ಶುಕ್ರವಾರ, ಸೆಪ್ಟೆಂಬರ್ 20, 2019
29 °C

ದೆಹಲಿ ಸ್ಫೋಟ: ಇಬ್ಬರು ಪೊಲೀಸ್ ವಶಕ್ಕೆ

Published:
Updated:

ಜೈಪುರ (ಐಎಎನ್‌ಎಸ್): ದೆಹಲಿ ಹೈಕೋರ್ಟ್ ಬಾಂಬ್ ಸ್ಫೋಟದ ಶಂಕಿತರ ರೇಖಾಚಿತ್ರಗಳನ್ನು ಹೋಲುತ್ತಿದ್ದ ಇಬ್ಬರು ಯುವಕರನ್ನು ರಾಜಸ್ತಾನದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿ ಇಬ್ಬರು ಶಂಕಿತರು ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಇವರು ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯವರೆಂದು ಪೊಲೀಸರು ತಿಳಿಸಿದ್ದಾರೆ. ಇವರು ಸಂಶಯಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದರು. ವಶಕ್ಕೆ ಪಡೆದು ತನಿಖೆ ನಡೆಸಿದಾಗ ಇವರ ಮುಖವು ರೇಖಾಚಿತ್ರದ ಮುಖವನ್ನು ಹೋಲುತ್ತಿತ್ತೆಂದು ಪೊಲೀಸರು ತಿಳಿಸಿದ್ದಾರೆ.ತಕ್ಷಣವೇ ಕಾರ್ಯತತ್ಪರರಾಗಿರುವ ಸ್ಫೋಟದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶಂಕಿತರನ್ನು ವಶಕ್ಕೆ ಪಡೆಯಲು ಅಲ್ವಾರ್ ಜಿಲ್ಲೆಗೆ ಧಾವಿಸಿದೆ. ಇದರಿಂದ ಜೈಪುರ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

Post Comments (+)