ಗುರುವಾರ , ಜೂನ್ 24, 2021
21 °C

ತ್ರಿವೇದಿ ಭವಿಷ್ಯ: ಸದನದಲ್ಲಿ ಕೋಲಾಹಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

ನವದೆಹಲಿ, (ಐಎಎನ್ಎಸ್): ಯುಪಿಎ ಸರ್ಕಾರದಲ್ಲಿ ಪಾಲುದಾರ ಪಕ್ಷವಾದ ತೃಣ ಮೂಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು, ಪ್ರಸಕ್ತ ರೈಲ್ವೆ ಬಜೆಟ್ ನಲ್ಲಿ  ತಮ್ಮ ಪಕ್ಷಕ್ಕೆ ಸೇರಿದ ಸಚಿವ ದಿನೇಶ್ ತ್ರಿವೇದಿ ಅವರು ಬುಧವಾರ ಪ್ರಯಾಣ ದರ ಹೆಚ್ಚಳ ಮಾಡಿರುವುದಕ್ಕೆ ಆಕ್ಷೇಪಿಸಿ ಅವರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಮುಂದಾದ ಸಂಗತಿ ಪ್ರತಿಪಕ್ಷಗಳಿಗೆ ಗ್ರಾಸ ಒದಗಿಸಿ ಗುರುವಾರದ ಸದನ ಕಲಾಪಗಳಲ್ಲಿ ಕೋಲಾಹಲ ಉಂಟಾಗಲು ಕಾರಣವಾಯಿತು. 

ಲೋಕಸಭೆಯಲ್ಲಿ ಹಣಕಾಸು ಸಚಿವ ಪ್ರಣವ ಮುಖರ್ಜಿ ಮತ್ತು  ರಾಜ್ಯಸಭೆಯಲ್ಲಿ ಸಂಸದೀಯ ವ್ಯವಹಾರ ಖಾತೆ ರಾಜ್ಯ ಸಚಿವ ರಾಜೀವ್ ಶುಕ್ಲಾ ಅವರು, ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದರೂ, ಅದು ವಿರೋಧ ಪಕ್ಷಗಳಿಗೆ ಸಮಾಧಾನ ನೀಡಲಿಲ್ಲ.

ಪ್ರತಿಪಕ್ಷಗಳು ಸಚಿವ ದಿನೇಶ್ ತ್ರಿವೇದಿ ಅವರ ರಾಜೀನಾಮೆ ಕುರಿತು ಕೋಲಾಹಲ ಮುಂದುವರಿಸಿದ ಹಿನ್ನೆಲೆಯಲ್ಲಿ  ಲೋಕಸಬೆಯಲ್ಲಿ ಸಭಾಧ್ಯಕ್ಷೆ ಮೀರಾ ಕುಮಾರಿ ಮತ್ತು ರಾಜ್ಯಸಭೆಯಲ್ಲಿ ಸಭಾಪತಿ ಹಮೀದ್ ಅನ್ಸಾರಿ ಅವರು ಸದನಗಳ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದರು.

ಮಮತಾ ಬ್ಯಾನರ್ಜಿ ಅವರ ಒತ್ತಡಕ್ಕೆ ಮಣಿದು ಪ್ರಧಾನಿ ಮನಮೋಹನ್ ಸಿಂಗ್ ಅವರು ತ್ರಿವೇದಿ ಅವರು ಸಲ್ಲಿಸಿದ ರಾಜಿನಾಮೆಯನ್ನು ಅಂಗೀಕರಿಸಿದ್ದಾರೆ. ಅವರು ತೆರವು ಮಾಡಿರುವ ಖಾತೆಯನ್ನು  ತೃಣಮೂಲ ಪಕ್ಷಕ್ಕೆ ಸೇರಿದ ಇನ್ನೊಬ್ಬ ಸದಸ್ಯ ಬಂದರು ಖಾತೆ ರಾಜ್ಯ ಸಚಿವ  ಮುಕುಲ್ ರಾಯ್ ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.