ಶನಿವಾರ, ಜನವರಿ 18, 2020
25 °C

ತೃತೀಯ ರಂಗಕ್ಕೆ ಇದು ಸಕಾಲ: ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ (ಪಿಟಿಐ): ಕಾಂಗ್ರೆಸ್‌ ಮತ್ತು ಬಿಜೆಪಿ  ಪಕ್ಷಗಳು ಮುಂಬರುವ ಚುನಾ­­ವಣೆಯಲ್ಲಿ ಬಹುಮತ ಪಡೆ­ಯು­­­ವು­ದಿಲ್ಲ. ಆದ್ದರಿಂದ ತೃತೀಯ ರಂಗ ರಚನೆ­­ಗೆ ಇದು ಸಕಾಲ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇ­ಗೌಡ ಅವರು ಹೇಳಿದ್ದಾರೆ.ಪ್ರಧಾನಿ ಅಭ್ಯರ್ಥಿ ಯಾರು ಎಂಬುದು ಮುಖ್ಯ­ವಲ್ಲ, ಪ್ರಾದೇಶಿಕ ಪಕ್ಷ­ಗಳು ನೀತಿ ಮತ್ತು ಕಾರ್ಯಕ್ರಮ­ಗಳ ಆಧಾರದ ಮೇಲೆ ತೃತೀಯ ರಂಗ ರಚಿಸಲು ಈಗ ಕಾಲ ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ.ದೆಹಲಿ ವಿಧಾನಸಭೆಯ ಚುನಾವಣೆ ಫಲಿತಾಂಶ ಬಹಳ ಮಹತ್ವವಾದುದು ಎಂದ ಅವರು, ತೃತೀಯ ರಂಗವನ್ನು ಸೇರಿ­ಕೊಳ್ಳುವುದು ಅಥವಾ ಬಿಡುವುದು ಆಮ್‌ ಆದ್ಮಿ ಪಕ್ಷಕ್ಕೆ ಬಿಟ್ಟಿದ್ದು ಎಂದಿದ್ದಾರೆ.

ಪ್ರತಿಕ್ರಿಯಿಸಿ (+)