ದಲಿತ ಕುಟುಂಬದ ದಹನ ಪ್ರಕರಣ: 15 ಜನರಿಗೆ ಶಿಕ್ಷೆ

ಶನಿವಾರ, ಮೇ 25, 2019
22 °C

ದಲಿತ ಕುಟುಂಬದ ದಹನ ಪ್ರಕರಣ: 15 ಜನರಿಗೆ ಶಿಕ್ಷೆ

Published:
Updated:

ನವದೆಹಲಿ (ಪಿಟಿಐ): ಹರಿಯಾಣದ ದಲಿತ ಕುಟುಂಬವೊಂದರ ತಂದೆ ಮತ್ತು ಆತನ ವಿಕಲಾಂಗ ಮಗಳನ್ನು ಜೀವಂತ ದಹಿಸಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯ 15 ಜನರಿಗೆ ಶಿಕ್ಷೆ ವಿಧಿಸಿದೆ. ಇಲ್ಲಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಕಾಮಿನಿ ಲೌ ಅವರು ಶನಿವಾರ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಪ್ರಕಟಿಸಿದರು.ಜಾತಿ ವೈಷಮ್ಯದ ಹಿನ್ನೆಲೆಯಲ್ಲಿ ಕಳೆದ ವರ್ಷ ಹರಿಯಾಣದ ಮಿರ್ಚಾಪುರ ಗ್ರಾಮದಲ್ಲಿ ಜಾಟ್ ಜನಾಂಗಕ್ಕೆ ಸೇರಿದ ಗುಂಪು ದಲಿತ ಕುಟುಂಬದ ಮೇಲೆ ಈ ಅಮಾನುಷ ಹಲ್ಲೆ ನಡೆಸಿತ್ತು.  70 ವರ್ಷದ ವೃದ್ಧ ಮತ್ತು ಆತನ ಅಂಗವಿಕಲ ಮಗಳನ್ನು ಜೀವಂತವಾಗಿ ದಹಿಸಲಾಗಿತ್ತು. 97 ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry