ತುಮಕೂರು: ಜಿಲ್ಲೆಯಲ್ಲಿ ಮಳೆ ಮುಗಿಲಲ್ಲೇ ಉಳಿದಿದೆ. ಆಗಸದಲ್ಲಿ ಕಪ್ಪು ಮೋಡಗಳು ದಟ್ಟೈಸಿದರೂ; ಆಷಾಢ ಮಾಸದ ಗಾಳಿ ಎಲ್ಲವನ್ನೂ ಚದುರಿಸುತ್ತಿದೆ. ಭರಣಿ ಮಳೆ ಹೊರತುಪಡಿಸಿದರೆ ಇದುವರೆಗೆ ಉಳಿದ ಯಾವ ಮಳೆಯೂ ಧರೆಗಿಳಿದಿಲ್ಲ.

ಮಳೆ ನಿರೀಕ್ಷೆಯಲ್ಲೆ ಬಸವಳಿದ ರೈತ ಸಮೂಹ; ಕೊನೆ ಪ್ರಯತ್ನವಾಗಿ ದೇವರ ಮೊರೆ ಹೋಗಿದೆ. ಎಲ್ಲ ಕಡೆ ವಿಶೇಷ ಪೂಜೆ-ಹೋಮ ಹವನ ಬಿರುಸಿನಿಂದ ನಡೆಯುತ್ತಿವೆ. ಕೆಲವೆಡೆ ಮಳೆರಾಯನ ಆರಾಧನೆ ನಿತ್ಯವೂ ನಡೆಯುತ್ತಿದೆ. ವರುಣನ ಓಲೈಕೆಗಾಗಿ ಕತ್ತೆ-ಕಪ್ಪೆಗಳ ಮದುವೆಯೂ ಜರುಗುತ್ತಿದೆ. ವರುಣ ಮಾತ್ರ ಜಿಲ್ಲೆಯ ರೈತರ ಮೇಲೆ ಕೃಪೆ ತೋರದಿರುವುದು ಚಿಂತೆ ಹೆಚ್ಚಿಸಿದೆ.

ಆಗಸದತ್ತ ನೆಟ್ಟ ನೋಟ ಬೀರುತ್ತಿದ್ದ ರೈತರ ಕಂಗಳಲ್ಲಿ ಭರವಸೆಯ ಆಶಾಕಿರಣ ಬತ್ತಿದೆ. ಎತ್ತ ನೋಡಿದರೂ ಬೀಳು ಬಿದ್ದಿರುವ ಹೊಲಗಳು. ಕಣ್ಣಿಗೆ ಕಾಣುವಷ್ಟು ದೂರವೂ ಬರಿ ಒಣ ಭೂಮಿ ದರ್ಶನ. ಮಧ್ಯಾಹ್ನದ ವೇಳೆಗೆ ಇವತ್ತು ಮಳೆ ಬರುತ್ತದೆಯೇನೋ ಎಂಬಂತೆ ಭಾಸವಾಗುವ ಮೋಡಗಳು ಸಂಜೆ ವೇಳೆಗೆ ಹಾಗೆ ಕರಗಿ ಹೋಗುವುದನ್ನು ಕಾಣುವ ರೈತರು ಆತಂಕಕ್ಕೆ ಒಳಗಾಗಿದ್ದಾರೆ..ಇದು ಜಿಲ್ಲೆಯಾದ್ಯಂತ ಕಂಡುಬರುವ ಚಿತ್ರಣ.

ಜೂನ್ ಶೇಂಗಾ ಬಿತ್ತನೆಗೆ ಸಕಾಲ. ಮುಂಗಾರು ಆರಂಭದ ಬಿತ್ತನೆ ಇಳುವರಿ ಅಧಿಕ ಎಂಬ ನಂಬಿಕೆಯಲ್ಲಿ ಶಿರಾ, ಪಾವಗಡ, ಮಧುಗಿರಿ, ಕೊರಟಗೆರೆ ತಾಲ್ಲೂಕಿನ ರೈತರು ಸಕಲ ಸಿದ್ಧತೆ ಮಾಡಿಕೊಂಡಿದ್ದರು.

ಚಿನ್ನಾಭರಣ ಅಡ ಇಟ್ಟು, ಸಾಲ ಮಾಡಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿದ್ದರು. ಆದರೆ, ಮಳೆ ಬಂದ ಕೂಡಲೆ ಬಿತ್ತನೆ ಮಾಡುವ ರೈತರ ಕನಸು ನನಸಾಗಿಲ್ಲ. ಈ ಭಾಗದಲ್ಲಿ ಕೃಷಿ ಚಟುವಟಿಕೆಗೆ ಪೂರಕವಾದ ಮಳೆ ಬಂದು ಎರಡು ತಿಂಗಳು (65 ದಿನ) ಕಳೆದಿದೆ. ಮಳೆ ಬೀಳದ ಕಾರಣ ಬಹುತೇಕ ಕುಟುಂಬಗಳು ಸಾಲ ಮಾಡಿ ಖರೀದಿಸಿದ್ದ ಬಿತ್ತನೆ ಬೀಜ, ಗೊಬ್ಬರವನ್ನು ಸಿಕ್ಕಷ್ಟು ಬೆಲೆಗೆ ಮಾರಿ ಗುಳೆ ಹೊರಡಲು ಸಿದ್ಧರಾಗುತ್ತಿದ್ದಾರೆ.

ಶೇಂಗಾ ಬೆಳೆ ಇತಿಹಾಸ ನೋಡಿದರೆ, ಇದುವರೆಗೂ ಜೂನ್ನಲ್ಲಿ ಬಿತ್ತನೆ ನಡೆಸಿದವರಿಗೆ ಮಾತ್ರ ಎಂಥ ದುರ್ಬರ ಸ್ಥಿತಿಯಲ್ಲೂ ಸ್ವಲ್ಪ ಫಸಲು ಕೈ ಸೇರಿದೆ. ಜುಲೈನಲ್ಲಿನ ಬಿತ್ತನೆ ಜೂಜಾಟವಿದ್ದಂತೆ. ಶೇಂಗಾ ಕಾಯಿ ಕಟ್ಟುವ ಹಂತದಲ್ಲಿ ಕೈ ಕೊಡುವ ಮಳೆ, ಬೆಳೆಗೆ ತಗುಲುವ ರೋಗದಿಂದ ನಷ್ಟ ಅನುಭವಿಸಿರುವುದೇ ಹೆಚ್ಚು ಎನ್ನುತ್ತಾರೆ ಪಾವಗಡ ತಾಲ್ಲೂಕಿನ ರೈತ ಕೊಂಡನ್ನ.

ಕೃಷಿ ಇಲಾಖೆ ಸಹ ಇದಕ್ಕೆ ಪೂರಕ ಸಿದ್ಧತೆ ನಡೆಸಿತ್ತು. ಪ್ರಸಕ್ತ ಸಾಲಿನಲ್ಲಿ 1.5 ಲಕ್ಷ ಹೆಕ್ಟೇರ್ನಲ್ಲಿ ಶೇಂಗಾ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಇವರೆಗೂ ಕೇವಲ 800 ಹೆಕ್ಟೇರ್ನಲ್ಲಿ ಮಾತ್ರ ಬಿತ್ತನೆಯಾಗಿದೆ. ಈ ಬೆಳೆ ಸಹ ಮಳೆಯಿಲ್ಲದೆ ಕಮರಿ ಹೋಗಿದೆ.

ಜಿಲ್ಲೆಯಲ್ಲಿ 4.79 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದರೂ; ಜೂನ್ ಮುಗಿದರೂ 20 ಸಾವಿರ ಹೆಕ್ಟೇರ್ನಲ್ಲಿ ಮಾತ್ರ ಬಿತ್ತನೆಯಾಗಿದೆ. ಈ ಬೆಳೆ ಮಳೆಯಿಲ್ಲದೆ ಒಣಗಿ ಹೋಗಿದೆ. ಜಾನುವಾರು ಮೇವು ಸಿಗದಿರುವಂತಹ ಸ್ಥಿತಿ ನಿರ್ಮಾಣಗೊಂಡಿದೆ. 4.59 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ನಡೆದಿಲ್ಲ. ಮೇ-ಜೂನ್ನಲ್ಲಿ ವಾಡಿಕೆ 126.3 ಮಿ.ಮೀ. ಮಳೆಯಾಗಬೇಕಿದ್ದು, ಕೇವಲ 50.8 ಮಿ.ಮೀ. ಮಳೆ ಬಿದ್ದಿದೆ. ಜೂನ್ನಲ್ಲಿ ಅತಿ ಕಡಿಮೆ 7.7 ಮಿ.ಮೀ. ಮಳೆಯಾಗಿದೆ.

ಜುಲೈನಲ್ಲಿ ರಾಗಿ ಬಿತ್ತನೆ ಚುರುಕಾಬೇಕಿತ್ತು. ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ, ತುರುವೇಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಇನ್ನೂ ಭೂಮಿ ಹದಗೊಳಿಸಿಲ್ಲ. ಇದೀಗ ಮಳೆ ಬಿದ್ದರೂ, ಭೂಮಿ ಹದಗೊಳಿಸಿಕೊಳ್ಳುವಷ್ಟರಲ್ಲಿ ಪಸೆ ಆರುತ್ತದೆ. ಬಿತ್ತನೆಗೆ ಮತ್ತೊಂದು ಹದ ಮಳೆ ಕಾಯುವುದು ಅನಿವಾರ್ಯವಾಗಿದೆ. ಒಟ್ಟಾರೆ ಚಿತ್ರಣ ಗಮನಿಸಿದರೆ ಈ ವರ್ಷದ ಬರ ರೈತರ ಪಾಲಿಗೆ ಬಹು ಕ್ರೂರಿ ಎನಿಸಿದೆ.

ಬೆಳೆ ವಿಮೆ ಕಟ್ಟಲು ಜೂನ್ 30 ಕೊನೆ ದಿನ. ಬಿತ್ತನೆ ನಡೆಸದಿದ್ದರೂ ರೈತರು ಬೆಳೆ ವಿಮೆ ತುಂಬಲು ಮುಗಿಬಿದ್ದರು. ನೆಮ್ಮದಿ ಕೇಂದ್ರಗಳ ಮುಂದೆ ಪಹಣಿಗಾಗಿ ಮುಂಜಾನೆಯಿಂದಲೆ ಸರತಿಯಲ್ಲಿ ಕಾದರು.
ವರುಣ ಕೃಪೆ ತೋರದಿದ್ದರೂ, ಸರ್ಕಾರವಾದರೂ ನೆರವಿಗೆ ಬರಬಹುದು ಎಂಬ ನಿರೀಕ್ಷೆ ರೈತರಲ್ಲಿ ಇದೆ. `ಆದ್ರೆ ಆರಿದ್ರ, ಇಲ್ಲದಿದ್ದರೆ ದರಿದ್ರ~ ಎಂಬಂತಾಗಿದೆ ಎಂದೂ ಕೊರಟಗೆರೆ ತಾಲ್ಲೂಕು ಮುದಿಗೌಡನ ಹಟ್ಟಿಯ ಪೂಜಾರ ದೊಡ್ಡಬಾಲಯ್ಯ ಅವರು ಆತಂಕ ವ್ಯಕ್ತಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.