ಬೆಂಗಳೂರು: ದೇಶದಲ್ಲಿ ಕಾಣಸಿಗುವ 1,224 ಪಕ್ಷಿ ಪ್ರಭೇದಗಳ ಪೈಕಿ 155 ಪಕ್ಷಿಗಳು (ಶೇ 13) ಅಪಾಯದ ಅಂಚಿನಲ್ಲಿವೆ. ಇದರಲ್ಲಿ 110 ಪಕ್ಷಿಗಳು ಸ್ಥಳೀಯ ಹಕ್ಕಿಗಳು. ಕರ್ನಾಟಕದಲ್ಲಿ ಕಾಣ ಸಿಗುವ 20ಕ್ಕೂ ಅಧಿಕ ಪ್ರಭೇದದ ಹಕ್ಕಿಗಳು ಅಪಾಯದ ಅಂಚಿನಲ್ಲಿವೆ.

ಈ ಆತಂಕಕಾರಿ ಸಂಗತಿಯನ್ನು `ಅಪಾಯದಂಚಿನಲ್ಲಿ ಭಾರತದ ಪಕ್ಷಿಗಳು (ಥ್ರೆಟನ್ಡ್ ಬರ್ಡ್ಸ್ ಆಫ್ ಇಂಡಿಯಾ)~ ಕುರಿತ ಪುಸ್ತಕದಲ್ಲಿ ಬಹಿರಂಗಪಡಿಸಲಾಗಿದೆ. ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿಎನ್ಎಚ್ಎಸ್) ಆಶ್ರಯದಲ್ಲಿ ನಗರದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಈ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಬಿಎನ್ಎಚ್ಎಸ್ ಸಂಸ್ಥೆಯ ನಿರ್ದೇಶಕ ಡಾ. ಅಸದ್ ಆರ್.ರೆಹಮಾನಿ ಪುಸ್ತಕದ ಲೇಖಕರು.

ಬಿಎಲ್ಐ ಹಾಗೂ ಪರಿಸರ ಸಂರಕ್ಷಣೆಯ ಅಂತರರಾಷ್ಟ್ರೀಯ ಸಂಘಟನೆ (ಐಯುಸಿಎನ್) ಸಂಸ್ಥೆಗಳು 2011ರಲ್ಲಿ ಸಮೀಕ್ಷೆ ನಡೆಸಿ ಪಟ್ಟಿ ಮಾಡಿದ ಪ್ರಕಾರ, 155 ಪಕ್ಷಿಗಳ ಪೈಕಿ 15 ಪ್ರಭೇದಗಳು ತೀರಾ ಅಪಾಯದಂಚಿನಲ್ಲಿ, 15 ಅಪಾಯದಂಚಿನಲ್ಲಿ, 52 ಅಪಾಯದ ಭೀತಿಯಲ್ಲಿ, 66 ಪ್ರಭೇದಗಳು ಭಯದ ಅಂಚಿನಲ್ಲಿದ್ದು, ಐದು ಪ್ರಭೇದಗಳು ದಾಖಲೆಗಳಲ್ಲಿ ಮಾತ್ರ ಕಾಣ ಸಿಗುತ್ತಿವೆ.

ಈ ಪಟ್ಟಿಯಲ್ಲಿರುವ ಮಂಗಟೆ ಹಕ್ಕಿ (ಮಳೆ ಹಕ್ಕಿ), ನಾರ್ಕೊಂಡಮ್ ಹಾರ್ನ್ಬಿಲ್, ಪೀಡ್ ಟಿಟ್, ನಿಕೋಬಾರ್ ಮೆಗಾಪೊಡೆ ಹಕ್ಕಿಗಳು ಜಗತ್ತಿನ ಬೇರೆಲ್ಲೂ ಕಾಣ ಸಿಗದ ಅಪರೂಪದ ಪಕ್ಷಿಗಳು. 42 ಜಾತಿಯ ಹಕ್ಕಿಗಳು ಅಕ್ರಮ ಬೇಟೆಯ ಕಾರಣದಿಂದ ಅಪಾಯದ ಅಂಚಿಗೆ ತಲುಪಿವೆ.

ಪಕ್ಷಿಗಳ ಸಂರಕ್ಷಣೆ ಬಗ್ಗೆ ತುರ್ತು ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದಿನ ವರ್ಷಗಳಲ್ಲಿ ಅಪಾಯದ ಅಂಚಿಗೆ ಸೇರುವ ಪಕ್ಷಿಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಪುಸ್ತಕದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಹಕ್ಕಿಗಳ ಸಂರಕ್ಷಣೆಗೆ ಪುಸ್ತಕದಲ್ಲಿ 18 ಶಿಫಾರಸುಗಳನ್ನು ಮಾಡಲಾಗಿದೆ. ಶಿಫಾರಸುಗಳನ್ನು ಅನುಷ್ಠಾನಗೊಳಿಸಿದರೆ ದೇಸಿ ಹಕ್ಕಿಗಳ ಸ್ಥಿತಿ ಸುಧಾರಣೆ ಆಗಬಹುದು ಎಂಬ ಆಶಯ ವ್ಯಕ್ತಪಡಿಸಲಾಗಿದೆ.

ಭಾರತದಲ್ಲಿ 446 ಪ್ರಮುಖ ಪಕ್ಷಿ ತಾಣಗಳಿವೆ. ಇವುಗಳಲ್ಲಿ ಹೆಚ್ಚಿನವು ಪ್ರಮುಖ ಜೀವವೈವಿಧ್ಯ ತಾಣಗಳು. ಈ ಪೈಕಿ ಸರ್ಕಾರದಿಂದ 200ಕ್ಕೂ ಅಧಿಕ ತಾಣಗಳ ಸಂರಕ್ಷಣೆ ಆಗುತ್ತಿಲ್ಲ. ಸಮುದಾಯದಿಂದ ಸಂರಕ್ಷಣೆ ಆಗುತ್ತಿರುವ ತಾಣಗಳೇ ದೇಶದಲ್ಲಿ ಹೆಚ್ಚು ಇವೆ. ಕೇಂದ್ರ ಸರ್ಕಾರ ಈ ದಿಕ್ಕಿನಲ್ಲಿ ಕಾರ್ಯವೆಸಗಬೇಕು ಎಂದು ಶಿಫಾರಸು ಮಾಡಲಾಗಿದೆ.

`ಭಾರತದಲ್ಲಿ ಹೆಚ್ಚಿನ ಪ್ರಾಣಿ ಸಂರಕ್ಷಣಾ ಕಾರ್ಯಕ್ರಮಗಳು ಹುಲಿ ಕೇಂದ್ರಿತ ಕಾರ್ಯಕ್ರಮಗಳಾಗಿವೆ. ಹುಲಿ ವೀಕ್ಷಣೆ ಫ್ಯಾಷನ್ ಆಗಿದೆ. ಇತರ ಪ್ರಾಣಿಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಕೆಲವು ಪ್ರಾಣಿಗಳನ್ನು ವ್ಯರ್ಥ ಎಂಬಂತೆ ಬಿಂಬಿಸಲಾಗುತ್ತಿದೆ. ದೇಶದ 39 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಅಪಾಯದಂಚಿನಲ್ಲಿರುವ ಶೇ 50ರಷ್ಟು ಪಕ್ಷಿಗಳು ಕಾಣ ಸಿಗುತ್ತಿಲ್ಲ~ ಎಂದು ಲೇಖಕ ಅಸದ್ ಆರ್.ರೆಹಮಾನಿ ಕಳವಳ ವ್ಯಕ್ತಪಡಿಸಿದರು.

ಪುಸ್ತಕ ಬಿಡುಗಡೆ ಮಾಡಿದ ಎಂಎಸ್ಪಿಎಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನರೇಂದ್ರ ಕುಮಾರ್ ಬಲ್ದೊಟಾ ಮಾತನಾಡಿ, `ಪರಿಸರ ನಾಶ ಮಾಡಿ ಗಣಿಗಾರಿಕೆ ಬೇಡ. ಅಕ್ರಮ ಗಣಿಗಾರಿಕೆಯಿಂದ ಅಮೂಲ್ಯ ಪ್ರಾಕೃತಿಕ ಸಂಪತ್ತು ನಾಶವಾಗಿದೆ. ಕೆಲವರಿಂದ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ಬಂದಿದೆ. ಮರ ಗಿಡಗಳ ಸಂರಕ್ಷಣೆಗೆ ಉದ್ಯಮಿಗಳು ಗಮನ ಹರಿಸಬೇಕು~ ಎಂದರು.

ಪಕ್ಷಿತಜ್ಞ ಸಮದ್ ಕೊಟ್ಟೂರು ಮಾತನಾಡಿ, `ಉತ್ತರ ಕರ್ನಾಟಕವೆಂದರೆ ಬಿಸಿಲಿನ ನಾಡು ಎಂಬ ಭಾವನೆ ಎಲ್ಲರಲ್ಲೂ ಇದೆ. ಈ ಪ್ರದೇಶದಲ್ಲಿ ಪಕ್ಷಿಗಳ ಸಂರಕ್ಷಣೆ ವಿಚಾರದಲ್ಲಿ ಹಿಂದೆ ಉಳಿದಿದ್ದೇವೆ. ಕೆಲವು ವರ್ಷಗಳಿಂದ ಈ ಪ್ರದೇಶದಲ್ಲಿ 230 ಜಾತಿಯ ಪಕ್ಷಿಗಳನ್ನು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಅಪರೂಪದ ಪಕ್ಷಿಗಳು ಇವೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಛಾಯಾಗ್ರಾಹಕರು ಅಪರೂಪದ ಪಕ್ಷಿಗಳ ಚಿತ್ರ ಸೆರೆ ಹಿಡಿಯುತ್ತಾರೆ. ಆದರೆ ಅವುಗಳ ಸಂರಕ್ಷಣೆಯ ಬಗ್ಗೆ ಅವರು ಗಮನ ಹರಿಸುತ್ತಿಲ್ಲ. ಕೆಲವೊಮ್ಮೆ ಇಂತಹ ಪ್ರವೃತ್ತಿಯೇ ಪಕ್ಷಿಗಳಿಗೆ ಕುತ್ತು ತಂದೊಡ್ಡುತ್ತದೆ~ ಎಂದು ಅವರು ವಿಷಾದಿಸಿದರು.

ಎಂಎಸ್ಪಿಎಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಮೇಧಾ ವೆಂಕಟಯ್ಯ, ಉದ್ಯಮಿ ಡಾ. ಸೇನ್ಗುಪ್ತ ಉಪಸ್ಥಿತರಿದ್ದರು.

ಪುಸ್ತಕದ ಬಗ್ಗೆ: ಎಂಎಸ್ಪಿಎಲ್, ಬರ್ಡ್ಲೈಫ್ ಇಂಟರ್ನ್ಯಾಷನಲ್, ಐಬಿಸಿಎನ್, ಆರ್ಎಸ್ಪಿಬಿ, ಬಿಎನ್ಎಚ್ಎಸ್ ಸಹಯೋಗದಲ್ಲಿ ಈ ಕೃತಿ ರಚಿಸಲಾಗಿದೆ. 870 ಪುಟಗಳಿರುವ ಈ ಕೃತಿಯ ಬೆಲೆ ರೂ 3,000. 155 ನಕ್ಷೆಗಳು ಹಾಗೂ 645 ಚಿತ್ರಗಳು ಇವೆ. ಮೊದಲ ಹಂತದಲ್ಲಿ ಒಂದು ಸಾವಿರ ಪ್ರತಿಗಳನ್ನು ಮುದ್ರಿಸಲಾಗಿದೆ. ಈ ಕೃತಿ ಈಗಾಗಲೇ ದಿಲ್ಲಿ, ಮುಂಬೈ, ಟೋಕಿಯೋ, ಸಿಂಗಪುರದಲ್ಲಿ ಬಿಡುಗಡೆಗೊಂಡಿದೆ. ವಿದ್ಯಾರ್ಥಿಗಳು, ಸಂಶೋಧಕರು, ಪ್ರಾಧ್ಯಾಪಕರು, ಪಕ್ಷಿಪ್ರಿಯರಿಗೆ, ಆಡಳಿತಗಾರರಿಗೆ ಈ ಪುಸ್ತಕ ಹೆಚ್ಚು ನೆರವಾಗಲಿದೆ ಎಂದು ಕಾರ್ಯಕ್ರಮದ ಸಂಘಟಕರು ಆಶಯ ವ್ಯಕ್ತಪಡಿಸಿದರು.

ಹೆಚ್ಚಿನ ಮಾಹಿತಿಗೆ: ಬಿಎನ್ಎಚ್ಎಸ್, ಹಾರ್ನ್ಬಿಲ್ ಹೌಸ್, ಶಹೀದ್ ಭಗತ್ ಸಿಂಗ್ ರಸ್ತೆ, ಮುಂಬೈ-400091. ದೂರವಾಣಿ ಸಂಖ್ಯೆ: 91-22-22821811. ಈ ಮೇಲ್ ವಿಳಾಸ- info@bnhs.org

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.