ಶುಕ್ರವಾರ, ಮೇ 7, 2021
27 °C
ಮಹಿಳಾ ಬಾಂಬರ್‌ನಿಂದ ಕ್ವೆಟ್ಟಾ ವಿವಿ ಮೇಲೆ ದಾಳಿ: ಸತ್ತವರ ಸಂಖ್ಯೆ 26ಕ್ಕೆ ಏರಿಕೆ

ದಾಳಿ ಹೊಣೆ ಹೊತ್ತ ಲಷ್ಕರ್-ಎ-ಜಾಂಗ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಶನಿವಾರ ಕ್ವೆಟ್ಟಾ ಮಹಿಳಾ ವಿಶ್ವವಿದ್ಯಾಲಯದ ಮೇಲೆ ನಡೆದ ದಾಳಿಗೆ ಲಷ್ಕರ್-ಎ-ಜಾಂಗ್ವಿ ಕಾರಣವಾಗಿದ್ದು, ಈ ಸಂಘಟನೆಯ ಮಹಿಳಾ ಆತ್ಮಾಹುತಿ ಬಾಂಬರ್ ಒಬ್ಬಳು  ವಿಶ್ವವಿದ್ಯಾಲಯದ ಬಸ್ಸಿನಲ್ಲಿದ್ದುಕೊಂಡು ವಿಧ್ವಂಸಕ ಕೃತ್ಯ ಎಸಗಿದ್ದರೆ ಆಕೆಯ ಪುರುಷ ಸಹಾಯಕರು, ಗಾಯಾಳುಗಳು ದಾಖಲಾದ ಆಸ್ಪತ್ರೆಯಲ್ಲಿ ದಾಳಿ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಎರಡೂ ದಾಳಿಗಳಲ್ಲಿ ಸತ್ತವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.ನಿಷೇಧಿತ ಸಂಘಟನೆ ಲಷ್ಕರ್-ಎ-ಜಾಂಗ್ವಿ ಶನಿವಾರ ನಡೆದ ಎರಡೂ ದಾಳಿಯ ಹೊಣೆ ಹೊತ್ತುಕೊಂಡಿದ್ದು, ಭದ್ರತಾ ಸಿಬ್ಬಂದಿ ತಮ್ಮ ಗುಂಪಿನ ವಿರುದ್ಧ ಖರೋತಾಬಾದ್ ಪ್ರದೇಶದಲ್ಲಿ ನಡೆಸಿದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಿರುವುದಾಗಿ ಹೇಳಿದೆ.ಆತ್ಮಾಹುತಿ ಬಾಂಬರ್  ಸರ್ದಾರ್ ಬಹಾದ್ದೂರ್ ಖಾನ್ ವಿಶ್ವವಿದ್ಯಾಲಯದ ಬಸ್ಸಿನಲ್ಲಿ ಶನಿವಾರ ದಾಳಿ ನಡೆಸಿದ್ದು, ಘಟನೆಯಲ್ಲಿ 14 ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು.ಆನಂತರ ಗಾಯಾಳುಗಳು ದಾಖಲಾದ ಬೊಲನ್ ಮೆಡಿಕಲ್ ಆಸ್ಪತ್ರೆಯ ಹೊರಗಡೆ  ಪುರುಷ ಆತ್ಮಾಹುತಿ ಬಾಂಬರ್ ಹಿರಿಯ ಅಧಿಕಾರಿಗಳ ಬರುವಿಕೆಗಾಗಿ ಕಾಯುತ್ತಾ ನಿಂತಿದ್ದು, ಬಳಿಕ ಸ್ಫೋಟಿಸಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಭದ್ರತಾ ಪಡೆಯವರು ಒಬ್ಬ ಉಗ್ರನನ್ನು ಸೆರೆ ಹಿಡಿದಿದ್ದಾರೆ.26 ಮಂದಿ ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಬಾಬರ್ ಯಾಕೂಬ್ ಫತೇ ಮುಹಮದ್ ಖಚಿತಪಡಿಸಿದ್ದಾರೆ.ಆಸ್ಪತ್ರೆ ಮೇಲೆ ನಡೆದ ದಾಳಿಯಲ್ಲಿ ಎಷ್ಟು ಉಗ್ರರು ಭಾಗಿಯಾಗಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

ಲಷ್ಕರ್ -ಎ-ಜಾಂಗ್ವಿಯ ವಕ್ತಾರ ಅಬುಬಕರ್ ಸಿದ್ದಿಖಿ ಕ್ವೆಟ್ಟಾ ಪ್ರೆಸ್ ಕ್ಲಬ್‌ನ್ನು ದೂರವಾಣಿ ಮೂಲಕ ಸಂಪರ್ಕಿಸಿ ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ.

ಬಲೂಚಿಸ್ತಾನ ಸರ್ಕಾರ ಭಾನುವಾರ ಶೋಕ ದಿನಾಚರಣೆ ಘೋಷಿಸಿದ್ದು, ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಹಾರಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.