ಜಮಖಂಡಿ: ಸಮಾಜದ ಅತ್ಯಂತ ದುರ್ಬಲ ವ್ಯಕ್ತಿಗೂ ಸಹ ರಕ್ಷಣೆ ನೀಡಿ ಗೌರವಯುತ ಮತ್ತು ಸ್ವಾಭಿಮಾನದ ಬದುಕು ರೂಪಿಸಿಕೊಳ್ಳುವ ಪರಿಸರ ನಿರ್ಮಾಣ ಮಾಡುವುದು ಮಾನವ ಹಕ್ಕುಗಳ ಉದ್ದೇಶವಾಗಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಾ.ಎಸ್.ಆರ್. ನಾಯಕ ಹೇಳಿದರು.

ಸ್ಥಳೀಯ ಬಿಎಲ್ಡಿ ಶಿಕ್ಷಣ ಸಂಸ್ಥೆಯ ವಾಣಿಜ್ಯ, ಬಿಎಚ್ಎಸ್ ಕಲೆ ಮತ್ತು ಟಿಜಿಪಿ ವಿಜ್ಞಾನ ಕಾಲೇಜಿನ ಆಶ್ರಯದಲ್ಲಿ `ಭಾರತದಲ್ಲಿ ಮಾನವ ಹಕ್ಕುಗಳು: ಸಿದ್ಧಾಂತ ಮತ್ತು ಆಚರಣೆಗಳು~ ಕುರಿತು ಐತಿಹಾಸಿಕ ದರ್ಬಾರ್ ಹಾಲ್ನಲ್ಲಿ ಸೋಮವಾರ ಏರ್ಪಡಿಸಿದ್ದ ಯುಜಿಸಿ ಪ್ರಾಯೋಜಿತ ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಅನಿಷ್ಠಗಳನ್ನು ತೆಗೆದು ಹಾಕಲು ಹಾಗೂ ದುಡ್ಡೇ ದೊಡ್ಡಪ್ಪ ಎಂಬ ಸಂಸ್ಕೃತಿಯಿಂದ ಹೊರಬರಲು ಮಾನವ ಹಕ್ಕುಗಳು ಸಹಾಯಕವಾಗಿವೆ. ಆದರೆ ವೇದ ಕಾಲದಿಂದಲೂ ಹೇಳಿಕೊಂಡು ಬರುತ್ತಿರುವ ಮಾನವ ಹಕ್ಕುಗಳು ಮಾತ್ರ ನಿಜವಾದ ಅರ್ಥದಲ್ಲಿ ಆಚರಣೆಯಲ್ಲಿ ಬರುತ್ತಿಲ್ಲ ಎಂದು ವಿಷಾದಿಸಿದ ಅವರು ಬದಲಾವಣೆ ತರಲು ಇಂದಿನ ಯುವ ಪೀಳಿಗೆ ಸನ್ನದ್ಧರಾಗಬೇಕು ಎಂದರು.

ಕರ್ನಾಟಕ ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ ವಿಭಾಗದ ಪ್ರೊ.ಹರೀಶ ರಾಮಸ್ವಾಮಿ, ಮಾನವ ಹಕ್ಕುಗಳು ಕುರಿತು ಇರುವ ಸಿದ್ಧಾಂತ ಮತ್ತು ಆಚರಣೆಗಳು ಬೇರೆ ಬೇರೆ ಆಗಿರುವುದಕ್ಕೆ ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ತೀವ್ರ ಅಗತ್ಯವಿದೆ ಎಂದು ವಿಚಾರ ಸಂಕಿರಣದ ಆಶಯ ನುಡಿಗಳನ್ನಾಡಿದರು.

ಕಾಲೇಜು ಶಿಕ್ಷಣ ಇಲಾಖೆಯ ಧಾರವಾಡ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಡಾ.ದೇವಾನಂದ ಗಾಂವಕರ ಮುಖ್ಯ ಅತಿಥಿಯಾಗಿ ಮಾತನಾಡಿ, ಮಾನವ ಹಕ್ಕುಗಳ ರಕ್ಷಣೆ ಆಗಬೇಕಾದರೆ ಇಂದಿನ ಯುವಕರಿಗೆ ಅಧ್ಯಾತ್ಮಿಕ ಸಂಸ್ಕಾರ ನೀಡಬೇಕು ಮತ್ತು ಜಾತೀಯತೆ ತೊಲಗಬೇಕು ಎಂದರು.

ಆಡಳಿತಾಧಿಕಾರಿ ಪ್ರೊ.ಎಸ್.ಎಚ್.ಲಗಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೂಜಾ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಪ್ರಾಚಾರ್ಯ ಡಾ.ಎಸ್.ಎಸ್. ಸುವರ್ಣಖಂಡಿ ಸ್ವಾಗತಿಸಿದರು. ಡಾ.ಟಿ.ಪಿ.ಗಿರಡ್ಡಿ, ಡಾ.ವೈ. ತಮ್ಮಣ್ಣ, ಡಾ.ಎಸ್.ಎಂ. ಬಿಜಾಪುರ, ಪ್ರೊ.ಎಸ್.ಬಿ. ಕಮತಿ ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ಬಸಮ್ಮ ಭಾಗೋಜಿ ನಿರೂಪಿಸಿದರು. ಪ್ರೊ.ಬಸವರಾಜ ಕಡ್ಡಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.