`ಮನೆಗೊಬ್ಬ ಯಜಮಾನ, ಊರಿಗೊಬ್ಬ ಮುಖಂಡ, ದೇಶಕ್ಕೊಬ್ಬ ನಾಯಕ ಇರಬೇಕು~ ಎಂಬುದೊಂದು ಅನೂಚಾನವಾಗಿ ನಡೆದುಕೊಂಡು ಬಂದ ನಂಬಿಕೆ.

ಇಂತಹ ಯಜಮಾನ, ಮುಖಂಡ, ನಾಯಕ `ಮಾದರಿ~ ಯಾಗಿರಬೇಕೆಂಬುದು ಕೂಡಾ ಒಂದು ಪರಿಕಲ್ಪನೆ. ಇಂತಹ `ಮಾದರಿ~ ಯವರಿದ್ದರೆ ಮನೆ, ಊರು, ದೇಶ ವ್ಯವಸ್ಥಿತವಾಗಿ ಮುನ್ನಡೆಯುತ್ತವೆ. ಎಲ್ಲರಿಗೂ ಸಮಾನ ನ್ಯಾಯ ಸಿಕ್ಕುತ್ತದೆಂಬ ಆಶಾಭಾವನೆಯುಂಟು.

`ಮಾದರಿ~ ಎಂದರೆ ತನ್ನಂತೆಯೇ ಎಲ್ಲರನ್ನೂ ಸಮಾನ ಸ್ತರದಲ್ಲಿ ಪರಿಭಾವಿಸುವ, ಸುಖ, ಸೌಲತ್ತುಗಳನ್ನು ಸಮಾನವಾಗಿ ಹಂಚುವ, ದುಃಖ - ದುಮ್ಮಾನಗಳನ್ನು ಅನುಕಂಪದಿಂದ ಗಮನಿಸುತ್ತಾ, ಅದರಲ್ಲಿ ಭಾಗಿಯಾಗುತ್ತಾ ಸಾಂತ್ವನಗೈಯ್ಯುತ್ತಾ, ಪರಿಹಾರೋಪಾಯಗಗಳನ್ನು ಒದಗಿಸುತ್ತಾ ಹೋಗುವುದೇ ಆಗಿದೆ.

ಆದರೆ ಇಂತಹ ಮಾದರಿಗಳನ್ನು ಈಗ ಕಾಣಲಾಗುತ್ತಿದೆಯೆ ಎಂಬುದು ನಮ್ಮನ್ನು ಕಾಡುತ್ತಿರುವ ಪೆಡಂಭೂತವಾಗಿದೆ. ಈ ಹೊತ್ತಿನಲ್ಲಿ ಕುಟುಂಬ, ಊರು ಮತ್ತು ದೇಶ ವ್ಯವಸ್ಥೆಗಳು ಸಂಪೂರ್ಣವಾಗಿ ಈ `ಮಾದರಿ~ಗಳಿಂದ ವಂಚಿತವಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲದರಲ್ಲೂ ಪಕ್ಷ ರಾಜಕಾರಣ ಇಣುಕಿಬಿಟ್ಟಿದೆ.

ಪಕ್ಷ ರಾಜಕಾರಣಕ್ಕೆ ಸದಾ ಅಧಿಕಾರದ ಸ್ವಾರ್ಥ ಚಿಂತನೆ. ಅಧಿಕಾರವು ಕೂಡಾ ವೈಯಕ್ತಿಕ ಸ್ವಾರ್ಥಪರ ಆಲೋಚನೆಯ ಮೂಲದಿಂದಲೇ ಹುಟ್ಟಿಕೊಂಡಿದೆ. ಇಂತಹ ಆಶಯವು ಇತರರ ಸುಖ, ನೆಮ್ಮದಿ ಮತ್ತು ಅಭಿವೃದ್ಧಿಯನ್ನು ಉಪೇಕ್ಷಿಸುವ ಧೋರಣೆಯನ್ನು ಅಳವಡಿಸಿಕೊಂಡಿದೆ. ಅದರಿಂದ ಒಡಕು, ಅಸಮಾಧಾನ, ಅಸೂಯೆ, ದ್ವೇಷಗಳು ಹುಟ್ಟಿಕೊಂಡು ಗುಂಪುಗಳಾಗುತ್ತವೆ. ಒಗ್ಗಟ್ಟು ಮುರಿಯುತ್ತದೆ. ಅನೈಕ್ಯತೆ ತಾಂಡವವಾಡುತ್ತದೆ. ಸಾಮರಸ್ಯ ಮಾಯವಾಗುತ್ತದೆ. ಶಕ್ತಿ ಕುಂದುತ್ತದೆ.

ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರದ ದಿನಗಳಲ್ಲಿ ನಮ್ಮ `ಮಾದರಿ ಯಜಮಾನ. ಮಾದರಿ ಮುಖಂಡ ಮತ್ತು ಮಾದರಿ ನಾಯಕರು~ ಎಲ್ಲೆಡೆ ಸಿಗುತ್ತಿದ್ದರು. ಅವರು ತಮ್ಮ ಜವಾಬ್ದಾರಿಯನ್ನು ನಿಷ್ಠೆ ಮತ್ತು ನಿಸ್ಪೃಹತೆಯಿಂದ ನಿಭಾಯಿಸುತ್ತಿದ್ದರು. ಆಗ ಪಕ್ಷ ರಾಜಕಾರಣದ ಜಾಗದಲ್ಲಿ ~ನೈತಿಕತೆ~ ತನ್ನ ಆಧಿಪತ್ಯವನ್ನು ಸ್ಥಾಪಿಸಿತ್ತು. ಹಾಗಾಗಿಯೇ ಗಾಂಧೀಜಿ, ನೆಹರೂ, ಪಟೇಲ್, ಸುಭಾಶ್, ರಾಜಾಜಿ, ಅಂಬೇಡ್ಕರ್ರಂತಹವರು ಮಾದರಿ ನಾಯಕರಾಗಿದ್ದರು.

ನಂತರದಲ್ಲಿ ದೇಶದ ಚುಕ್ಕಾಣಿ ಹಿಡಿದು ಮುನ್ನಡೆಸಲು ಲಾಲ್ಬಹುದ್ದೂರ್ ಶಾಸ್ತ್ರಿ ಮತ್ತು ಇಂದಿರಾ ಗಾಂಧಿ ಶ್ರಮಿಸಿ ತಾವು ಕೂಡಾ `ಮಾದರಿ ನಾಯಕ~ ಪಟ್ಟವನ್ನಲಂಕರಿಸಿದ್ದುಂಟು.

ಸರ್ವಾಧಿಕಾರಿಯಂತೆ ಮತ್ತು ತುರ್ತುಸ್ಥಿತಿ ಹೇರಿದ ಕಾರಣಕ್ಕೆ ಇಂದಿರಾ ಅಪಖ್ಯಾತಿಗೆ ಗುರಿಯಾದರೂ ದೇಶದ ಎಲ್ಲ ಸ್ತರದ ಜನರಿಗೂ ಸ್ಪಂದಿಸುವ, ಅದರಲ್ಲೂ ಕೆಳ ಸ್ತರದವರ ಕಲ್ಯಾಣದತ್ತ ಗಮನ ಹರಿಸುವಲ್ಲಿ ಪ್ರಯತ್ನಿಸಿದ್ದು ಸ್ವಾಗತಾರ್ಹವಾಗಿತ್ತು.

ನಂತರ ಅಧಿಕಾರಕ್ಕೇರಿದ ಕೆಲವಾರು ನಾಯಕರು ತಮಗೆ ಸಿಕ್ಕಿದ ಅಲ್ಪಾವಧಿ ಅವಕಾಶದಿಂದ `ಮಾದರಿ ನಾಯಕ~ರೆನಿಸಿಕೊಳ್ಳಲು ಸಾಧ್ಯವಿಲ್ಲದಂತಾಯಿತು. ಅಷ್ಟರ ನಡುವೆಯೂ ಯುವ ನಾಯಕರಾಗಿದ್ದ ರಾಜೀವ್ ಗಾಂಧಿ ಜನರಲ್ಲಿ ಆಶಾಭಾವನೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು.

ಮಾದರಿ ನಾಯಕರಾಗುವ ಅವಕಾಶವಿದ್ದರೂ ಆರಂಭದಲ್ಲಿಯೇ ವಿದ್ರೋಹಿಗಳ ಗುಂಡಿಗೆ ಬಲಿಯಾಗಿಬಿಟ್ಟರು. ಅದರ ಮಧ್ಯೆ ಸಂಪೂರ್ಣ ಕ್ರಾಂತಿ ಹೆಸರಲ್ಲಿ ನಡೆದ ರಾಜಕೀಯ ಬದಲಾವಣೆಯಿಂದ ಮೊರಾರ್ಜಿ ದೇಸಾಯಿ, ಚರಣ್ಸಿಂಗ್, ವಿ. ಪಿ. ಸಿಂಗ್, ಚಂದ್ರಶೇಖರ್ರಂಥವರು ದೇಶದ ಚುಕ್ಕಾಣಿ ಹಿಡಿದರು.

ಇವರಲ್ಲಿ ಚಂದ್ರೇಖರ್ ಮತ್ತು ವಿ. ಪಿ. ಸಿಂಗ್ ~ಮಾದರಿ~ ಎನಿಸಿಕೊಳ್ಳುವ ಮನೋಸ್ಥಿತಿ ಮತ್ತು ನಿಲುವುಗಳನ್ನು ಹೊಂದಿದ್ದರೂ ಸಿಕ್ಕ ಅವಕಾಶವೇ ಅತ್ಯಲ್ಪ ಕಾಲವಾಗಿದ್ದರಿಂದ ಅಂತಹುದಕ್ಕೆ ಭಾಜನರಾಗಲು ಸಾಧ್ಯವಾಗಲಿಲ್ಲ. ಆ ಮೇಲಿನ ದೇಶದ ನಾಯಕತ್ವ ಹಿಡಿದ ಪಿ. ವಿ. ನರಸಿಂಹರಾವ್, ಎಚ್. ಡಿ. ದೇವೇಗೌಡ, ಐ. ಕೆ. ಗುಜ್ರಾಲ್ರಿಂದಲೂ `ಮಾದರಿ~ ನಾಯಕ ಪಟ್ಟವನ್ನಲಂಕರಿಸಲು ಸಾಧ್ಯವಾಗದಿದ್ದುದು ದುರಂತ.

ತದನಂತರದಲ್ಲಿ ದೇಶದ ಚುಕ್ಕಾಣಿ ಹಿಡಿದು ಭರವಸೆ ಮೂಡಿಸಿದ್ದವರು ಎ. ಬಿ. ವಾಜಪೇಯಿ. ಹಲವು ಪಕ್ಷಗಳ ಮೈತ್ರಿಯೊಡನೆ ಸರ್ಕಾರ ಮತ್ತು ದೇಶದ ನೊಗವನ್ನು ಹೊತ್ತು ಸಾಗಿ, ಇದ್ದುದರಲ್ಲಿಯೇ `ಮಾದರಿ~ನಾಯಕತ್ವವನ್ನು ಕೊಟ್ಟರು. ಆದರೆ ಅವರ ಸರ್ಕಾರದಲ್ಲಿಯೂ ಹಗರಣಗಳು ನಡೆದು, ಕೆಲವು ಅಧಿಕಾರ ದಂಡ ಹಿಡಿದ ಸಚಿವರು ಕಳಂಕಿತರೆನಿಸಿಕೊಂಡದ್ದು `ಮಾದರಿ~ ನಾಯಕನ ದಾಖಲೆಗೆ ಕಪ್ಪು ಚುಕ್ಕೆ ಬಂದುದು ದುರಂತ.

ಅದಾದ ಮೇಲೆ ಮತ್ತೊಬ್ಬ ಆದರ್ಶ ಮತ್ತು `ಮಾದರಿ ನಾಯಕ~ ದೇಶಕ್ಕೆ ಸಿಕ್ಕರು ಎಂದು ದೇಶದ ಜನತೆ ಭರವಸೆ ತುಂಬಿಕೊಂಡದ್ದು ಡಾ. ಮನಮೋಹನ್ ಸಿಂಗ್ ಅಧಿಕಾರದ ಚುಕ್ಕಾಣಿ ಹಿಡಿದಾಗ ವಾಸ್ತವದಲ್ಲಿ ಇಂದಿಗೂ ಸಿಂಗ್ ನಿಷ್ಕಳಂಕಿತ ನಾಯಕರೇ. ಆದರೆ ಅವರಿಂದ ತಮ್ಮ ಸರ್ಕಾರದಲ್ಲಿರುವ ಸಚಿವರನ್ನು, ಅಧಿಕಾರಿಗಳನ್ನು ತಮ್ಮಂತಯೇ ನಿಷ್ಕಳಂಕರಾಗಿರುವಂತೆ ನೋಡಿಕೊಳ್ಳಲು ಅಸಾಧ್ಯವಾಗಿರುವುದು ವಿಷಾದದ ಸಂಗತಿ.

ಯು ಪಿ ಎ ಸರ್ಕಾರದ ಚುಕ್ಕಾಣಿ ಡಾ. ಮನಮೋಹನ್ಸಿಂಗ್ರ ಕೈಯಲ್ಲಿದೆ ಎಂಬುದು ವಾಸ್ತವವಾಗಿದ್ದರೂ ಅದರ ಅಂಕುಶವನ್ನು ಯು ಪಿ ಎ ಅಧ್ಯಕ್ಷೆ ಸೋನಿಯಾ ಹಿಡಿದುಕೊಂಡಿದ್ದಾರೆಂಬ ಆರೋಪವಿದೆ. ಸೋನಿಯಾ ಕೂಡಾ ಆದರ್ಶವನ್ನು ಮೆರೆದಿರುವ ನಾಯಕಿ. ಆಕೆಯ ಹಸ್ತಕ್ಷೇಪ ಆಡಳಿತ ಯಂತ್ರದಲ್ಲಿ ಹೆಚ್ಚಿದೆ ಅನ್ನುವುದಕ್ಕಿಂತ ಮಿತ್ರ ಪಕ್ಷಗಳು ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದು ಹೆಚ್ಚಾಗಿ ಸಿಂಗ್ರ ನಾಯಕತ್ವಕ್ಕೆ ಕಳಂಕ ಮೆತ್ತಿಕೊಳ್ಳುತ್ತಿದೆ ಎನ್ನುವುದು ವಾಸ್ತವದ ಸಂಗತಿ.

ದೇಶದ ರಾಜಕೀಯ ಕ್ಷೇತ್ರದಲ್ಲಿ ಮಾತ್ರವೇ `ಮಾದರಿ ನಾಯಕ~ನನ್ನು ಹುಡುಕಿದರೆ ಸಾಲದು. ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿಯಾದರೂ ಅಂತಹ ನಾಯಕತ್ವ ಗುಣದವರಿದ್ದರೆ ದೇಶ ಮತ್ತು ಜನತೆಗೆ ಒಂದು ಸಣ್ಣ ಸಮಾಧಾನವಾದರೂ ಸಿಗುತ್ತಿತ್ತು.
ಹಿಂದೆ ಪರಮಹಂಸ, ವಿವೇಕಾನಂದ, ಜ್ಯೋತಿಬಾಫುಲೆ, ನಾರಾಯಣ ಗುರು ಮುಂತಾದ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದ ಗುರುಗಳಾಗಿದ್ದರು. ಹಾಗೆ ನೋಡಿದರೆ, ಗಾಂಧೀಜಿ, ಅಂಬೇಡ್ಕರ್ರಂಥವರು ಸಾಮಾಜಿಕ ಕ್ಷೇತ್ರದ ಆದರ್ಶ ನಾಯಕರಾಗಿದ್ದರು.ಅವರ ಇರುವು ಒಂದು ರೀತಿಯ ಭರವಸೆ ತರುತ್ತಿತ್ತು.

ಸ್ವಾತಂತ್ರ್ಯಾನಂತರದಲ್ಲೂ ರಾಜಾಜಿ, ಪಟೇಲ್, ರಾಧಾಕೃಷ್ಣನ್, ಕೃಪಲಾನಿ, ವಿನೋಬಾ, ಜೆ. ಪಿ., ಪೆರಿಯಾರ್ರಂಥವರು ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸುಧಾರಣೆ ತರಲು ಹೆಣಗಾಡುದ್ದುಂಟು. ಅವರೆಲ್ಲಾ ಇರುವವರೆಗೆ ದೇಶದ ಪ್ರಗತಿಯ ಹಾದಿ ಮತ್ತು ನಾಯಕರ ಅಧಿಕಾರ ಚಲಾವಣೆಗಳು ನಿಷ್ಟತೆ ಮತ್ತು ಬದ್ಧತೆಗಳನ್ನು ಅವಲಂಬಿಸಿದ್ದುವು.

ಆದರೆ ಈ ಹೊತ್ತಿನ ಭಾರತದಲ್ಲಿ ಎಲ್ಲ ರೀತಿಯ ~ಮಾದರಿ ನಾಯಕತ್ವ~ದ ದಾರಿದ್ರ್ಯ ರಾಚುತ್ತಿದೆ. ಎಲ್ಲೆಡೆಯೂ ಅಧಿಕಾರಸ್ಥರ ಮತ್ತು ಉಳ್ಳವರ ದರ್ಪ, ದೌಲತ್ತುಗಳು ಪ್ರದರ್ಶನವಾಗುತ್ತಿವೆ. ಬಡತನ, ಅನಕ್ಷರತೆ, ಹಸಿವು ಮತ್ತು ಹಾಹಾಕಾರಗಳು ದೇಶವನ್ನು ಈಗಲೂ ಅಣಕಿಸುತ್ತಿವೆ. ಈ ಸಮಸ್ಯೆಗಳು ಸಂಪೂರ್ಣವಾಗಿ ತೊಲಗುವ ಲಕ್ಷಣ ಕಾಣುತ್ತಿಲ್ಲ. ಇದರ ಜೊತೆಗೆ ಜಾತೀಯತೆ, ಭ್ರಷ್ಟಾಚಾರ ಮತ್ತು ಅನೈತಿಕತೆಗಳು ದೇಶವನ್ನು ದುರ್ಬಲಗೊಳಿಸುತ್ತಿವೆ. ಬಲಿಷ್ಠ ಭಾರತವನ್ನು ಕಟ್ಟುವ ಕನಸು ಕ್ರಮೇಣ ಕರಗುತ್ತಿದೆ.

ಇಂತಹ ಅವಾಂತರ ಮತ್ತು ಆತಂಕಗಳನ್ನೆಲ್ಲಾ ದೇಶದ ~ಮಾದರಿ ನಾಯಕತ್ವ~ ಪರಿಹರಿಸಬಹುದಾದ ಶಕ್ತಿಯನ್ನು ಹೊಂದಿರುತ್ತದೆ. ಅಂತಹ ನ್ಯಾಯನಿಷ್ಠುರ, ಕಟಿಬದ್ಧ, ನಿಷ್ಕಲ್ಮಶ, ದಿಟ್ಟತನದ ನಾಯಕನೊಬ್ಬನ ಆಗಮನಕ್ಕಾಗಿ ದೇಶದ ಕೋಟಿ ಕೋಟಿ ಮನಸ್ಸುಗಳು ಕಾಯುತ್ತಿರುವುದಂತೂ ಸತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.