ಹೊಳೆನರಸೀಪುರ: ಕರಾಟೆ, ಜೂಡೋ, ಬಾಕ್ಸಿಂಗ್, ಕುಸ್ತಿ ಮುಂತಾದ ಸಾಹಸ ಕಲೆಗಳನ್ನು ಗೂಂಡಾಗಿರಿಗೆ ಬಳಸದೆ ದೇಶ ರಕ್ಷಣೆ ಹಾಗೂ ಮಾನಪ್ರಾಣ ರಕ್ಷಣೆಗೆ ಬಳಸಿಕೊಂಡು ದೇಶಸೇವೆಗೆ ತೊಡಗಿಸಿಕೊಳ್ಳಬೇಕು ಎಂದು ಎಸ್.ಎಲ್.ಎನ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹೊ.ಸು. ರಮೇಶ್ ಸಲಹೆ ನೀಡಿದರು.

ಪಟ್ಟಣದ ಗೋಜುಖಾನ್ ಕರಾಟೆ ಸಂಸ್ಥೆಯಲ್ಲಿ ತರಬೇತಿ ಪಡೆದು ಕೊಳ್ಳೆಗಾಲದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಕರಾಟೆಪಟುಗಳಿಗೆ ಪದಕ ಹಾಗೂ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.

ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸುಶ್ಮಿತಾಗೆ 2 ಚಿನ್ನ, 1 ಬೆಳ್ಳಿ, ತೇಜಸ್ಗೆ 2 ಚಿನ್ನ, ಸೌಜನ್ಯಾಗೆ 2 ಬೆಳ್ಳಿ, 1 ಕಂಚು, ವಿಭಾಗೆ 1 ಬೆಳ್ಳಿ, 1 ಕಂಚು, ಮನೀಶ್ಗೆ 2 ಕಂಚು, ಪವನ್ಗೆ 2 ಕಂಚು, ಹೇಮಶ್ರೀಗೆ 1 ಬೆಳ್ಳಿ ಪದಕ ಲಭಿಸಿದೆ ಎಂದು ವಿವರಿಸಿದರು.
ಸಹ ಪ್ರಾಧ್ಯಾಪಕ ಪುಟ್ಟಸ್ವಾಮಿ, ರೋಟರಿ ಸಂಸ್ಥೆ ಅಧ್ಯಕ್ಷ ಆರ್.ಬಿ. ಪುಟ್ಟೇಗೌಡ, ತಾಲ್ಲೂಕು ಜನಪದ ಪರಿಷತ್ ಅಧ್ಯಕ್ಷ ಬಾ.ರಾ. ಸುಬ್ಬರಾಯ, ಚಂದ್ರಕುಮಾರ್, ಕುಮುದಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.