ಭಾನುವಾರ, ಮೇ 16, 2021
22 °C

ದುಬಾರಿ ರಾಷ್ಟ್ರಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರಪತಿ ಪ್ರತಿಭಾ ಪಾಟೀಲರು ತಮ್ಮ ನಾಲ್ಕೂವರೆ ವರ್ಷಗಳ ಅಧಿಕಾರಾವಧಿಯಲ್ಲಿ ವಿದೇಶ ಯಾತ್ರೆಗೆ ಬರೋಬರಿ 205 ಕೋಟಿ ವೆಚ್ಚ ಮಾಡಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಖರ್ಚು ಭರಿಸುವ ಶಕ್ತಿ ನಮ್ಮ ದೇಶಕ್ಕೆ ಇದೆಯೇ?ದೇಶದ ಸಾವಿರಾರು ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಕುಡಿಯುವ ನೀರು, ರಸ್ತೆ, ಶಾಲೆ, ಆಸ್ಪತ್ರೆಗಳಿಲ್ಲ. ಲಕ್ಷಾಂತರ ಜನರಿಗೆ ತಲೆಯ ಮೇಲೊಂದು ಸೂರಿಲ್ಲ. ಮಕ್ಕಳನ್ನು ಸಾಕಲು ಶಕ್ತಿ ಇಲ್ಲದ ತಾಯಂದಿರು ಅವರನ್ನು ಮಾರುವಂತಹ ಬಡತನದಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿ ಇರುವಾಗ ರಾಷ್ಟ್ರಪತಿಯವರು 205 ಕೋಟಿ ರೂಗಳನ್ನು ಪ್ರವಾಸಕ್ಕೆ ಖರ್ಚು ಮಾಡುವುದು ಉಚಿತವೇ?ಅವರು ತಮ್ಮ ಪ್ರವಾಸವನ್ನು ಮೊಟಕು ಮಾಡಿ ಆ ಹಣವನ್ನು ಗ್ರಾಮೀಣ ಜನರ ಸೌಲಭ್ಯಗಳಿಗೆ ನೀಡಿದ್ದರೆ ಅವರು ಎಲ್ಲರಿಗೂ ಮಾದರಿ ಆಗುತ್ತಿದ್ದರು. ಇಷ್ಟು ದುಬಾರಿ ರಾಷ್ಟ್ರಪತಿ ದೇಶಕ್ಕೆ ಅಗತ್ಯ ಇದೆಯೇ ಎಂಬ ಬಗ್ಗೆ  ಸಾರ್ವಜನಿಕರು ಯೋಚಿಸಬೇಕು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.