ಮೂರು ತಲೆಮಾರಿನಿಂದಲೂ ಕಲೆಯನ್ನೇ ನೆಚ್ಚಿಕೊಂಡು ಜೀವನ ಬಂಡಿ ಸಾಗಿಸುತ್ತಿರುವ ಆಂಧ್ರ ಪ್ರದೇಶದ ವಸಂತ್ ಕುಮಾರ್ಗೆ ತಮ್ಮ ಮಕ್ಕಳು `ಕಲಾದೇವತೆ~ಯ ಶಿಷ್ಯರಾಗಬೇಕೆಂಬ ಬಯಕೆ. ಮಕ್ಕಳನ್ನು ಸಾಫ್ಟ್ವೇರ್ ಎಂಜಿನಿಯರ್, ಡಾಕ್ಟರ್ ಮಾಡಬೇಕೆಂದು ಬಯಸುವ ಪೋಷಕರೇ ಹೆಚ್ಚಾಗಿ ಇರುವ ಈ ಕಾಲದಲ್ಲಿ ಕಲಾವಿದ ವಸಂತ್ ವಿಭಿನ್ನರೆನ್ನಿಸುವುದೇ ಇಂಥ ಬಯಕೆಗಳಿಂದ.

ಚಿತ್ರಕಲಾ ಪರಿಷತ್ತಿನಲ್ಲಿ ಭಾನುವಾರದವರೆಗೆ (ಏ.15) ನಡೆಯುತ್ತಿರುವ ರಾಷ್ಟ್ರೀಯ ಕರಕುಶಲ ಸಂತೆಯಲ್ಲಿ ಮಳಿಗೆ ಹಾಕಿರುವ ವಸಂತ್ ಕುಮಾರ್ ಮನದಾಳದ ಮಾತಿದು. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಪುತ್ತೂರಿನ ವಸಂತ್ ಕುಮಾರ್ ಅವರಿಗೆ ಬೇವಿನ ಮರದಲ್ಲಿ ಮನಮೋಹಕ ವಿಗ್ರಹಗಳನ್ನು ಮಾಡುವುದು ರಕ್ತಗತವಾಗಿ ಬಂದ ವಿದ್ಯೆ. ಇವರ ಅಜ್ಜನೂ ಮರದ ವಿಗ್ರಹಗಳನ್ನು ಮಾಡುವ ಕಲಾವಿದ. ಅದು ತಂದೆಗೂ ಮುಂದುವರೆದು ಮೊಮ್ಮಕ್ಕಳವರೆಗೆ ವ್ಯಾಪಿಸಿದೆ.

ವಸಂತ್ಗೆ ಸರಸ್ವತಿ ಕೃಪೆ ತೋರಲಿಲ್ಲ. ಪ್ರೌಢ ಶಿಕ್ಷಣದವರೆಗೆ ಕಲಿತ ಅವರು ಮುಂದಿನ ವಿದ್ಯಾಭ್ಯಾಸದ ಕಡೆ ಗಮನಹರಿಸಲಿಲ್ಲ. ಆದರೆ ಅಜ್ಜನಿಂದ ಬಂದ ಕಲೆಯನ್ನು ಅಪ್ಪಿಕೊಂಡರು, ಯಶಸ್ವಿಯೂ ಆದರು. ಡೊನೇಷನ್ ಹಾವಳಿಯಲ್ಲಿ ಇಂದು ಲಕ್ಷಗಟ್ಟಲೆ ಹಣ ತೆತ್ತು ವಿದ್ಯಾಭ್ಯಾಸ ಮಾಡಿಸುವುದು ಕನಸಿನ ಮಾತು. ಹಾಗಾಗಿ ತಮ್ಮ ಮಕ್ಕಳು ಕಲಾವಿದರಾಗಲಿ ಎಂದು ಬಯಸುತ್ತಾರೆ ವಸಂತ್.

ವಸಂತ್ ದೇಶದ ನಾನಾ ಕಡೆ ತಮ್ಮ ಕಲಾಕೃತಿಗಳ ಪ್ರದರ್ಶನ ಮಾಡಿದ್ದಾರೆ. ಬೇವಿನ ಮರದಿಂದ ಗಣೇಶ, ಶ್ರೀಕೃಷ್ಣ, ಸರಸ್ವತಿ, ದಶಾವತಾರ, ಈಶ್ವರ, ಬುದ್ಧನ ವಿಗ್ರಹಗಳನ್ನು ಮನಮೋಹಕವಾಗಿ ರಚಿಸುತ್ತಾರೆ. ಕೆಲವು ಕಲಾಕೃತಿಗಳಿಗೆ ತೈಲವರ್ಣದ ಲೇಪನವನ್ನೂ ಮಾಡಿ, ಮತ್ತಷ್ಟು ರಂಗು ತುಂಬುತ್ತಾರೆ. 9 ಇಂಚಿನಿಂದ 8 ಅಡಿಗಳವರೆಗಿನ ಇವರ ಕಲಾಕೃತಿಗಳು ಕರಕುಶಲ ಸಂತೆಯಲ್ಲಿ ಕಣ್ಮನ ಸೆಳೆಯುತ್ತಿವೆ.

ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪ್ರಮೋದ್ ಸಿಂಗ್ ಶೆಖಾವತ್ ತಮ್ಮ ಹುದ್ದೆಯನ್ನು ತ್ಯಜಿಸಿ ಕಲೆಯ ಆರಾಧಕರಾದವರು. ಜೈಪುರದಿಂದ ಬಂದಿರುವ ಶೆಖಾವತ್ ಮಾರ್ಬಲ್ ಕಲ್ಲಿನ ಮೇಲೆ ಚಿತ್ರಗಳನ್ನು ಬಿಡಿಸುವ ಹವ್ಯಾಸ ಬೆಳೆಸಿಕೊಂಡವರು. ಅದೇ ಈತನ ಜೀವನಕ್ಕೂ ದಾರಿ ದೀಪವಾಯಿತು. ಕೈಯಲ್ಲಿದ್ದ ಕೆಲಸವನ್ನು ಬಿಟ್ಟು ಕಲೆಯನ್ನು ನಂಬಿದರು. ಶೆಖಾವತ್ರ ಕಲೆಗೆ ಅಲ್ಲಿನ ರಾಜ್ಯ ಸರ್ಕಾರದ ರಾಜ್ಯ ಪ್ರಶಸ್ತಿಯೂ ಲಭಿಸಿದೆ.

ಕೇರಳದ ಕಲಾವಿದ ಕನಕರಾಜ್ ಕುಂಚದಲ್ಲಿ ಚಿತ್ತಾರಗೊಂಡ ತೈಲಚಿತ್ರಗಳು ಸಂತೆಯಲ್ಲಿ ಬಿಕರಿಯಾಗುತ್ತಿವೆ. 30 ವರ್ಷಗಳಿಂದ ಕಲೆಯನ್ನೇ ನಂಬಿದ ಕನಕರಾಜ್ ಕಲಾಕ್ಷೇತ್ರದಲ್ಲಿ ಯಶಸನ್ನು ಕಂಡಿದ್ದಾರೆ. ಕೇರಳ ನೆಲದ ಸೊಗಡು, ಕಥಕ್ಕಳಿ ಕಲೆ, ನೆರಳು ಬೆಳಕಿನ ಆಟದ ಚಿತ್ರಗಳು ಕಲಾಸಕ್ತರ ಅಭಿರುಚಿ ಹೆಚ್ಚಿಸುವಂತಿವೆ.

ಮಾರ್ಬಲ್ ಕಲ್ಲಿನ ಮೇಲೆ ಸೂಕ್ಷ್ಮ ಕುಸುರಿಯ ಚಿತ್ರಗಳನ್ನು ಚಿತ್ರಿಸಿರುವುದು ಅವರ ಒಂದೊಂದು ಕಲಾಕೃತಿಯಲ್ಲೂ ಪ್ರತಿಬಿಂಬಿತವಾಗುತ್ತವೆ. ಸಂಗೀತ ವಾದ್ಯ ಪರಿಕರಗಳು, ಗ್ರಾಮೀಣ ಪರಿಸರ ಬಿಂಬಿಸುವ ಚಿತ್ರಗಳು ಪ್ರಧಾನವಾಗಿ ಇವರ ಕಲಾಕೃತಿಗಳಲ್ಲಿ ಗಮನ ಸೆಳೆಯುತ್ತವೆ.

ಶ್ರೀನಿಧಿ ಕಲೆ ಮತ್ತು ಕರಕುಶಲ ಪ್ರತಿಷ್ಠಾನ ಆಯೋಜಿಸಿರುವ ಕರಕುಶಲ ಸಂತೆಯಲ್ಲಿ 120 ಮಳಿಗೆಗಳಿವೆ. ರಾಜಸ್ತಾನ, ಕಾಶ್ಮೀರ, ಕೇರಳ, ತಮಿಳುನಾಡು ಸೇರಿದಂತೆ ಇನ್ನಿತರೆ ರಾಜ್ಯಗಳಿಂದ ಬಂದ ಕಲಾವಿದರ ಕಲಾಕೃತಿಗಳು, ಕರಕುಶಲ ವಸ್ತುಗಳಿವೆ.
ನಗರದ ಗ್ರಾಮೀಣ ಅಂಗಡಿಯ ಮಳಿಗೆಯಲ್ಲಿ ಲಾವಂಚ ಬೇರಿನಿಂದ ತಯಾರಿಸಿದ ವಿಗ್ರಹಗಳು, ಟೋಪಿ, ತೋರಣಗಳು ಗೃಹಿಣಿಯರನ್ನು ಆಕರ್ಷಿಸುತ್ತಿವೆ.

ಜೈಪುರದ ಮೆಹ್ತಾ ಅವರು ರಚಿಸಿರುವ ಫೈಬರ್ನ ಕಲಾಕೃತಿಗಳು ಕಲಾಸಂತೆಯಲ್ಲಿ ವಿಶೇಷ ಗಮನ ಸೆಳೆಯುತ್ತಿವೆ. 2 ಸಾವಿರ ರೂಪಾಯಿಯಿಂದ 18 ಸಾವಿರದ ವರೆಗೆ ಇವರ ಕಲಾಕೃತಿಗಳು ಮಾರಾಟವಾಗುತ್ತಿವೆ. ಅವುಗಳಲ್ಲಿ ಗ್ರಾಮೀಣ ಮಹಿಳೆಯರು, ಗಣೇಶ, ಗಂಡು ಹೆಣ್ಣಿನ ಆಕೃತಿಗಳು ಚಿತ್ತಾಕರ್ಷಕವಾಗಿವೆ. ಹಗುರವಾಗಿರುವ ಫೈಬರ್ ಕಲಾಕೃತಿಗಳು ನೀರು ನಿರೋಧಕ ಗುಣವನ್ನೂ ಒಳಗೊಂಡಿವೆ.

ಚನ್ನಪಟ್ಟಣ ಗೊಂಬೆಗಳು, ಪಂಜಾಬ್ನ ಫುಲ್ಕಾರಿ ಬಟ್ಟೆಗಳು, ಟೆರ್ರಾಕೋಟಾ ಕಲಾಕೃತಿಗಳು, ಕಾಶ್ಮೀರಿ ಶಾಲುಗಳು, ಬನಾರಸ್ ಸೀರೆಗಳು ಹೆಂಗಳೆಯರ ಕಣ್ಣು ಕುಕ್ಕುತ್ತಿವೆ. ಕಲಾವಿದರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಪ್ರತಿ ವರ್ಷದಂತೆ ಈ ಬಾರಿಯೂ ಕರಕುಶಲ ಸಂತೆ ಆಯೋಜಿಸಲಾಗಿದೆ ಎನ್ನುತ್ತಾರೆ ಶ್ರೀನಿಧಿ ಕಲೆ ಮತ್ತು ಕರಕುಶಲ ಪ್ರತಿಷ್ಠಾನದ ಕಾರ್ಯದರ್ಶಿ ಕೆ.ಕೆ. ಗೋಪಿನಾಥ್.

ಸ್ಥಳ: ಚಿತ್ರಕಲಾ ಪರಿಷತ್, ಕುಮಾರ ಕೃಪಾ ರಸ್ತೆ. ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಕರಕುಶಲ ಸಂತೆ ತೆರೆದಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.