ಜಾವಗಲ್: ಇತಿಹಾಸ ಪ್ರಸಿದ್ಧ ಲಕ್ಷ್ಮೀನರಸಿಂಹಸ್ವಾಮಿ ದೇಗುಲದ ಸಂರಕ್ಷಣೆಗಾಗಿ 75 ಲಕ್ಷ ರೂಪಾಯಿ ಬಿಡುಗಡೆಯಾಗಿದ್ದು, ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ.

ಹೊಯ್ಸಳರ ವಾಸ್ತು ಶಿಲ್ಪಕ್ಕೆ ಹೆಸರಾಗಿದ್ದ ಬೇಲೂರು, ಹಳೇಬೀಡು ದೇಗುಲದಂತೆಯೇ ಜಾವಗಲ್ ದೇವಾಲಯವೂ ಆಕಷರ್ಕ ಶಿಲ್ಪಿ ಗಳಿಂದ ಕೂಡಿದೆ. ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಸರ್ಕಾರ ಬಿಡುಗಡೆ ಮಾಡಿದ ರೂ.60 ಲಕ್ಷ ಅನುದಾನದಲ್ಲಿ ಮುಖ್ಯ ದ್ವಾರದ ಮಹಾಲಕ್ಷ್ಮಿ ದೇಗುಲ, ಮುಖ ಮಂಟಪದ ಸಂರಕ್ಷಣೆ ಕಾಮಗಾರಿ ಪೂರ್ಣಗೊಂಡಿವೆ.

ನರಸಿಂಹಸ್ವಾಮಿ ದೇಗುಲದ ದುರಸ್ತಿಗೆ ಪುನಃ ರೂ. 75 ಲಕ್ಷ ಹಣ ಬಿಡುಗಡೆಯಾಗಿದೆ. ಅನುಭವಿ ಶಿಲ್ಪಿಗಳ ತಂಡ ಕೆಲಸ ಆರಂಭಿಸಿದೆ. ರೂ.75 ಲಕ್ಷ ವೆಚ್ಚದ ಕಾಮಗಾರಿ ವೀಕ್ಷಣೆಗೆ ಪ್ರಾಚ್ಯವಸ್ತು ಇಲಾಖೆಯ ಎಂಜಿನಿಯರ್ ಅಶ್ವತ್ಥನಾರಾಯಣ, ಇಲಾಖೆಯ ಆಯುಕ್ತ ವಸ್ತ್ರದ್, ಸಮಿತಿ ಸದಸ್ಯ ಎಂ.ಎಂ. ರಾಯಚೂರು ಅವರು ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ್ದಾರೆ.

ದೇಗುಲದ ಸುತ್ತಲೂ ಉದ್ಯಾನ, ನೆಲಹಾಸು ನಿರ್ಮಾಣ, ಮಹಾಲಕ್ಷ್ಮಿ ಅಮ್ಮನವರ ಗೋಪುರ, ಪಾಕಶಾಲಾ, ಹದಿನಾರು ಕಾಲು ಮಂಟಪದ ದುರಸ್ತಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.