ಶುಕ್ರವಾರ, ಮೇ 20, 2022
21 °C

ದೀಪಾವಳಿ: ಏರುತ್ತಿರುವ ಚಿನ್ನದ ಬೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ದೀಪಾವಳಿ  ಹತ್ತಿರ ಬರುತ್ತಿದ್ದಂತೆ ಚಿನ್ನಾಭರಣಗಳ ಬೆಲೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಕಳೆದ ಎರಡು ವಹಿವಾಟಿನ ದಿನಗಳಲ್ಲಿ ಚಿನ್ನ 10 ಗ್ರಾಂಗಳಿಗೆ ರೂ. 250 ಮತ್ತು ರೂ. 220ರಂತೆ ಏರಿಕೆಯಾಗಿದೆ.

ಬೆಳ್ಳಿ ಧಾರಣೆಯೂ ಶನಿವಾರ ಕೆ.ಜಿಗೆ ರೂ. 750 ಏರಿಕೆಯಾಗಿದ್ದು, ರೂ. 53,650ರಷ್ಟಾಗಿದೆ. ಸದ್ಯ ಮುಂಬೈ ಚಿನಿವಾರ ಪೇಟೆಯಲ್ಲಿ 99.9 ಮತ್ತು 99.5 ಶುದ್ಧತೆ ಚಿನ್ನದ ಧಾರಣೆ ರೂ. 26,800 ಮತ್ತು ರೂ. 26,670 ರಷ್ಟಿದೆ.

ಸಾಗರೋತ್ತರ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಹೂಡಿಕೆ ಹೆಚ್ಚಿರುವುದು, ವಿಶೇಷವಾಗಿ ಹಬ್ಬದ ವ್ಯಾಪಾರಕ್ಕಾಗಿ ವ್ಯಾಪಾರಿಗಳಿಂದ ಚಿನ್ನದ ಖರೀದಿ ಹೆಚ್ಚಿರುವುದು ಬೆಲೆ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.