುವುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಮುಂಬಾರು ಗ್ರಾ.ಪಂ. ಉಪಾಧ್ಯಕ್ಷೆ ಸೀತಮ್ಮ ಗಣಪ ನಾಯ್ಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ, ತಾ.ಪಂ. ಉಪಾಧ್ಯಕ್ಷೆ ಶಾಂತಾ ಶೇಖರಪ್ಪ, ಸದಸ್ಯೆ ಜಯಲಕ್ಷ್ಮೀ ವಿ. ಆಚಾರ್, ಎಂ. ಗುಡ್ಡೆಕೊಪ್ಪ ಗ್ರಾ.ಪಂ. ಉಪಾಧ್ಯಕ್ಷೆ ಭವಾನಿ ಕೃಷ್ಣಮೂರ್ತಿ, ಸದಸ್ಯ ಮಂಜಪ್ಪ, ಕೆ.ಟಿ. ತಿಮ್ಮಪ್ಪ ಹಾಜರಿದ್ದರು.

ದೇವೇಂದ್ರಪ್ಪ ಸ್ವಾಗತಿಸಿದರು. ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಕೆ.ಟಿ. ತಿಮ್ಮಪ್ಪ ವಂದಿಸಿದರು.
ಕಾಂಗ್ರೆಸ್ನಿಂದ ಬಹಿಷ್ಕಾರ: ಶಿಷ್ಟಾಚಾರದಂತೆ ಶಾಸಕ ಕಿಮ್ಮನೆ ರತ್ನಾಕರ್ ಅವರನ್ನು ಸಮಾರಂಭಕ್ಕೆ ಆಹ್ವಾನಿಸದೇ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಜಿ.ಪಂ. ಸದಸ್ಯೆ ಜ್ಯೋತಿ ಚಂದ್ರಮೌಳಿ, ಸಭೆಯ ಅಧ್ಯಕ್ಷತೆ ವಹಿಸಬೇಕಾಗಿದ್ದ ಮುಂಬಾರು ಗ್ರಾ.ಪಂ. ಅಧ್ಯಕ್ಷೆ ಜಯಮ್ಮ ಚಂದ್ರಶೇಖರ್, ಸದಸ್ಯರಾದ ಕೆ.ಜಿ. ನಾಗರಾಜಗೌಡ, ಅನ್ನಪೂರ್ಣಾ ಅಣ್ಣಪ್ಪ, ರೇಣುಕಾ ರಾಜಪ್ಪ, ಸಿ.ಬಿ. ಜೋಸೆಫ್ ಸಭೆಗೆ ಬಹಿಷ್ಕಾರ ಹಾಕಿದ ಘಟನೆ ನಡೆದಿದೆ.

ಬಾಡೂಟಕ್ಕೆ ಅಭಿವೃದ್ಧಿ ಹಣ: ಕಾಮಗಾರಿಯ ವೆಚ್ಚ ಕೋಟಿಗಳಲ್ಲಿ ಇದೆ. ಚುನಾವಣೆಯೂ ಸಮೀಪಿಸುತ್ತಿದೆ ಎನ್ನುವ ಕಾರಣದಿಂದಾಗಿ ಸಾವಿರಾರು ಜನಕ್ಕೆ ಬಾಡೂಟ ಹಾಗೂ ಸಸ್ಯಾಹಾರಿ ಊಟಕ್ಕೆ ಗುತ್ತಿಗೆದಾರರಿಂದ ಹಣ ಪಡೆದು ಹಾಕಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.

ನಗರ ಹೋಬಳಿಯಲ್ಲಿ ಇದೇ ಅನುದಾನದ ರಾಜ್ಯ ಹೆದ್ದಾರಿ 26 ವಿಸ್ತರಣೆ ಉದ್ಘಾಟನೆಯನ್ನು ಶಾಸಕ ಕಿಮ್ಮನೆ ರತ್ನಾಕರ್ ಈಚೆಗೆ ಕೇವಲ ಒಂದು ಕೆ.ಜಿ. ಸಿಹಿ ವಿತರಿಸಿ, ಸರಳವಾಗಿ ನೆರವೇರಿಸಿದರು.ಆದರೆ, ಶಾಸಕ ಗೋಪಾಲಕೃಷ್ಣ ಬೇಳೂರು ಬಾಡೂಟಕ್ಕೆ ಅಭಿವೃದ್ಧಿ ಹಣವನ್ನು ಕಣ ಹಬ್ಬ, ಹಕ್ಕಲೂಟ, ಭೂರಿ ಭೋಜಕ್ಕೆ ಹೆಸರಿನಲ್ಲಿ ವಿನಿಯೋಗಿಸುವುದು ಸಮಂಜಸ ಅಲ್ಲ ಎಂದು ಅವರು ಖಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.