ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು-ಬೆಂಗಳೂರು ವೊಲ್ವೊ ಬಸ್ ಆರಂಭ

Last Updated 22 ಫೆಬ್ರುವರಿ 2011, 19:15 IST
ಅಕ್ಷರ ಗಾತ್ರ

ತುಮಕೂರು: ತುಮಕೂರು- ಬೆಂಗಳೂರು ನಡುವೆ ಕೆಎಸ್‌ಆರ್‌ಟಿಸಿ ವೊಲ್ವೊ ಬಸ್‌ಗೆ ನಗರದ ಬಸ್ ನಿಲ್ದಾಣದಲ್ಲಿ ಮಂಗಳವಾರ ಸಿದ್ದಗಂಗಾ ಮಠಾಧ್ಯಕ್ಷ ಡಾ.ಶಿವಕುಮಾರ ಸ್ವಾಮೀಜಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಎಸ್.ಶಿವಣ್ಣ ಮಾತನಾಡಿ, ನಗರದ ಜನತೆಯ ಬೇಡಿಕೆಯಂತೆ ವೊಲ್ವೊ ಸಾರಿಗೆ ಆರಂಭಿಸಲಾಗುತ್ತಿದೆ. ಮಾರ್ಚ್ ಅಂತ್ಯದೊಳಗೆ ಮತ್ತೆ 10 ನಗರ ಸಾರಿಗೆ ಬಸ್ ಬರಲಿವೆ. ಹಂತಹಂತವಾಗಿ ನಗರಕ್ಕೆ ಇನ್ನೂ 20 ನಗರ ಸಾರಿಗೆ ಬಸ್ ಬರಲಿದೆ. ಈಗಾಗಲೇ ಬಿಡಲಾಗಿರುವ ನಗರ ಸಾರಿಗೆ ಬಸ್‌ಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದಿದ್ದು, ನಗರ ಸಾರಿಗೆ ಯಶಸ್ವಿಯಾಗಿಲಿದೆ ಎಂದು ಹೇಳಿದರು.

ವಿಭಾಗೀಯ ನಿಯಂತ್ರಣಾಧಿಕಾರಿ ವಿಶ್ವನಾಥ್ ಮಾತನಾಡಿ, ಪ್ರತಿದಿನ ಬೆಳಿಗ್ಗೆ 7,30ಕ್ಕೆ ವೊಲ್ವೊ ಬಸ್ ತುಮಕೂರಿನಿಂದ ಹೊರಡಲಿದೆ. ಮತ್ತೆ ಸಂಜೆ 5.30ಕ್ಕೆ ಬೆಂಗಳೂರಿನಿಂದ ಬಿಡಲಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದರೆ ಮತ್ತೆ ಹೆಚ್ಚಿಸಲಾಗುವುದು. ರೂ. 80 ಪ್ರಯಾಣ ದರ ಇದೆ ಎಂದರು. ನಗರ ಸಾರಿಗೆ ಪ್ರತಿ ಬಸ್‌ನಿಂದ ದಿನಕ್ಕೆ ರೂ. 5 ಸಾವಿರ ಹಣ ಸಂಗ್ರಹವಾಗುತ್ತಿದೆ. ಸದ್ಯಕ್ಕೆ ಲಾಭ- ನಷ್ಟವಿಲ್ಲದೆ ನಗರ ಸಾರಿಗೆ ನಡೆಯುತ್ತಿದೆ. ಅಲ್ಲದೆ ಕಳೆದ ಏಪ್ರಿಲ್- ಡಿಸೆಂಬರ್ ನಡುವೆ ತುಮಕೂರು ವಿಭಾಗ ರೂ. 1.5 ಕೋಟಿ ನಷ್ಟದಲ್ಲಿದೆ. ಸರ್ಕಾರದ ರಿಯಾಯಿತಿ ಪಾಸ್ ಅನುದಾನ ಬಂದರೆ ನಷ್ಟ ಸರಿದೂಗಿಸಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT