ಶುಕ್ರವಾರ, ಜನವರಿ 24, 2020
21 °C

ದೇವಯಾನಿ ಪ್ರಕರಣ: ಮುಗಿಯದ ಬಿಕ್ಕಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ರಾಜತಾಂತ್ರಿಕ ಅಧಿ­ಕಾರಿ ದೇವಯಾನಿ ಖೋಬ್ರಾಗಡೆ ಬಂಧನದಿಂದ  ಉದ್ಭವಿಸಿರುವ ರಾಜ­ತಾಂತ್ರಿಕ ಬಿಕ್ಕಟ್ಟನ್ನು ಶಮನಗೊಳಿಸಲು ಭಾರತ ಮತ್ತು ಅಮೆರಿಕ ಕಸರತ್ತು ನಡೆಸಿದ್ದರೂ ಪ್ರಕರಣ ಕಗ್ಗಂಟಾಗಿಯೇ ಮುಂದುವರಿದಿದೆ.ಉಭಯ ರಾಷ್ಟ್ರಗಳ ನಡುವಿನ ದ್ವಿಪ­ಕ್ಷೀಯ ರಾಜತಾಂತ್ರಿಕ ಸಂಬಂಧವನ್ನು ಪರಸ್ಪರ ಗೌರವಿಸುವ ಮತ್ತು ಕಾಪಾಡಿ­ಕೊಂಡು ಹೋಗುವ ದಿಸೆಯಲ್ಲಿ ಪ್ರಕರ­ಣ­­ವನ್ನು ಅಂತ್ಯಗೊಳಿಸಲು ಯತ್ನಿಸುತ್ತಿ­ರುವು­ದಾಗಿ ಎರಡೂ ರಾಷ್ಟ್ರಗಳು ಹೇಳಿಕೊಂಡಿವೆ. ಆದರೂ, ಮುಸುಕಿನ   ಗುದ್ದಾಟ  ಮುಂದು­ವರಿದಿದೆ.ರಾಜತಾಂತ್ರಿಕ ರಕ್ಷಣೆ ಒದಗಿಸುವ ಉದ್ದೇಶದಿಂದ ಭಾರತವು ದೇವಯಾನಿ ಅವರನ್ನು ವಿಶ್ವಸಂಸ್ಥೆಗೆ  ವರ್ಗಾಯಿಸಿದೆ.ತಾರ್ಕಿಕ ಅಂತ್ಯ:  ‘ದೇವಯಾನಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಂಡುಹಿಡಿ­ಯಲು  ಹಲವು ಹಂತಗಳಲ್ಲಿ ರಾಜತಾ­ಂತ್ರಿಕ  ಮಾರ್ಗಗಳ ಮೂಲಕ ಮಾತುಕತೆ ನಡೆಯುತ್ತಿದೆ. ಆದರೆ, ಮಾರ್ಗಗಳಲ್ಲಿ ಅಡೆತಡೆಗಳು ಎದುರಾಗಿವೆ’ ಎಂದು ವಿದೇ­ಶಾಂಗ ವ್ಯವಹಾರಗಳ ಸಚಿವ ಸಲ್ಮಾನ್‌ ಖುರ್ಷಿದ್ ತಿಳಿಸಿದ್ದಾರೆ.ಭಾರತದೊಂದಿಗೆ ಮಾತುಕತೆ ನಡೆ­ಯು­ತ್ತಿರುವುದಾಗಿ ಅಮೆರಿಕ ವಿದೇ­ಶಾಂಗ ಇಲಾಖೆಯ ವಕ್ತಾರರೂ ಸ್ಪಷ್ಟಪಡಿಸಿದ್ದಾರೆ. ‘ರಾಜತಾಂತ್ರಿಕ ಅಧಿ­ಕಾರಿ­ಯನ್ನು ಬಂಧಿಸುವ ಮೂಲಕ ಅಮೆರಿಕ ನಮ್ಮ ನಂಬುಗೆ ಹುಸಿ­ಗೊಳಿ­ಸಿದೆ.  ಮೈತ್ರಿ ಧರ್ಮ  ಪಾಲಿಸದಿ­ರು­ವುದು ಕಳವಳಕಾರಿ’ ಎಂದಿದ್ದಾರೆ.ಸೌದಿ ರಾಜಕುಮಾರನ  ಪ್ರಕರಣದ ತಳಕು: ದೇವಯಾನಿ ಪ್ರಕರಣಕ್ಕೆ 1982ರಲ್ಲಿ ನಡೆದ ಸೌದಿ ರಾಜಕು­ಮಾರ ಅಬ್ದುಲ್‌ ಅಜೀಜ್‌ ಪ್ರಕರಣ­ವನ್ನು ಹೋಲಿಕೆ ಮಾಡಲಾಗುತ್ತಿದೆ.ಫ್ಲಾರಿಡಾದ ಡೇಡ್‌ ಪ್ರಾಂತ್ಯದಲ್ಲಿ ಈಜಿಪ್ಟ್‌ ಮಹಿಳೆಯೊಬ್ಬಳನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಸೌದಿ ರಾಜಕುಮಾರ ಬಂಧಿಸಿಟ್ಟಿದ್ದ. ಆಗ, ಆತನಿಗೆ ರಾಜತಾಂತ್ರಿಕ ರಕ್ಷಣೆ ಅಥವಾ ವಿನಾಯ್ತಿ ಇರಲಿಲ್ಲ. ಮೂರು ವಾರಗಳ ನಂತರ ಸೌದಿ ಆತನಿಗೆ ರಾಜತಾಂತ್ರಿಕ ರಕ್ಷಣೆ ಒದಗಿಸಿತ್ತು.ಪ್ರಕರಣ ನ್ಯಾಯಾಲಯದ ಮೆಟ್ಟಿ­ಲೇರಿತ್ತು. ರಾಜಕುಮಾರನಿಗೆ ರಾಜ­ತಾಂತ್ರಿಕ ರಕ್ಷಣೆ ಇದೆ ಎಂಬ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿತ್ತು. ಆದರೂ ಅಮೆರಿಕ ಸರ್ಕಾರ ಆಗ ಪೂರ್ವಾ­­ನ್ವಯಗೊಳ್ಳುವಂತೆ  ರಾಜತಾಂತ್ರಿಕ ರಕ್ಷಣೆ ನೀಡಿತ್ತು.

ಪ್ರತಿಕ್ರಿಯಿಸಿ (+)