ಶುಕ್ರವಾರ, ಮೇ 7, 2021
18 °C

`ದೆಹಲಿ, ಗುಜರಾತ್‌ನಲ್ಲಿಲ್ಲ ಹೆಣ್ಣಿಗೆ ಮರ್ಯಾದೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: `ರಾಷ್ಟ್ರದ ರಾಜಧಾನಿ ದೆಹಲಿ, ರಾಜಸ್ತಾನ, ಗುಜರಾತ್ ರಾಜ್ಯಗಳಲ್ಲಿ ಹೆಣ್ಣುಮಕ್ಕಳಿಗೆ ಗೌರವವೇ ಇಲ್ಲ. ಆದರೆ ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಣ್ಣುಮಕ್ಕಳಿಗೆ ಅಪಾರ ಗೌರವವಿದೆ' ಎಂದು 99 ಕ್ಯಾನನ್ಸ್ ಮೋಟರ್ ಸೈಕಲ್ ಕ್ಲಬ್‌ನ ಅಧ್ಯಕ್ಷ ಸಂಜೀವ ಭಾಟಿಯಾ ಹೇಳಿದರು.`ಹೆಣ್ಣುಮಕ್ಕಳ ಸಬಲೀಕರಣದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕ್ಲಬ್‌ನ 14 ಸದಸ್ಯರು ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ರಾಯಲ್ ಎನ್‌ಫೀಲ್ಡ್ ಬೈಕ್ ಮೂಲಕ ಕೈಗೊಂಡಿದ್ದ ಯಾತ್ರೆಯ ಅನುಭವಗಳನ್ನು ಭಾನುವಾರ ಇಲ್ಲಿಯ ಮಾಳಮಡ್ಡಿಯ ವನವಾಸಿ ರಾಮಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಂಚಿಕೊಂಡ ಅವರು, `ಗ್ರಾಮ, ಪಟ್ಟಣಗಳನ್ನು ತಲುಪಿ ಅಲ್ಲಿ ಸ್ತ್ರೀಯರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ಅರಿತುಕೊಂಡೆವು. ಜನಗಳಿಗೆ ಈ ಬಗ್ಗೆ ತಿಳಿವಳಿಕೆ ನೀಡಿ, ಕರಪತ್ರಗಳನ್ನೂ ಹಂಚಿದೆವು. ದೆಹಲಿ, ಹರ‌್ಯಾಣ, ಗುಜರಾತ್‌ನ ಹೊರವಲಯದಲ್ಲಿ ಅತ್ಯಾಚಾರಗಳು, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆಯಿತು. ಆದರೆ ಹಿಮಾಚಲ ಪ್ರದೇಶ, ಕಾಶ್ಮೀರ ಕಣಿವೆಯ ಹಲವು ಭಾಗಗಳಲ್ಲಿ ಅತ್ಯಾಚಾರ ಪ್ರಕರಣಗಳು ನಡೆಯುವುದಿರಲಿ, ಹುಡುಗಿಯರನ್ನು ಚುಡಾಯಿಸುವುದೂ ಕಂಡು ಬರಲಿಲ್ಲ' ಎಂದರು.'ಅತ್ಯಂತ ಉಷ್ಣ ವಲಯದಿಂದ ಕಡಿಮೆ ಉಷ್ಣವಲಯದಲ್ಲಿಯೂ ನಾವು ಪ್ರವಾಸ ಮಾಡಿದೆವು. ಕರ್ನಾಟಕ ನೋಂದಣಿ ಇರುವ ನಮ್ಮ ಬೈಕ್‌ಗಳನ್ನು ಕಂಡಕೂಡಲೇ ಅಲ್ಲಿ ನೆಲೆಸಿರುವ ರಾಜ್ಯದ ಮಿಲಿಟರಿ ಅಧಿಕಾರಿಗಳು ನಮ್ಮನ್ನು ಆದರದಿಂದ ಸ್ವಾಗತಿಸಿದರು' ಎಂದು ಸ್ಮರಿಸಿದರು.ಬೈಕ್ ಸವಾರರನ್ನು ಸ್ವಾಗತಿಸಿದ ಶಾಸಕ ಅರವಿಂದ ಬೆಲ್ಲದ, `ಸ್ತ್ರೀಯರನ್ನು ಗೌರವಿಸುವ, ಸಬಲೀಕರಣಗೊಳಿಸುವ ನಮ್ಮ ಪ್ರಯತ್ನ ಇನ್ನೂ ದೂರ ಸಾಗಬೇಕಾಗಿದೆ. ಇದು ವಾಸ್ತವವಾದರೂ ಸತ್ಯ' ಎಂದರು. ಲೇಖಕಿ ಪ್ರೊ.ಸುಕನ್ಯಾ, ಕೋಟ್ಯಾಳ ಸಹೋದರರು ವೇದಿಕೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.