ಭಾನುವಾರ, ಜನವರಿ 19, 2020
26 °C

ದೇವಯಾನಿ ಪ್ರಕರಣ: ಮೆತ್ತಗಾದ ಭಾರತದ ನಿಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೇವಯಾನಿ ಪ್ರಕರಣದಲ್ಲಿ  ಮೃದು ಧೋರಣೆ ತಳೆದಿರುವ ಭಾರತ, ‘ಉಭಯ ದೇಶಗಳ ನಡುವಣ ಸಂಬಂಧದ ವಿಭಿನ್ನ ಆಯಾಮ­ವನ್ನು ಗಮನದಲ್ಲಿಟ್ಟುಗೊಂಡು ಹೆಜ್ಜೆ ಇಡಬೇಕಾಗಿದೆ’ ಎಂದು ಶುಕ್ರವಾರ ಹೇಳಿದೆ.ದೇವಯಾನಿ ವಿರುದ್ಧದ ಪ್ರಕರಣವನ್ನು ವಾಪಸ್‌ ಪಡೆಯು­ವುದಕ್ಕೆ  ಅಮೆರಿಕ ನಿರಾಕರಿಸುತ್ತಿದ್ದರೂ, ಈ ಪ್ರಕರಣ ಇತ್ಯರ್ಥ­ವಾಗುವ ಭರವಸೆಯನ್ನು ಕೇಂದ್ರ ಸರ್ಕಾರ ಕಳೆದುಕೊಂಡಿಲ್ಲ.‘ಉಭಯ ದೇಶಗಳ ನಡುವಣ ಸಂಬಂಧ ಅಮೂಲ್ಯ­ವಾದುದು’ ಎಂದಿರುವ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್‌ ಖುರ್ಷಿದ್‌, ‘ಭಾರತವು ದೇವಯಾನಿ  ಪ್ರಕರಣ­ವನ್ನು ಎಚ್ಚರಿಕೆಯಿಂದ ನಿರ್ವಹಿಸುತ್ತಿದೆ’ ಎಂದಿದ್ದಾರೆ.ನಮ್ಮಂತೆಯೇ ನಡೆದುಕೊಳ್ಳಿ: ‘ನಾವು ಅಮೆರಿಕದ ರಾಜ­ತಾಂತ್ರಿಕರನ್ನು ಸಭ್ಯತೆಯಿಂದ ನಡೆಸಿಕೊಳ್ಳುತ್ತೇವೆ. ಅದೇ ರೀತಿ ಅಮೆರಿಕ ಕೂಡ ಭಾರತದ ರಾಜತಾಂತ್ರಿಕ­ರನ್ನು ಮರ್ಯಾದೆ­ಯಿಂದ ನಡೆಸಿಕೊಳ್ಳಬೇಕು’ ಎಂದು ವಿದೇಶಾಂಗ ಕಾರ್ಯ­ದರ್ಶಿ ಸುಜಾತಾ ಸಿಂಗ್‌ ಹೇಳಿದ್ದಾರೆ.‘ಅಮೆರಿಕದ ಅಧಿಕಾರಿಗಳು ದೇವಯಾನಿ ಅವರನ್ನು ನಡೆಸಿಕೊಂಡಿರುವ ರೀತಿ ಸರಿಯಿಲ್ಲ’ ಎಂದು ಅವರು ಖಂಡಿಸಿದ್ದಾರೆ.ಆದರ್ಶ ಹಗರಣದಲ್ಲಿ ದೇವಯಾನಿ ಹೆಸರು

ಮುಂಬೈ (ಪಿಟಿಐ): ಆದರ್ಶ ಹೌಸಿಂಗ್‌ ಸೊಸೈಟಿ ಹಗರಣದಲ್ಲಿ ದೇವಯಾನಿ ಖೋಬ್ರಾಗಡೆ ಹೆಸರೂ ಕೇಳಿಬಂದಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಲಾದ ಆದರ್ಶ ಹಗರಣದ ತನಿಖಾ ವರದಿಯಲ್ಲಿ ಈ ವಿಚಾರ ಬಹಿರಂಗಗೊಂಡಿದೆ.

ಪ್ರತಿಕ್ರಿಯಿಸಿ (+)