ಶನಿವಾರ, ಜೂನ್ 12, 2021
23 °C

ತೀವ್ರಗಾಮಿ ಚಟುವಟಿಕೆಗೆ ಸಹಕಾರ ಆರೋಪ: ಭಾರತೀಯನ ಗಡೀಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಗಪುರ (ಪಿಟಿಐ): ಹಿಂಸಾಚಾರ­ದಿಂದ ನಲುಗಿರುವ ಸಿರಿಯಾದಲ್ಲಿ ತೀವ್ರಗಾಮಿ ಚಟುವಟಿಕೆ ಕೈಗೊಳ್ಳಲು ವ್ಯಕ್ತಿಯೊ­ಬ್ಬನಿಗೆ ಸಹಕಾರ ನೀಡಿದ ಆರೋಪದ ಮೇರೆಗೆ ಭಾರತೀಯ ಮೂಲದ ಗುಲ್‌ ಮೊಹಮ್ಮದ್‌ ಮಾರ್ಸಾಚಿ  ಮರೈಕಾರ್ ಎಂಬಾತ­ನನ್ನು ಸಿಂಗಪುರ ಅಧಿಕಾರಿಗಳು ಗಡೀಪಾರು ಮಾಡಿದ್ದಾರೆ.ವಿಧ್ವಂಸಕ ಕೃತ್ಯ ನಡೆಸಲು ಹಜಾ ಫಕ್ರುದ್ದೀನ್‌ ಉಸ್ಮಾನ್‌ ಅಲಿ ಎಂಬಾತ ಹೊಂಚು ಹಾಕಿದ್ದು, ಈತನ ಯೋಜನೆ­ಗಳಿಗೆ ಗುಲ್‌ ಮೊಹಮ್ಮದ್‌ ಸಹಕಾರ ನೀಡಿದ್ದ. ಗುಲ್‌ ಮೊಹಮ್ಮದ್‌ ಸಿಂಗಾಪು­ರದ ಕಾಯಂ ನಿವಾಸಿಯಾಗಿದ್ದು ಸ್ಥಳೀಯ ಗಣಕಯಂತ್ರಗಳ ನಿರ್ವಹಣೆಯ ಕೆಲಸದಲ್ಲಿದ್ದಾನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.