ಶಹಾಪುರ: ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಸ್ಥಾಪಿಸಲಾದ ತೊಗರಿ ಕೇಂದ್ರದಲ್ಲಿ ಕಳೆದ ಮೂರು ದಿನಗಳಿಂದ ತೊಗರಿ ಖರೀದಿಸುತ್ತಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಪಟ್ಟಣದ ಬಸವೇಶ್ವರ ವೃತ್ತದ ಬಳಿಯ ಶಹಾಪುರ-ಗುಲ್ಬರ್ಗ ಹೆದ್ದಾರಿ ಮೇಲೆ ತೊಗರಿ ತುಂಬಿದ ಟ್ರ್ಯಾಕ್ಟರ್ ನಿಲ್ಲಿಸಿ ಬುಧವಾರ ದಿಢೀರ್ ರಸ್ತೆತಡೆ ನಡೆಸಿದರು.

ಧಾರಣೆ ತೀವ್ರ ಕುಸಿತವಾದ ಪರಿಣಾಮ ತೊಗರಿ ಸಂಗ್ರಹಿಸಿಟ್ಟಿದ್ದ ದಲ್ಲಾಳಿಗಳು ನೇರವಾಗಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಬೆಳೆದ ತೊಗರಿ ಮಾರುಕಟ್ಟೆಗೆ ಬರುವ ಮುಂಚಿತವಾಗಿ ಸರ್ಕಾರದ ಸಹಾಯಧನವೂ ಉಳ್ಳವರ ಪಾಲಾಗಿದೆ. ಸರ್ಕಾರ ತೊಗರಿ ಮಂಡಳಿಯಿಂದ ಖರೀದಿ ಕೇಂದ್ರ ಸ್ಥಾಪಿಸಿದಾಗ ಬೆರಳೆಣಿಕೆಯ ದಿನ ಮಾತ್ರ ಬಾಗಿಲು ತೆರೆದ ಕೇಂದ್ರ ನಂತರ ಕಣ್ಣು ಮುಚ್ಚಿತು.

ನಾಳೆ ಖರೀದಿಸಬಹುದೆಂಬ ಆಸೆಯಲ್ಲಿ ಹೆಚ್ಚಿನ ರೈತರು ಹಲವು ದಿನಗಳಿಂದ ಕೇಂದ್ರದ ಮುಂದೆ ತೊಗರಿ ಸಂಗ್ರಹಿಸಿಟ್ಟಿದ್ದಾರೆ. ಯಾವೊಬ್ಬ ಅಧಿಕಾರಿಯೂ ಇತ್ತ ಗಮನ ನೀಡುತ್ತಿಲ್ಲವೆಂದು ಆರೋಪಿಸಿ ಜೆಡಿಎಸ್ ಘಟಕ, ಪ್ರಾಂತ ರೈತ ಸಂಘ, ಜೈ ಕರ್ನಾಟಕ ಸಂಘಟನೆ ಹಾಗೂ ರೈತರು ಕೂಡಿಕೊಂಡು ರಸ್ತೆ ತಡೆ ನಡೆಸಿದರು.

ರಸ್ತೆ ತಡೆಯ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಾಜೂ ಗೌಡ ನೇರವಾಗಿ ರೈತ ಮುಖಂಡರ ಜೊತೆ ಚರ್ಚೆ ನಡೆಸಿ ಕಾಲು ನಡಿಗೆಯಲ್ಲಿಯೇ ಎಪಿಎಂಸಿ ಕೇಂದ್ರಕ್ಕೆ ಆಗಮಿಸಿದರು. ಮೂಲ ಸಮಸ್ಯೆಯು ತೊಗರಿ ಮಂಡಳಿಯದ್ದಾಗಿದೆ. 10 ಕೋಟಿ ಹಣ ಬಿಡುಗಡೆ ಮಾಡಲಾಗಿತ್ತು, ಈ ಹಣ ಯಾತಕ್ಕೂ ಸಾಲದಾಗಿದೆ. ಈಗಾಗಲೇ ಪಟ್ಟಣದ ಖರೀದಿ ಕೇಂದ್ರದಿಂದ 300 ಕ್ವಿಂಟಾಲ್ ಖರೀದಿಸಲಾಗಿದೆ. ಹಣಕಾಸಿನ ಕೊರತೆಯಿಂದ ಸ್ಥಗಿತಗೊಳಿಸಿರುವುದು ಸರಿಯಲ್ಲವೆಂದು ಸಚಿವರು `ಪ್ರಜಾವಾಣಿ~ಯ ಮುಂದೆ ಬೇಸರ ವ್ಯಕ್ತಪಡಿಸಿದರು.

ಕೆಲ ದಿನಗಳಿಂದ ಖರೀದಿ ಕೇಂದ್ರವನ್ನು ಸ್ಥಗಿತಗೊಳಿಸಿದ್ದರಿಂದ ಮಾರಾಟಕ್ಕೆ ತರಲಾದ ಸುಮಾರು 2,000 ಕ್ವಿಂಟಾಲ್ ತೊಗರಿ ಪ್ರಾಂಗಣದಲ್ಲಿ ಹಾಕಿ ರಾತ್ರಿ ಹಗಲು ಎನ್ನದೆ ಕಾಯುವ ಸ್ಥಿತಿ ಬಂದಿದೆ. ಅಧಿಕಾರಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಮಂಡಳಿಯಲ್ಲಿ ಹಣವಿಲ್ಲವೆಂದು ಖರೀದಿ ಸ್ಥಗಿತಗೊಳಿಸಿ ಬೀಗ ಜಡಿದು ಬಿಟ್ಟಿದ್ದಾರೆ. ಕೊನೆ ಪಕ್ಷ ಮಾರಾಟಕ್ಕೆ ತಂದಿರುವ ತೊಗರಿಯನ್ನು ಖರೀದಿಸಿ ಎಂದು ರೈತ ಮುಖಂಡ ಶರಣಪ್ಪ ಸಲಾದಪೂರ, ಸಿದ್ದಯ್ಯ ಹಿರೇಮಠ ಸಚಿವರಿಗೆ ಮನವಿ ಮಾಡಿದರು.

ತಕ್ಷಣ ಸ್ಪಂದಿಸಿದ ಸಚಿವರು ಪ್ರಾಂಗಣದಲ್ಲಿರುವ ತೊಗರಿಯನ್ನು ಖರೀದಿಸಿ ಜಿಲ್ಲಾಧಿಕಾರಿಗೆ ಸಂಜೆಯ ವೇಳೆಗೆ ವರದಿ ನೀಡಿ ಹಣ ಬಿಡುಗಡೆಗೆ ಕ್ರಮ ತೆಗೆದುಕೊಳ್ಳಲಾಗುವುದೆಂದು ಸ್ಥಳದಲ್ಲಿಯೇ ಇದ್ದ ತಹಸೀಲ್ದಾರ ಎಂ. ರಾಚಪ್ಪಗೆ ಸೂಚಿಸಿದರು.

ರಸ್ತೆ ತಡೆಯಲ್ಲಿ ಪ್ರಾಂತ ರೈತ ಸಂಘದ ಅಧ್ಯಕ್ಷ ಎಸ್.ಎಂ.ಸಾಗರ, ಹೈಯ್ಯಾಳಪ್ಪ ಹೈಯ್ಯಾಳಕರ್, ಜಯ ಕರ್ನಾಟಕ ಸಂಚಾಲಕ ವೆಂಕಟೇಶ ತುಳೇರ, ಜೆಡಿಎಸ್ ಮುಖಂಡರಾದ ಶರಣು ಹತ್ತಿಗೂಡುರ, ಚಂದ್ರಶೇಖರ, ಮಲ್ಲಿಕಾರ್ಜುನ, ಅಮರೇಶ, ಪರ್ವತರಡ್ಡಿ ಹಾಗೂ ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.