ಸೋಮವಾರ, ಮೇ 23, 2022
24 °C

ತೆರಿಗೆ ಲೆಕ್ಕಪುಸ್ತಕ ನಿರ್ವಹಣೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಯಾವುದೇ ವೃತ್ತಿ ಅಥವಾ ವ್ಯಾಪಾರದಲ್ಲಿ ತೊಡಗಿರುವವರು ತೆರಿಗೆಗಳಿಗೆ ಸಂಬಂಧಿಸಿದ ಲೆಕ್ಕಪುಸ್ತಕಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಲೆಕ್ಕ ಸನ್ನದುದಾರ ಎನ್.ಜಿ. ಗಿರೀಶ್ ನಾಡಿಗ್ ಸಲಹೆ ನೀಡಿದರು.ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ವತಿಯಿಂದ ಶುಕ್ರವಾರ ನಗರದ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಾಸಿಕ ಸಭೆಯಲ್ಲಿ `ಆದಾಯ ತೆರಿಗೆ ಹಾಗೂ ಮೌಲ್ಯವರ್ಧಿತ ತೆರಿಗೆಗೆ ಸಂಬಂಧಿಸಿದಂತೆ ಲೆಕ್ಕಪತ್ರಗಳ ನಿರ್ವಹಣೆ~ ವಿಷಯ ಕುರಿತು ಅವರು ಮಾತನಾಡಿದರು.ಕಾನೂನು, ವೈದ್ಯಕೀಯ, ಎಂಜಿನಿಯರಿಂಗ್, ಲೆಕ್ಕಪರಿಶೋಧನೆ, ತಾಂತ್ರಿಕ, ಒಳಾಂಗಣ ವಿನ್ಯಾಸ ಮತ್ತಿತರ ಯಾವುದೇ ವೃತ್ತಿಯಲ್ಲಿ ತೊಡಗುವವರು ಆದಾಯ ತೆರಿಗೆ ಕಾಯ್ದೆ ಪ್ರಕಾರ, ತಮ್ಮ ಆದಾಯ ಹಾಗೂ ಅದಕ್ಕೆ ಸಂಬಂಧಿಸಿದಂತೆ ಲೆಕ್ಕಪುಸ್ತಕಗಳನ್ನು ಇಟ್ಟುಕೊಂಡಿರಬೇಕು. ನಿಯಮದ ಪ್ರಕಾರ, ಆದಾಯ ತೆರಿಗೆ ಪಾವತಿಸಬೇಕು. ಸಂಬಳದಲ್ಲಿ ಹೆಚ್ಚಿನ ತೆರಿಗೆ ಪಡೆದಿದ್ದಲ್ಲಿ ಅದನ್ನು ಸಮರ್ಪಕ ದಾಖಲಾತಿಗಳನ್ನು ಪ್ರಸ್ತುತಪಡಿಸಿ ವಾಪಸ್ ಪಡೆಯಬಹುದು.

 

ವ್ಯಾಪಾರ ಮಾಡುವವರು ಅಥವಾ ಯಾವುದೇ ವೃತ್ತಿಯಲ್ಲಿ ಇರುವವರು ಲೆಕ್ಕಪುಸ್ತಕಗಳನ್ನು ನಿರ್ವಹಿಸಿದೆ ಇದ್ದಲ್ಲಿ, ಆದಾಯ ತೆರಿಗೆ ಕಾಯ್ದೆ 271ಎ ಪ್ರಕಾರ ್ಙ 25 ಸಾವಿರ  ದಂಡ ವಿಧಿಸಲು ಅವಕಾಶವಿದೆ. ಹೀಗಾಗಿ, ಕನಿಷ್ಠ 6 ವರ್ಷಗಳ ಕಾಲ ಲೆಕ್ಕಪುಸ್ತಕಗಳನ್ನು ಇಟ್ಟುಕೊಳ್ಳುವುದು ಒಳಿತು ಹಾಗೂ ಮಹತ್ವದ್ದಾಗಿದೆ ಎಂದು ತಿಳಿಸಿದರು.ವ್ಯವಹಾರಕ್ಕೆ ಸಂಬಂಧಿಸಿದ ಕ್ಯಾಶ್ ಬುಕ್, ಲೆಡ್ಜರ್, ಬಿಲ್‌ಗಳ ನಕಲು ಪ್ರತಿಗಳು, ಕ್ರಮಾಂಕದ ಪ್ರಕಾರ ಬಿಲ್‌ಗಳು, ಮಾಡಿದ ಖರ್ಚಿಗೆ ಸಂಬಂಧಿಸಿದ ಬಿಲ್‌ಗಳು, ಒಂದು ವೇಳೆ ಬಿಲ್ ದೊರೆಯದಿದ್ದಲ್ಲಿ  (್ಙ 50ಕ್ಕಿಂತ ಕಡಿಮೆ ಇರುವುದಕ್ಕೆ ಮಾತ್ರ) ಬಿಳಿ ಹಾಳೆಯಲ್ಲಿ ಸಿದ್ಧಪಡಿಸಿದ ಚೀಟಿಗಳನ್ನು ಇಟ್ಟುಕೊಂಡಿರಬೇಕು. ವೈದ್ಯಕೀಯ ವೃತ್ತಿಯಲ್ಲಿ ಇರುವವರು ದಿನದ ಪ್ರಕರಣಗಳ ರಿಜಿಸ್ಟರ್, ಹಿಂದಿನ ವರ್ಷದ ಮೊದಲ ಹಾಗೂ ಕೊನೆಯ ದಿನದ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರ.ಆದಾಯ ತೆರಿಗೆ ಕಾಯ್ದೆ 1961, ವೈಯಕ್ತಿಕ ಆದಾಯ ತೆರಿಗೆ ಪಾವತಿ, ಹಿಂದೂ ಅವಿಭಕ್ತ ಕುಟುಂಬ (ಎಚ್‌ಯುಎಫ್), ಸಹಭಾಗಿತ್ವದ ಸಂಸ್ಥೆಗಳು, ವಿವಿಧ ಸಂಘಗಳು (ಎಒಪಿ), ಸಹಕಾರ ಸಂಘಗಳು, ಟ್ರಸ್ಟ್‌ಗಳು ಹೇಗೆ ಆದಾಯ ತೆರಿಗೆ ಪಾವತಿಸಬೇಕು ಎಂಬುದರ ಕುರಿತು ಮಾಹಿತಿ ನೀಡಿದರು.ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಗಿ ರಾಧೇಶ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಬಿ.ಎನ್. ಧರ್ಮಪ್ಪ ಪಾಲ್ಗೊಂಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.