ಮಂಗಳವಾರ, ಜೂನ್ 15, 2021
27 °C

ದರ್ಶನ ದರ್ಪಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಪಯುಕ್ತ ಲೇಖನ

ಕುರ್ಕೆ ಪ್ರಶಾಂತ ಅವರ `ಕರೆಂಟ್ ಉಳಿಯಿತು, ಬದುಕು ಬೆಳಗಿತು~ ಲೇಖನ ಓದಿ ಅನೇಕ ಉಪಯೋಗಕರ ಮಾಹಿತಿಗಳನ್ನು ತಿಳಿದುಕೊಳ್ಳುವಂತಾಯಿತು. ನಾನೂ ದೊಡ್ಡಬಳ್ಳಾಪುರದವನಾಗಿದ್ದು, ನಮ್ಮ ತಾಲೂಕಿನ ನಾಲ್ಕು ಫೀಡರ್ ವ್ಯಾಪ್ತಿಯ ರೈತರು ಪಂಪ್‌ಸೆಟ್‌ನಲ್ಲಿ ಸುಧಾರಣೆ ಅಳವಡಿಸಿಕೊಳ್ಳುವ ಮೂಲಕ `ದೊಡ್ಡ ಪ್ರಮಾಣದ ವಿದ್ಯುತ್ ಅಪವ್ಯಯ ತಡೆಯುವಲ್ಲಿ ಯಶಸ್ವಿಯಾಗಿರುವುದು ಸಂತೋಷವೆನಿಸಿದೆ. ನಮ್ಮ ರೈತರು ಮಾದರಿ ರೈತರಾಗಿದ್ದು, ಸುತ್ತ ಮುತ್ತಲ ರೈತರು ಇದರಿಂದ ಪ್ರಭಾವಿತರಾಗುತ್ತಾರೆ.

 -ವಿ.ಹೇಮಂತಕುಮಾರ್, ಬೆಂಗಳೂರು

ಈ ಸಂಪ್ರದಾಯ ಸಾಕು

ಕುಂಚಗನೂರಿನ ಸುಂಗಟಾನ ಸಿದ್ಧಪ್ಪ ಮುತ್ಯಾನ ಜಾತ್ರೆಯಲ್ಲಿ ಮದ್ಯವನ್ನು ಪ್ರಸಾದ ರೂಪದಲ್ಲಿ ಕೊಡುವುದನ್ನು ಓದಿ ಬೇಸರವಾಯಿತು. ಆರೋಗ್ಯಕ್ಕೆ ಕಂಟಕವಾದ ಇಂತಹ ಕೆಟ್ಟ ಸಂಪ್ರದಾಯಕ್ಕೆ ಇತಿ ಹಾಡಲು ಆಡಳಿತವರ್ಗ ಮುಂದಾಗಲಿ.

 -ಸಾವಿತ್ರಮ್ಮ.ಕೆ.ವಿಭೂತಿ, ಹರಿಹರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.