ಶನಿವಾರ, ಜನವರಿ 18, 2020
18 °C

ದಿಕ್ಸೂಚಿ ಅಲ್ಲ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐದು ರಾಜ್ಯಗಳ ವಿಧಾ­ನ­­ಸಭಾ ಚುನಾವಣಾ ಫಲಿತಾಂಶ ಮುಂಬ­ರುವ ಲೋಕಸಭೆ ಚುನಾವ­ಣೆ­ಗೆ ದಿಕ್ಸೂಚಿ ಅಲ್ಲ ಎಂದು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ­ಪಟ್ಟರು.ಈ ಚುನಾವಣೆ ಫಲಿತಾಂಶವನ್ನು ಒಪ್ಪಿಕೊಂಡು ಆತ್ಮಾವಲೋಕನ ಮಾಡಿ­ಕೊ­ಳ್ಳಬೇಕು. ಆದರೆ, ವಿಧಾನ­ಸಭೆ ಮತ್ತು ಲೋಕಸಭೆ ಚುನಾವಣೆ­ಗಳ ನಡುವೆ ವ್ಯತ್ಯಾಸವಿದೆ. ಆದ್ದ­ರಿಂದ, ಈ ಫಲಿತಾಂಶ ಲೋಕಸಭೆ ಚುನಾವಣೆ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಎಂದು ಪ್ರತಿಪಾದಿಸಿದರು.ಈ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಅಲೆ ಯಾವುದೇ ರೀತಿ ಕೆಲಸ ಮಾಡಿಲ್ಲ ಎಂದರು.

ಪ್ರತಿಕ್ರಿಯಿಸಿ (+)