ಬುಧವಾರ, ಜೂನ್ 23, 2021
30 °C

ತೇಜಸ್ ಹಾರಾಟ ಯಶಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೇಜಸ್ ಹಾರಾಟ ಯಶಸ್ವಿ

ಬೆಂಗಳೂರು: ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ (ಎಲ್‌ಸಿಎ) ತೇಜಸ್‌ನ `ಎಲ್‌ಎಸ್‌ಪಿ 7~ ಮಾದರಿ ಇಲ್ಲಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ವಿಮಾನ ನಿಲ್ದಾಣದಲ್ಲಿ ಭಾನುವಾರ ಯಶಸ್ವಿಯಾಗಿ ಪ್ರಥಮ ಪರೀಕ್ಷಾರ್ಥ ಹಾರಾಟ ನಡೆಸಿತು.

ಈ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗುವುದರ ಮೂಲಕ ತೇಜಸ್-ಎಲ್‌ಎಸ್‌ಪಿ 7 (ಲಿಮಿಟೆಡ್ ಸೀರಿಯಲ್ ಪ್ರೊಡಕ್ಷನ್) ಯುದ್ಧ ವಿಮಾನ ಪ್ರಾಥಮಿಕ ಕಾರ್ಯಾಚರಣೆಗೆ ಅನುಮತಿ (ಐಒಸಿ) ಪಡೆಯುವತ್ತ ಒಂದು ಹೆಜ್ಜೆ ಮುಂದಿಟ್ಟಂತೆ ಆಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಪ್ರಕಟಣೆ ತಿಳಿಸಿದೆ.

ಐಒಸಿ ದೊರೆತ ನಂತರ ಎಲ್‌ಎಸ್‌ಪಿ 7 ಮತ್ತು 8 ಮಾದರಿಯ ಯುದ್ಧ ವಿಮಾನಗಳನ್ನು ಪರೀಕ್ಷಾರ್ಥ ಬಳಕೆಗೆ ವಾಯುಪಡೆಗೆ ಹಸ್ತಾಂತರ ಮಾಡಲಾಗುವುದು. ಗ್ರೂಪ್ ಕ್ಯಾಪ್ಟನ್ ಕೆ.ಕೆ. ವೇಣುಗೋಪಾಲ್ ಅವರು 28 ನಿಮಿಷಗಳ ಕಾಲ ವಿಮಾನ ಹಾರಿಸಿದರು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.