ಮೈಸೂರು: `ಹರಿದು ಹಂಚಿ ಹೋಗಿ ರುವ ದಲಿತ ಸಂಘಟನೆ ವಿಲೀನವಾಗ ದಿದ್ದರೂ, ಒಗ್ಗಟ್ಟು ಪ್ರದರ್ಶಿಸಲಿ~ ಎಂದು ಸಾಹಿತಿ ದೇವನೂರ ಮಹಾದೇವ ಭಾನುವಾರ ಸಲಹೆ ನೀಡಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಶಾಖೆ ವಿದ್ಯಾರಣ್ಯಪುರಂನ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸರ್ವ ಸದಸ್ಯರ ಸಭೆ ಹಾಗೂ `ದಲಿತ ಚಳವಳಿಯ ವೈಫಲ್ಯತೆ ಹಾಗೂ ಮುಂದಿನ ಸವಾಲುಗಳು~ ವಿಷಯ ಕುರಿತ ಉಪನ್ಯಾಸ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.

`ಭಾರತವೂ ಸೇರಿದಂತೆ ಇಡೀ ಜಗತ್ತು ಕಾರ್ಪೋರೇಟ್ ಹಾಗೂ ಖಾಸಗಿ ವ್ಯಕ್ತಿಗಳ ಕೈ ಸೇರುತ್ತಿದೆ. ಉಳ್ಳವರ ತುಳಿತಕ್ಕೆ ಬಹುಸಂಖ್ಯಾತರು ಸಿಲುಕಿದ್ದಾರೆ. ದಲಿತರ, ಶೋಷಿತರ ಬದುಕು ಸಂಕಷ್ಟಕ್ಕೆ ತಳ್ಳಲ್ಪಡುತ್ತಿದೆ. ಅಸಮಾನತೆ ಬೆಳೆಯುತ್ತಲೇ ಇದೆ. ಆದರೆ ಈ ಎಲ್ಲ ಸಮಸ್ಯೆಗಳ ವಿರುದ್ಧ ಹೋರಾಡಬೇಕಾದ ಸಂಘಟನೆಗಳು ಮಾತ್ರ ದುರ್ಬಲಗೊಳ್ಳುತ್ತಿವೆ~ ಎಂದು ವಿಷಾದಿಸಿದರು.

`ಸಮಾನತೆಗಾಗಿ ಹೋರಾಟ ರೂಪಿಸ ಬೇಕಾದ ಕೈಗಳು ಇಂದು ಛಿದ್ರವಾಗಿವೆ. ಒಂದು ಕಾಲದಲ್ಲಿ ದಲಿತ ಚಳವಳಿ ಬಿರುಸು ಪಡೆದುಕೊಂಡಿತ್ತು. ಹಾಸ್ಟೆಲ್ಗಳಲ್ಲಿ ಈ ಚಳವಳಿ ಭದ್ರವಾಗಿ ನೆಲೆ ಯೂರಿತ್ತು. ಸಾವಿರ ಜನ ಕಾರ್ಯ ಕರ್ತರೂ ಇದ್ದರೂ ಪ್ರಬಲ ಹೋರಾಟ ರೂಪಗೊಳ್ಳುತ್ತಿತ್ತು. ಇಂದು ಲಕ್ಷಾಂ ತರ ಸಂಖ್ಯೆಯಲ್ಲಿ ಕಾರ್ಯ ಕರ್ತರು ಹುಟ್ಟಿಕೊಂಡಿದ್ದರೂ ಚಳವಳಿ ಮಾತ್ರ ಗಡುಸು ಪಡೆಯುತ್ತಿಲ್ಲ~ ಎಂದರು.

`ಖಾಸಗಿ ಉದ್ಯಮಗಳಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಸಾರ್ವಜನಿಕ ವಲಯದ ಉದ್ಯಮಗಳ ಬಾಗಿಲು ಮುಚ್ಚಲಾಗುತ್ತಿದೆ. ಖಾಸಗಿ ವಲಯ ದಲ್ಲಿ ದಲಿತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗುತ್ತಿದೆ. ರಾಜಕೀಯ ವಾಗಿಯೂ ಅವರನ್ನು ದೂರವಿಡ ಲಾಗಿದೆ. ಊರಾಚೆಯ ಜನರು ಶಾಶ್ವತ ವಾಗಿ ಅಲ್ಲಿಯೇ ನೆಲೆಸುವಂತೆ ಮಾಡುವ ಹುನ್ನಾರ ನಡೆದಿದೆ~ ಎಂದು ಹೇಳಿದರು.

`ರಾಣೆಬೆನ್ನೂರು ತಾಲ್ಲೂಕಿನ ನರಬಲಿ ಹಾಗೂ ಮಂಡ್ಯ ಜಿಲ್ಲೆಯ ಮರ್ಯಾದಾ ಹತ್ಯೆ ಕೃತ್ಯ ಖಂಡನೀಯ. ಮನೆಯ ಶಾಂತಿ ಪೂಜೆಗೆ ದಲಿತ ಯುವಕನನ್ನು ಬಲಿ ಕೊಡುವುದು ಯಾವ ನ್ಯಾಯ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿ ನಡೆದದ್ದು ಮರ್ಯಾದಾ ಹತ್ಯೆಯಲ್ಲ, ಅದು ಪೈಶಾಚಿಕ ಹತ್ಯೆ. ಮನುಷ್ಯತ್ವ ಇಲ್ಲದ ವ್ಯಕ್ತಿಗಳ ಮಾತ್ರ ಈ ರೀತಿ ಕೃತ್ಯಗಳಿಗೆ ಪ್ರೋತ್ಸಾಹಿಸುತ್ತಾರೆ. ಈ ಎಲ್ಲವುಗಳ ವಿರುದ್ಧ ದಸಂಸ ಹೋರಾಟ ಮಾಡಬೇಕಿದೆ.

ಹೋರಾಟ ಎಂಬುದು ಒಂಟಿ ಕಾಲಿನ ಓಟ ಆಗಬಾರದು~ ಎಂದು ಮಾರ್ಮಿಕವಾಗಿ ಹೇಳಿದರು.
ದಸಂಸ ಜಿಲ್ಲಾ ಸಂಚಾಲಕರಾದ ಬೆಟ್ಟಯ್ಯ ಕೋಟೆ, ನಿಂಗರಾಜು ಮಲ್ಲಾಡಿ, ದೇವನಹಳ್ಳಿ ಸೋಮ ಶೇಖರ್, ಹರಿಹರ ಆನಂದಸ್ವಾಮಿ, ಶಂಭುಲಿಂಗಸ್ವಾಮಿ, ಆಲಗೂಡು ಶಿವಕುಮಾರ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.