ಶನಿವಾರ, ಫೆಬ್ರವರಿ 27, 2021
28 °C
ನಿಜಗುಣಪ್ರಭು ತೋಂಟದಾರ್ಯ ಪ್ರವಚನಕ್ಕೆ ಚಾಲನೆ

ದೇವರಿಗಾಗಿ ನಡೆದ ಬಡಿದಾಟವೇ ಹೆಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವರಿಗಾಗಿ ನಡೆದ ಬಡಿದಾಟವೇ ಹೆಚ್ಚು

ಹಾವೇರಿ: ‘ಜನರು ದೇವರಿಗೆ ಬಡಿದಾಡಿ ದಷ್ಟು ನೀರು, ಶಿಕ್ಷಣ, ಪರಿಸರ ಮತ್ತಿತರ ವಿಚಾರಕ್ಕೆ ಹೋರಾಡಿದ್ದರೆ ಈ ಜಗತ್ತು ಎಂದೋ ಅಭಿವೃದ್ಧಿ ಹೊಂದಿರುತ್ತಿತ್ತು’ ಎಂದು ಮುಂಡರಗಿ ತೋಂಟದಾರ್ಯ ಮಠ ಹಾಗೂ ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ತೋಂಟ ದಾರ್ಯ ಸ್ವಾಮೀಜಿ ಹೇಳಿದರು.ನಗರದ ಹುಕ್ಕೇರಿಮಠದ ಮಹಿಳಾ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳ ಲಾದ ‘ಬಸವ ದರ್ಶನ ಪ್ರವಚನ’ದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಸಂಜೆ ಅವರು ಮಾತನಾಡಿದರು. ಫೆಬ್ರುವರಿ 17ರ ತನಕ ಪ್ರವಚನ ನಡೆಯಲಿದೆ.‘ಕುಂಭಮೇಳ, ವಿವಿಧ ಅಭಿಷೇಕ, ಯಾತ್ರೆ ಹೆಸರುಗಳು ತಾತ್ವಿಕ ಭಿನ್ನಾ ಭಿಪ್ರಾಯಗಳಿಗಾಗಿ ಜನ ದೇವರ ಹೆಸರಿ ನಲ್ಲಿ ಸಾಯುತ್ತಲೇ ಇದ್ದಾರೆ. ಪ್ರಾಯಶಃ ಎರಡನೇ ಮಹಾಯುದ್ಧದ ಬಳಿಕ ಅತಿ ಹೆಚ್ಚು ಜನ ದೇವರ ಹೆಸರಿನಲ್ಲಿ ಸಾಯುತ್ತಿದ್ದಾರೆ’ ಎಂದರು.‘ಹಿಂದೂಗಳ ನಡುವೆ ಸಾಕಷ್ಟು ಭಿನ್ನಾಭಿಪ್ರಾಯ ಇರುವ ಕಾರಣ ಒಂದಾ ಗಲು ಸಾಧ್ಯವಾಗಿಲ್ಲ. ಎಲ್ಲರೂ ತಮ್ಮದೇ ತತ್ವ ದೊಡ್ಡದು ಎನ್ನುತ್ತಾರೆ. ಶಂಕರಾ ಚಾರ್ಯ ಅದ್ವೈತ ಹೇಳಿದರೆ, ಮಧ್ವಾ ಚಾರ್ಯರು ದ್ವೈತ ಪ್ರತಿಪಾದಿಸಿದರು, ರಾಮಾನುಜಾಚಾರ್ಯರು ವಿಶಿಷ್ಟಾದ್ವೈತ ಹೇಳಿದರು.ಹೀಗೆ ಒಂದು, ಎರಡು, ಮೂರು ಎಂದುಕೊಂಡು ಸಾಗಿದರು. ಇಸ್ಲಾಂ ದೇವರು ‘ಅಲ್ಲಾ’ ಎಂದರೆ, ಕ್ರೈಸ್ತರೇ ದೇವರು ಎಂದು ಕ್ರಿಶ್ಚಿಯನ್ನರು ಆರಾಧಿಸುತ್ತಾರೆ. ಹೀಗೆ ಪ್ರತಿ ತತ್ವ, ಸಿದ್ಧಾಂತಗಳು ವಿಭಿನ್ನವಾಗಿವೆ’ ಎಂದರು.‘ಕೊಲ್ಲುವೆನೆಂಬ ಭಾಷೆ ದೇವರ ದಾದರೆ, ಗೆಲುವೆನೆಂಬ ಭಾಷೆ ಭಕ್ತನದು’ ಎಂಬ ಬಸವಣ್ಣನವರ ನುಡಿಗಳಂತೆ, ಯಾವ ವಿದ್ಯೆ ಕಲಿತರೂ ಸಾವು ಗೆಲ್ಲಲು ಸಾಧ್ಯವೇ? ಎಂಬ ಅಕ್ಕಮಹಾದೇವಿ ವಚನದಂತೆ, ಸಾವೆಂಬ ಪ್ರಕೃತಿಯ ಸಂವಿಧಾನವನ್ನು ಯಾವ ಮಹಾತ್ಮರೂ ಮೀರಿ ನಿಲ್ಲಲು ಸಾಧ್ಯವಾಗಿಲ್ಲ.ಯಾವ ಜಪ, ಆಚರಣೆ ಏನೇ ಮಾಡಿದರೂ ಸಾವು ಗೆಲ್ಲಲು ಸಾಧ್ಯವಿಲ್ಲ. ಆದರೆ, ಸಾವು ಬರುವ ತನಕ ಸಮಾಜಕ್ಕಾಗಿ, ಸಾಧನೆ ಮಾಡಿ ಜೀವಿಸುವುದೇ ಬದುಕು. ಸಮಾಜದಿಂದ ಹೊರಗುಳಿದ ಸ್ವಾಮೀ ಜಿಯೂ, ನೀರಿನಿಂದ ಹೊರತೆಗೆದ ಮೀನಿನಂತೆ’ ಎಂದು ಬಣ್ಣಿಸಿದರು.‘ಸತ್ಯ ಯಾವಾಗಲು ಅದರಕ್ಕೆ ಕಹಿ, ಉದರಕ್ಕೆ ಸಿಹಿ’ ಎಂದ ಅವರು, ಸಮಯ ಪಾಲಿಸದ ವ್ಯಕ್ತಿ ದೇವರನ್ನು ಗೌರವಿಸಲು ಸಾಧ್ಯವಿಲ್ಲ. ಅಲ್ಲಿ–ಇಲ್ಲಿ ಉಗುಳುತ್ತಾ ಸ್ವಚ್ಛತೆ ಕಾಪಾಡದ ವ್ಯಕ್ತಿ ದೇವರ ಪ್ರೀತಿಗೆ ಪಾತ್ರರಾಗುವುದಿಲ್ಲ. ತಲೆ, ಹೃದಯ ಹಾಗೂ ಮನಸ್ಸನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳದಿದ್ದರೆ ಬದುಕು ನಿರ್ಮಲ ವಾಗುವುದಿಲ್ಲ’ ಎಂದರು.ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘ತೂತು ಬಿದ್ದ ದೋಣಿ  ಹಾಗೂ ಸಂಶಯ ತುಂಬಿದ  ಮುಂದೆ ಸಂಸಾರ ಸಾಗದು. ಅದಕ್ಕಾಗಿ ಮನಸ್ಸಿನ ಕಲ್ಮಶ, ಒಳಗಣ್ಣಿನ ಕಸ ತೆಗೆಯ ಬೇಕು. ಅವಗುಣ ಕಿತ್ತುಹಾಕಲು ಜ್ಞಾನದ ಕೃಷಿಯೊಂದೇ ದಾರಿ. ಅದಕ್ಕಾಗಿ ಶರಣ ವಿಚಾರಧಾರೆಗಳು ಬಹುಮುಖ್ಯ. ಪ್ರಜಾಪ್ರಭುತ್ವಕ್ಕೆ ಸಂವಿಧಾನದಂತೆ, ಶರಣಂಗೆ ವಚನ’ ಎಂದರು.‘ಮನುಷ್ಯನಿಗೆ ಕೈ, ಕಾಲು, ಕಿವಿ ಎಲ್ಲವೂ ಎರಡೆರಡು ಕೊಟ್ಟ ಪ್ರಕೃತಿಯು ನಾಲಿಗೆ ಮಾತ್ರ ಒಂದೇ ನೀಡಿದೆ. ಅಂದರೆ, ಮಾತು ಕಡಿಮೆ ಮಾಡು, ಮೊದಲು ಕಾಯಕ ಮಾಡು ಎಂಬ ಸಂದೇಶವು ಜನನದ ಜೊತೆಯೇ ಬಂದಿದೆ’ ಎಂದರು.ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ‘ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ನಿಜಗುಣಪ್ರಭುಗಳ ಪ್ರವಚನ ಗಳು ಯುವಜನರನ್ನು ಸೆಳೆಯುತ್ತಿವೆ. ಧರ್ಮದಿಂದ ದೂರ ಸರಿಯುವ ಆ ಮನಸ್ಸುಗಳನ್ನು ಸೆಳೆಯುವ ಕಾರಣ ವಾಟ್ಸ್‌ಪ್‌ ಸ್ವಾಮಿ, ಮೊಬೈಲ್‌ ಸ್ವಾಮಿ ಎಂದೇ ಜನಜನಿತರು’ ಎಂದರು.‘ಸಾಯುವ ಮೊದಲು ಸಾಧಿಸಬೇಕು. ಅದಕ್ಕಾಗಿ ಶರಣರ ದಾರಿಯಲ್ಲಿ ಸಾಗ ಬೇಕು. ಆಚಾರ–ವಿಚಾರಗಳು, ತತ್ವ–ಸಿದ್ಧಾಂತಗಳ ವಿಭಿನ್ನ ಅಭಿಪ್ರಾಯಗಳು, ಸೇರಿದಮತೆ ಎಲ್ಲ ಶ್ರೇಷ್ಠ ವಿಚಾರಧಾರೆ ಗಳನ್ನು ಒಳಗೊಂಡಿರುವುದು ಬಸವ ತತ್ವ’ ಎಂದರು.ಶಾಸಕ ಬಸವರಾಜ ಶಿವಣ್ಣನವರ ಉದ್ಘಾಟಿಸಿದರು. ಪ್ರಮುಖರಾದ ಶಿವಬಸಯ್ಯ ಹಿರೇಮಠ, ಶಿವಯೋಗಿಮಾಮಲೆಶೆಟ್ಟರ್‌, ಕೊಟ್ರೇಶಪ್ಪ ಬಸೇಗಣ್ಣಿ, ಶಿವಬಸಪ್ಪ ಹಲಗಣ್ಣನವರ, ಎಸ್‌.ಎಫ್‌.ಎನ್‌. ಗಾಜೀಗೌಡ್ರ, ರಾಜಣ್ಣ, ಸಂಜೀವಕುಮಾರ್ ನೀರಲಗಿ ಮತ್ತಿತರರು ಇದ್ದರು.***

ಅಂದು ಆಹಾರದ ಕೊರತೆಯಿದ್ದರೆ, ಇಂದು ಪರಿಶುದ್ಧ ಜ್ಞಾನದ ಕೊರತೆ ಇದೆ. ವೈಚಾರಿಕ–ವೈಜ್ಞಾನಿಕ, ಸಮಾನತೆ– ಮಾನವೀಯತೆಯ ಮೌಲ್ಯಗಳನ್ನು ನಿಜಗುಣಪ್ರಭು ಬಿತ್ತಲಿದ್ದಾರೆ.

-ಬಸವರಾಜ ಶಿವಣ್ಣನವರ,
ಶಾಸಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.