ಶನಿವಾರ, ಏಪ್ರಿಲ್ 17, 2021
23 °C

ದಾನಾಪುರದಲ್ಲಿ ಉರುಳಿದ ಧ್ವಜಸ್ಥಂಭ: ಧ್ವಜ ಕಟ್ಟುತ್ತಿದ್ದ ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ (ಪಿಟಿಐ): ಜಿಲ್ಲೆಯ ದಾನಾಪುರ ಗ್ರಾಮದಲ್ಲಿ ಬುಧವಾರ ಧ್ವಜಸ್ಥಂಭಕ್ಕೆ ರಾಷ್ಟ್ರಧ್ವಜವನ್ನು ಕಟ್ಟುತ್ತಿದ್ದಾಗ ಸ್ಥಂಭ ಉರುಳಿ ಧ್ವಜ ಕಟ್ಟುತ್ತಿದ್ದ ವ್ಯಕ್ತಿ ಮೃತನಾದ ಪರಿಣಾಮವಾಗಿ 66ನೇ ಸ್ವಾತಂತ್ರ್ಯೋತ್ಸವ ಸಡಗರ ದುಃಖಸಾಗರದಲ್ಲಿ ಪರ್ಯವಸಾನಗೊಂಡಿತು.ಮೃತ ವ್ಯಕ್ತಿಯನ್ನು ಪರಶುರಾಮ ಎಂಬುದಾಗಿ ಗುರುತಿಸಲಾಗಿದೆ. ಈತ ಖಾಸಗಿ ಉಕ್ಕು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ತಾನು ಧ್ವಜ ಕಟ್ಟುತ್ತಿದ್ದ ರಾಷ್ಟ್ರಧ್ವಜದ ಸ್ಥಂಭ ಹಠಾತ್ತನೆ ಮೇಲೆರಗಿ ಬಿದ್ದ ಪರಿಣಾಮವಾಗಿ ಪರಶುರಾಮ ಸಾವನ್ನಪ್ಪಿದ ಎಂದು ಪೊಲೀಸರು ಹೇಳಿದರು.ಧ್ವಜಸ್ಥಂಭ ಉರುಳುತ್ತಿದ್ದಂತೆಯೇ ಗಾಯಗೊಂಡಗೊಂಡ ಪರಶುರಾಮನನ್ನು ಖಾಸಗಿ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ಅಲ್ಲಿಗೆ ತರುವಷ್ಟರಲ್ಲೇ ಆತ ಮೃತನಾಗಿದ್ದುದಾಗಿ ವೈದ್ಯರು ಘೋಷಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.