ಶನಿವಾರ, ಏಪ್ರಿಲ್ 17, 2021
32 °C

ತಾಳಗುಪ್ಪ-ಬೆಂಗಳೂರು ರೈಲು ಸೇವೆ ಮರೀಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಳಗುಪ್ಪ-ಬೆಂಗಳೂರು ರೈಲು ಸೇವೆ ಮರೀಚಿಕೆ

ಕಾರ್ಗಲ್: ತಾಳಗುಪ್ಪ- ಬೆಂಗಳೂರು ಮಧ್ಯದ ರೈಲು ಸೇವೆ ಇನ್ನೂ ಮರೀಚಿಕೆ ಆಗಿದೆ.

 ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾಗಿದ್ದ ತಾಳಗುಪ್ಪ, ಶಿವಮೊಗ್ಗ ರೈಲು ಸಂಚಾರ ಮೀಟರ್‌ಗೇಜ್ ಮಾರ್ಗದಲ್ಲಿ ಸೇವೆ ಸಲ್ಲಿಸುತ್ತಾ 2005ನೇ ಇಸವಿಯವರೆಗೂ ಸಾಗಿ ಬಂದಿತ್ತು. ಈ ಮಧ್ಯೆ ಸಂಚಾರ ಮಾರ್ಗವನ್ನು ಬ್ರಾಡ್‌ಗೇಜ್ ಆಗಿ ಪರಿವರ್ತಿಸುವಂತೆ ಅನೇಕ ಜನಪರ ಹೋರಾಟಗಳು ನಾಡಿನ ಪ್ರಖ್ಯಾತ ಸಾಹಿತಿ ನಾ. ಡಿಸೋಜ ನೇತೃತ್ವದಲ್ಲಿ ನಡೆದವು.

 

ಹೋರಾಟಗಳ ಪರಿಣಾಮ ಮತ್ತು ಸರ್ಕಾರಗಳ ಸಂಕಲ್ಪವೇನೋ ಎಂಬಂತೆ 2011ರಲ್ಲಿ ಶಿವಮೊಗ್ಗ ತಾಳುಗುಪ್ಪ ರೈಲ್ವೆ ಮಾರ್ಗ ಬ್ರಾಡ್‌ಗೇಜ್ ಆಗಿ ಪರಿವರ್ತನೆಗೊಂಡು ಆರಂಭದಲ್ಲಿ ಮೈಸೂರು ತಾಳಗುಪ್ಪ ರೈಲು ಸಂಚಾರ ಆರಂಭವಾಯಿತು. ಆದರೆ, ಈ ಭಾಗದ ಜನರ ಬಹುನಿರೀಕ್ಷಿತ ತಾಳುಗುಪ್ಪ, ಬೆಂಗಳೂರು ಸಂಚಾರ ಮಾತ್ರ ಮರೀಚಿಕೆಯಾಗಿಯೇ ಉಳಿದು ಹೋಗಿದೆ!



3-4 ತಿಂಗಳುಗಳಿಂದ ಇನ್ನೇನು ಬೆಂಗಳೂರು, ತಾಳಗುಪ್ಪ ರೈಲ್ವೆ ಸಂಚಾರ ನಾಳೆಯಿಂದ ಆರಂಭ, ಮುಂದಿನ ವಾರದಿಂದ ಆರಂಭ, 1ನೇ ತಾರೀಕಿನಿಂದ ಆರಂಭ ಹೀಗೆ ಅನೇಕ ಊಹಾಪೋಹಗಳು  ಗಾಳಿ ಸುದ್ದಿಯಾಗಿ ಹರಡಿಕೊಂಡಿತ್ತು.



ತಾಳಗುಪ್ಪದ ರೈಲುನಿಲ್ದಾಣದ ವ್ಯವಸ್ಥಾಪಕರಲ್ಲಿ ಈ ಬಗ್ಗೆ ವಿಚಾರಿಸಿದರೆ ತಮಗೇ ಯಾವುದೇ ಆದೇಶಗಳು ಅಥವಾ ಮುನ್ಸೂಚನೆಗಳು ಈವರೆಗೂ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.



ಈವರೆಗೂ ಈ ಭಾಗದ ನಾಗರಿಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅವಶ್ಯಕತೆಯಿರುವ ಬೆಂಗಳೂರು ಸಂಪರ್ಕದ ಸಂಚಾರ ಮಾರ್ಗ ಆರಂಭವಾಗದೇ ಭಾರೀ ನಿರಾಸೆಯನ್ನು ರೈಲು ಇಲಾಖೆ ಉಂಟು ಮಾಡಿರುವುದು ಸತ್ಯವಾದ ವಿಚಾರ ಆಗಿದೆ ಎಂದು ಈ ಭಾಗದ ಹೋರಾಟಗಾರರು ತಿಳಿಸಿದ್ದಾರೆ.



ಜೋಗ ಜಲಪಾತ ಧುಮ್ಮಿಕ್ಕುತ್ತಿದ್ದು, ನಾಡಿನ ಎಲ್ಲೆಡೆಯಿಂದ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಇವರಲ್ಲಿ ಮುಖ್ಯವಾಗಿ ಶಿವಮೊಗ್ಗ, ತುಮಕೂರು, ಬೆಂಗಳೂರು ಸುತ್ತಮುತ್ತಲಿನ ಭಾಗದವರೇ ಹೆಚ್ಚು.



ಪ್ರವಾಸಿಗರ ಹಿತದೃಷ್ಟಿಯಿಂದಲಾದರೂ ಬೆಂಗಳೂರು ತಾಳಗುಪ್ಪ ರೈಲು ಸಂಚಾರವನ್ನು ರೈಲ್ವೆ ಇಲಾಖೆ ಕೂಡಲೇ ಆರಂಭಿಸಲಿ ಎಂಬುದು ಈ ಭಾಗದ ಜನರ ಆಶಯ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.