ಗುರುವಾರ , ಮಾರ್ಚ್ 4, 2021
29 °C

ದೇಶದ ಪ್ರಗತಿಗೆ ಶ್ರಮಿಸಿ: ಸೊರಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದ ಪ್ರಗತಿಗೆ ಶ್ರಮಿಸಿ: ಸೊರಕೆ

ಉಡುಪಿ: ಸಂವಿಧಾನದ ಪ್ರಸ್ತಾವನೆ ಯಲ್ಲಿರುವ ಎಲ್ಲ ತತ್ವ ಸಿದ್ಧಾಂತಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಎಲ್ಲರ ಬಾಳಿನಲ್ಲಿ ನೆಮ್ಮದಿ ತರುವುದು ಪ್ರತಿ ಯೊಬ್ಬ ಭಾರತೀಯನ ಚಿಂತನೆಯಾಗ ಬೇಕು ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್‌ ಸೊರಕೆ ಹೇಳಿದರು.ಜಿಲ್ಲಾಡಳಿತ ನಗರದ ಬೀಡಿನ ಗುಡ್ಡೆಯ ಬಯಲು ರಂಗಮಂದಿರದ ಆವರಣದಲ್ಲಿ ಮಂಗಳವಾರ ಏರ್ಪಡಿ ಸಿದ್ದ ಗಣರಾಜ್ಯೋತ್ಸವ ದಿನಾಚರಣೆ ಯಲ್ಲಿ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.ದೇಶದ ಪ್ರಗತಿಗಾಗಿ ಎಲ್ಲರೂ ಅವಿರತವಾಗಿ ಶ್ರಮಿಸಬೇಕು. ದೇಶದ ಪರಂಪರೆ, ಸಂಸ್ಕೃತಿ, ಹಿರಿಮೆ ಹಾಗೂ ಜನಾದರ್ಶಗಳನ್ನು ಗೌರವದಿಂದ ಕಾಣ ಬೇಕು. ನಾವೆಲ್ಲರೂ ಭಾರತೀಯರು ಒಂದು ರಾಷ್ಟ್ರದ ಮಕ್ಕಳು ಎಂಬ ಭಾವ ನೆಯೊಂದಿಗೆ ಬದುಕಿ ದೇಶದ ಹಿರಿಮೆ ಯನ್ನು ಎತ್ತಿ ಹಿಡಿಯಬೇಕು ಎಂದರು.ಆಂಗ್ಲರಿಂದ ದೇಶವನ್ನು ಮುಕ್ತಿ ಗೊಳಿಸಲು ಮಹಾತ್ಮ ಗಾಂಧೀಜಿ, ಜವಾ ಹರ ಲಾಲ್‌ ನೆಹರೂ, ಸರ್ದಾರ್‌ ವಲ್ಲಭ ಭಾಯಿ ಪಟೇಲ್‌, ಬಾಲಗಂಗಾಧರ ತಿಲಕ್‌ ಮೊದಲಾದವರು ಹೋರಾಟ ಮಾಡಿದರು. ಸ್ವಾತಂತ್ರ್ಯಕ್ಕಾಗಿ ಅವರು ಜೀವನವನ್ನೇ ಮುಡಿಪಾಗಿಟ್ಟರು. ದೇಶ ಕ್ಕಾಗಿ ದುಡಿದು ಮಡಿದ ನಾಯಕರು ತ್ಯಾಗವನ್ನು ಸ್ಮರಿಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.ಆಕರ್ಷಕ ಪಥ ಸಂಚಲನ: ಗಣರಾ ಜ್ಯೋತ್ಸವದ ಅಂಗವಾಗಿ ನಡೆದ ಆಕ ರ್ಷಕ ಪಥ ಸಂಚಲನ ಎಲ್ಲರ ಗಮನ ಸೆಳೆಯಿತು. ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕ ದಳ, ಅಗ್ನಿಶಾಮಕ ದಳ ಹಾಗೂ ನಗರದ ಶಾಲಾ ಕಾಲೇಜುಗಳ ಒಟ್ಟು 16 ತಂಡಗಳು ಇದರಲ್ಲಿ ಭಾಗ ವಹಿಸಿದ್ದವು. ಶಿಸ್ತುಬದ್ಧವಾಗಿ ಹೆಜ್ಜೆ ಹಾಕುತ್ತ ಸಾಗಿದ ತಂಡಗಳು ಮನಸೂರೆಗೊಂಡವು. ಗಾಯನ, ನೃತ್ಯ ಕಾರ್ಯಕ್ರಮಗಳು ಪ್ರೇಕ್ಷಕರಿಗೆ ಮನರಂಜನೆ ನೀಡಿದವು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸನ್ಮಾನಿ ಸಲಾಯಿತು. ಚಿತ್ರಕಲೆ– ದೀಕ್ಷಾ ಮೂಲ್ಯ, ಶ್ರೀನಿಧಿ ಡಿ. ಆಚಾರ್ಯ, ಕ್ರೀಡೆ– ಈ.ಕೆ. ಮೇಘನಾ, ಶಾರೋಲ್‌ ಅನಿ ಲೋಬೊ, ಶಿಕ್ಷಣ– ಮೈತ್ರಿ ಎಂ ಬಾಯರಿ, ಗುರುಕಿರಣ್‌ ಕುಲಾಲ್‌, ಸಾಂಸ್ಕೃತಿಕ ಕ್ಷೇತ್ರ–  ಗಗನ್‌ ಜಿ. ಗಾಂವ್ಕರ್‌, ಪಾವನಾ ಐತಾಳ್‌ ಅವರು ಸನ್ಮಾನಿತರು.ಸುಮಾರು ₹ 98 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಬಯಲು ರಂಗ ಮಂದಿರ ವನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸ ಲಾಯಿತು. ಮೊದಲ ಕಾರ್ಯಕ್ರಮವಾಗಿ ಇಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.ಶಾಸಕ ಪ್ರಮೋದ್‌ ಮಧ್ವರಾಜ್‌, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜನಾರ್ದನ ತೋನ್ಸೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುನಿತಾ ನಾಯ್ಕ್, ನಗರಸಭೆ ಅಧ್ಯಕ್ಷ ಪಿ. ಯುವರಾಜ, ಜಿಲ್ಲಾಧಿಕಾರಿ ಡಾ. ಆರ್‌. ವಿಶಾಲ್‌, ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.