ಶನಿವಾರ, ಜನವರಿ 18, 2020
23 °C

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶ್ರೀಶಾಂತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶ್ರೀಶಾಂತ್‌

ಗುರುವಾಯೂರಂ (ಪಿಟಿಐ):  ಭಾರತ ತಂಡದ ಮಾಜಿ ವೇಗದ ಬೌಲರ್ ಎಸ್. ಶ್ರೀಶಾಂತ್ ರಾಜಸ್ಥಾನದ ಪ್ರತಿಷ್ಠಿತ ಮನೆತನದ ಭುವನೇಶ್ವರಿ ಕುಮಾರಿ ಅವರನ್ನು ವರಿಸಿದರು.ಗುರುವಾರ ಬೆಳಿಗ್ಗೆ ಇಲ್ಲಿನ ಶ್ರೀ ಕೃಷ್ಣ ದೇವಾಲಯದಲ್ಲಿ ನಡೆದ ಸರಳ ವಿವಾಹ ಸಮಾರಂಭದಲ್ಲಿ ಈ ಜೋಡಿ ನವ ಜೀವನಕ್ಕೆ ಕಾಲಿಟ್ಟಿತು. ಸಮಾರಂಭದಲ್ಲಿ ಕೆಲವೇ ಕೆಲವು ಸ್ನೇಹಿತರು ಹಾಗೂ ಸಂಬಂಧಿಕರು ಮಾತ್ರ ಪಾಲ್ಗೊಂಡಿದ್ದರು.ವೃತ್ತಿಯಲ್ಲಿ ಆಭರಣ ವಿನ್ಯಾಸಕಿಯಾ ಗಿರುವ ಭುವನೇಶ್ವರಿ ಹಾಗೂ ಶ್ರೀಶಾಂತ್ ಕಳೆದ ಆರು ವರ್ಷಗಳಿಂದ ಪರಿಚಿತರಾ ಗಿದ್ದರು.ಐಪಿಎಲ್ 6 ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ಶ್ರೀಶಾಂತ್ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರು. ಹೀಗಾಗಿ  ಅವರನ್ನು ಪೊಲೀಸರು ಬಂಧಿಸಿದ್ದರು. ನಂತರ  ಜಾಮೀನು  ಮೇಲೆ ಹೊರಬಂದಿದ್ದಾರೆ. ಅವರ ಮೇಲೆ ಬಿಸಿಸಿಐ ಆಜೀವ ನಿಷೇಧ ಹೇರಿದೆ.

ಪ್ರತಿಕ್ರಿಯಿಸಿ (+)