ಶನಿವಾರ, ಜನವರಿ 18, 2020
20 °C

ದರ ವ್ಯತ್ಯಾಸ ಸರಿಪಡಿಸಿ

–ಹರೀಶ್‌,ಮತ್ತೀಕೆರೆ Updated:

ಅಕ್ಷರ ಗಾತ್ರ : | |

ಬಿಎಂಟಿಸಿ ಬಸ್‌ ಟಿಕೆಟ್ ದರದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಿಪರೀತ ವ್ಯತ್ಯಾಸವಿದೆ. ಒಮ್ಮೆ ಮತ್ತೀಕೆರೆಯಿಂದ ಶಿವಾಜಿನಗರಕ್ಕೆ ಹೊರಟಿದ್ದೆ. ಒಂದು ಗಂಟೆ ಕಾದರೂ ಶಿವಾಜಿನಗರಕ್ಕೆ ಬಸ್‌ ಬರಲಿಲ್ಲ.ಅನಿವಾರ್ಯವಾಗಿ ಮೆಜೆಸ್ಟಿಕ್ ಬಸ್‌ ಹತ್ತಿ ಟಾಟಾ ಇನ್‌ಸ್ಟಿಟ್ಯೂಟ್‌ ನಿಲ್ದಾಣಕ್ಕೆ ಟಿಕೆಟ್‌ ತೆಗೆದುಕೊಂಡೆ (ರೂ ಏಳು). ಅಲ್ಲಿಂದ ಶಿವಾಜಿನಗರಕ್ಕೆ ಮತ್ತೊಂದು ಬಸ್‌ ಹತ್ತಿದೆ. ಅದರಲ್ಲಿ 16 ರೂಪಾಯಿಗಳ ಟಿಕೆಟ್‌ ಕೊಟ್ಟರು. ವಿಪರ್ಯಾಸವೆಂದರೆ ಮತ್ತೀಕೆರೆಯಿಂದ ಶಿವಾಜಿನಗರಕ್ಕೂ ರೂ16 ತೆಗೆದುಕೊಳ್ಳುತ್ತಾರೆ.ಟಾಟಾ ಇನ್‌ಸ್ಟಿಟ್ಯೂಟ್‌ನಿಂದಲೂ ಅದೇ ದರವನ್ನು ತೆಗೆದುಕೊಳ್ಳುವುದು ಯಾಕೆ? ಈ ಹಗಲು ದರೋಡೆ ನಿಲ್ಲಿಸಿ, ಬಿಎಂಟಿಸಿ ಸಂಬಂಧಪಟ್ಟ ಅಧಿಕಾರಿಗಳು ಈ ದರವ್ಯತ್ಯಾಸ ತಪ್ಪಿಸಬೇಕಿದೆ.

 

ಪ್ರತಿಕ್ರಿಯಿಸಿ (+)