ಶನಿವಾರಸಂತೆ: ಇಲ್ಲಿನ 700 ಮೀಟರ್ವರೆಗಿನ ಬೈಪಾಸ್ರಸ್ತೆ ಆರು ವರ್ಷಗಳಿಂದ ದುರಸ್ತಿ ಕಾಣದೆ ಸುಗಮ ಸಂಚಾರಕ್ಕೆ ತೊಡಕಾಗಿದೆ.
ಬಿಜೆಪಿ ಸರ್ಕಾರದ ಅನುದಾನದಿಂದ ಶಾಸಕರಾದ ಅಪ್ಪಚ್ಚುರಂಜನ್ ಮತ್ತು ಬೋಪಯ್ಯ ಅವರ ಅಧಿಕಾರವಧಿಯಲ್ಲಿ ಕೊಡಗಿನ ಬಹುತೇಕ ರಸ್ತೆಗಳು ಸರ್ವ ಋತು ರಸ್ತೆಗಳಾಗಿ ಮಾರ್ಪಟ್ಟವು. ಅದೇ ರೀತಿ ಶನಿವಾರಸಂತೆ ಪಟ್ಟಣದ ಫೀಲ್ಡ್ಮಾರ್ಷಲ್ ಕಾರ್ಯಪ್ಪ ರಸ್ತೆ ಹಾಗೂ 4 ವಿಭಾಗಗಳ ಎಲ್ಲ ಅಡ್ಡರಸ್ತೆಗಳೂ ಅಭಿವೃದ್ಧಿಯಾದವು. ಆದರೆ ಈ ಬೈಪಾಸ್ ರಸ್ತೆಗೆ ಮಾತ್ರ ಅಭಿವೃದ್ಧಿಯ ಭಾಗ್ಯ ದೊರೆತಿಲ್ಲ.

ಅಲ್ಲಲ್ಲಿ ಗುಂಡಿ ಬಿದ್ದಿರುವ ಪರಿಣಾಮ ಮಳೆ ನೀರು ನಿಂತು ಬೈಪಾಸ್ ರಸ್ತೆ ಹೊಂಡವಾಗಿ ಪರಿವರ್ತಿತವಾಗುತ್ತದೆ. ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಎಚ್ಚರಿಕೆಯಿಂದ ಪ್ರಯಾಣ ಮಾಡಬೇಕಿದೆ. ಕೆಲವೊಮ್ಮೆ ದ್ವಿಚಕ್ರ ವಾಹನ ಸವಾರರು ಗುಂಡಿಗಳಲ್ಲಿ ಬಿದ್ದು ಗಾಯಗೊಂಡಿರುವುದೂ ಉಂಟು.

ಪಟ್ಟಣದ ಸಹಕಾರ ಬ್ಯಾಂಕಿನಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದವರೆಗೆ ಸಾಗುವ ಈ ಬೈಪಾಸ್ ರಸ್ತೆ ಜಿಲ್ಲಾ ಪಂಚಾಯಿತಿ ಆಡಳಿತಕ್ಕೆ ಒಳಪಟ್ಟಿದೆ. ಈ ರಸ್ತೆಯಲ್ಲಿ ಅತ್ಯಧಿಕ ವಾಹನ ಸಂಚಾರವಿದೆ. ಶಾಲಾ-ಕಾಲೇಜುಗಳಿದ್ದು ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರು ಸಂಚರಿಸುವುದು ಇದೇ ರಸ್ತೆಯಲ್ಲಿ. ಇದೇ ರಸ್ತೆಯಲ್ಲಿ ಸಂತೆ ಮಾರುಕಟ್ಟೆ, ದೂರವಾಣಿ ವಿನಿಮಯ ಕೇಂದ್ರ, ಅಕ್ಕಿಗಿರಣಿಗಳು, ಅಂಗಡಿಮುಂಗಟ್ಟು ಇರುವುದರಿಂದ ಸಹಜವಾಗಿಯೇ ಜನಸಂದಣಿ ಹೆಚ್ಚಾಗಿರುತ್ತದೆ.

ಬೈಪಾಸ್ ರಸ್ತೆಯು ಜಿಲ್ಲಾ ಪಂಚಾಯಿತಿ ಆಡಳಿತಕ್ಕೆ ಒಳಪಟ್ಟಿದ್ದರೂ, ರಸ್ತೆಯ ಬಲಭಾಗದ ಬದಿ ಮತ್ತು ಚರಂಡಿ ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ಸೇರುತ್ತದೆ. ಎಡಭಾಗದ ರಸ್ತೆ ಬದಿ ಮತ್ತು ಚರಂಡಿ ದುಂಡಳ್ಳಿ ಗ್ರಾಮ ಪಂಚಾಯಿತಿಗೆ ಸೇರುತ್ತದೆ. ದುರಸ್ತಿ ಕಾಣದ ಚರಂಡಿಗಳಲ್ಲಿ ಮಣ್ಣು ತುಂಬಿಕೊಂಡಿದೆ. ಕಳೆ ಸಸ್ಯ, ಪೊದೆಗಳು ಬೆಳೆದು ನಿಂತಿವೆ. ಇದರಿಂದ ನೀರು ಚರಂಡಿಯಲ್ಲಿ ಹರಿಯದೇ ರಸ್ತೆ ಮೇಲ್ಭಾಗದಲ್ಲಿ ಹರಿದು ಹೋಗುತ್ತಿದೆ. ಇನ್ನ ಕೆಲವೆಡೆ ಚರಂಡಿ ವ್ಯವಸ್ಥೆಯೇ ಇಲ್ಲ.

ಚುನಾವಣೆಗೆ ಮೊದಲು ಪ್ರವಾಸಿ ಮಂದಿರದಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದವರೆಗೆ ಮಳೆ ಪರಿಹಾರ ಯೋಜನೆಯಡಿ ರಸ್ತೆ ದುರಸ್ತಿ ಕಂಡಿದೆ. ಆದರೆ, ಸಹಕಾರ ಬ್ಯಾಂಕಿನಿಂದ ಪ್ರವಾಸಿ ಮಂದಿರದವರೆಗಿನ ರಸ್ತೆ ಬಹುತೇಕ ಹದಗೆಟ್ಟಿದೆ.

ಶನಿವಾರಸಂತೆ ಮತ್ತು ದುಂಡಳ್ಳಿ ಗ್ರಾಮ ಪಂಚಾಯಿತಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾ ಪಂಚಾಯಿತಿ ಜನಪ್ರತಿನಿಧಿಗಳು ಬೈಪಾಸ್ ರಸ್ತೆ ದುರಸ್ತಿ ಬಗ್ಗೆ ಶೀಘ್ರ ಕ್ರಮಕೈಗೊಳ್ಳಬೇಕು ಎಂಬುದು ನಾಗರಿಕರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.