ಮಂಗಳವಾರ, ಜೂನ್ 15, 2021
27 °C
ಪ್ರಜಾವಾಣಿ ಫಲಶ್ರುತಿ

ತುಮಕೂರು ವಿ.ವಿಗೆ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿಯಮಾವಳಿ ಉಲ್ಲಂಘಿಸಿ 37 ಮಂದಿ ಬೋಧಕೇತರ ಸಿಬ್ಬಂದಿಯ ಪ್ರೊಬೇ­ಷನರಿ ಅವಧಿ ಮುಕ್ತಾ­ಯ­­­ಗೊಳಿಸಿದ ತುಮಕೂರು ವಿಶ್ವ­ವಿ­ದ್ಯಾ­ಲ­­ಯದ ಕ್ರಮ ಕಾನೂನು ಬಾಹಿರ ಎಂದು ಉನ್ನತ ಶಿಕ್ಷಣ ಇಲಾಖೆ ಹೇಳಿದೆ.ಈ ಹಗರಣ ನಡೆದಿದ್ದು ಡಾ. ಎಸ್‌.­ಸಿ. ಶರ್ಮಾ  ಕುಲಪತಿಯಾಗಿದ್ದ ಅವ­ಧಿ­­ಯಲ್ಲಿ. ಇದನ್ನು  ಜನವರಿ 7ರಂದು ‘ಪ್ರಜಾವಾಣಿ’ ಬೆಳಕಿಗೆ ತಂದಿತ್ತು. ಇದೇ ವರದಿ ಆಧರಿಸಿ ಇಲಾ­ಖೆಯ ಪ್ರಧಾನ ಕಾರ್ಯ­ದರ್ಶಿ ರಜ­ನೀಶ್‌ ಗೋಯಲ್‌ ಅವರು ತುಮ­ಕೂರು ವಿಶ್ವವಿದ್ಯಾಲಯದ ಕುಲ­ಪತಿಗೆ ಮಾ.7ರಂದು ಷೋಕಾಸ್ ನೋಟಿಸ್‌ ಜಾರಿ ಮಾಡಿದ್ದಾರೆ.ಬೋಧಕೇತರ ಸಿಬ್ಬಂದಿಯ ಪ್ರೊಬೇ­ಷ­ನರಿ ಅವಧಿ ಮುಕ್ತಾಯವಾಗಿರು­ವು­ದನ್ನು ಘೋಷಿಸಲು ಬೆಂಗಳೂರು ವಿ.ವಿ ನಿಯ­ಮಾ­ವಳಿ­ಗಳನ್ನು ತುಮ­ಕೂರು ವಿ.ವಿ ಅನುಸರಿ­ಸಿದೆ. ಆದರೆ ಇದು ನೇಮಕಾತಿ ಮತ್ತು ಮುಂಬ­ಡ್ತಿಗೆ ಮಾತ್ರ ಅನ್ವಯ­ವಾಗು­ತ್ತ­ದೆಯೇ ಹೊರತು ಪೂರ್ವಾ­ವಧಿ ಮುಕ್ತಾಯ  ಘೋಷಿಸಲು ಅಲ್ಲ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ನಿಯ­ಮಾ­ವಳಿ ರಚಿಸಿಕೊಂಡು ಸಕ್ಷಮ ಪ್ರಾಧಿ­ಕಾರದ ಅನುಮೋದನೆ ಪಡೆಯ­ಬೇಕು.ಆದರೆ, ಇದ್ಯಾವುದನ್ನು ಪಾಲಿಸದೆ ಕಾಯಂ ಪೂರ್ವ ಸೇವಾವಧಿ ಮುಕ್ತಾ­ಯ­ವಾಗಿದೆ ಎಂದು ಘೋಷಿಸಿರುವುದು ಕಾನೂನು­ಬಾಹಿರ ಎಂದು ನೋಟಿಸ್‌­ನಲ್ಲಿ ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.