ಗುರುವಾರ , ಜೂನ್ 17, 2021
27 °C

ದಕ್ಷಿಣ ಆಫ್ರಿಕಾದವರ ಮೇಲುಗೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೆಲಿಂಗ್ಟನ್: ವೆರ್ನಾನ್ ಫಿಲ್ಯಾಂಡರ್ (81ಕ್ಕೆ6) ಅವರ ಪ್ರಭಾವಿ ಬೌಲಿಂಗ್ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡದವರು ಇಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದಾರೆ.



ಬೇಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ನ್ಯೂಜಿಲೆಂಡ್ 96 ಓವರ್‌ಗಳಲ್ಲಿ ಕೇವಲ 275 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಈ ಮೂಲಕ 199 ರನ್‌ಗಳ ಹಿನ್ನಡೆ ಕಂಡಿತು.



ಎರಡನೇ ಇನಿಂಗ್ಸ್ ಆರಂಭಿಸಿರುವ ಪ್ರವಾಸಿ ದಕ್ಷಿಣ ಆಫ್ರಿಕಾ ಪಂದ್ಯದ ನಾಲ್ಕನೇ ದಿನದಾಟದ ಅಂತ್ಯಕ್ಕೆ 15 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 75 ರನ್ ಗಳಿಸಿದೆ. ಈ ಮೂಲಕ 274 ರನ್‌ಗಳ ಮುನ್ನಡೆ ಸಾಧಿಸಿದೆ. ಈ ತಂಡದವರು ತಮ್ಮ ಮೊದಲ ಇನಿಂಗ್ಸ್‌ನಲ್ಲಿ 474 ರನ್ ಪೇರಿಸಿದ್ದರು.



ಕೇವಲ ಏಳನೇ ಪಂದ್ಯದಲ್ಲಿ ಫಿಲ್ಯಾಂಡರ್ 50 ವಿಕೆಟ್‌ಗಳ ಗಡಿ ದಾಟಿದರು. ಇದೊಂದು ದಾಖಲೆ ಕೂಡ. 1888ರಲ್ಲಿ ಆಸ್ಟ್ರೇಲಿಯಾದ ಚಾರ್ಲಿ ಟರ್ನರ್ ಕೇವಲ ಆರು ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. 

ದಕ್ಷಿಣ ಆಫ್ರಿಕಾ ಈ ಸರಣಿಯಲ್ಲಿ ಈಗಾಗಲೇ 1-0 ಮುನ್ನಡೆ ಸಾಧಿಸಿದೆ.



ಸಂಕ್ಷಿಪ್ತ ಸ್ಕೋರ್:
ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್: 148.4 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 474 ಡಿಕ್ಲೇರ್ಡ್ ಹಾಗೂ 15 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 75 (ಅಲ್ವಿರೊ ಪೀಟರ್ಸನ್ ಬ್ಯಾಟಿಂಗ್ 38, ಗ್ರೇಮ್ ಸ್ಮಿತ್ ಬ್ಯಾಟಿಂಗ್ 34); ನ್ಯೂಜಿಲೆಂಡ್ ಮೊದಲ ಇನಿಂಗ್ಸ್: 96 ಓವರ್‌ಗಳಲ್ಲಿ 275 (ಡೇನಿಯಲ್ ಫ್ಲಿನ್ 45, ಮಾರ್ಟಿನ್ ಗುಪ್ಟಿಲ್ 59, ಕೀನ್ ವಿಲಿಯಮ್ಸನ್ 39; ಡೇಲ್ ಸ್ಟೇಯ್ನ 41ಕ್ಕೆ2, ವೆರ್ನಾನ್ ಫಿಲ್ಯಾಂಡರ್ 81ಕ್ಕೆ6).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.