ಮಂಗಳವಾರ, ಮೇ 24, 2022
24 °C

ದೇಸಿ ಕೀಟನಾಶಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂಬಳ ಜಾತಿಗೆ ಸೇರಿದ ಕೌಟೆ ಕಾಯಿಗಳು ಕಹಿಯಾಗಿರುತ್ತವೆ. ಕಳೆಯಂತೆ ಬೆಳೆಯುವ ಕೌಟೆ ಕಾಯಿ ಬಳ್ಳಿಗಳು ಅಲ್ಲಲ್ಲಿ ಬೆಳೆಯಲು ಅವಕಾಶ ಮಾಡಿಕೊಳ್ಳಿ. ಬೇವಿಗಿಂತ ಕಹಿಯಾಗಿರುವ ಕೌಟೆ ಕಾಯಿಗಳನ್ನು ಜಜ್ಜಿ ಗಂಜಲದೊಂದಿಗೆ ಸೇರಿಸಿ ತರಕಾರಿ ಹಾಗೂ ಆಹಾರದ ಬೆಳೆಗಳಿಗೆ ಸಿಂಪಡಿಸಿ ಕೀಟಗಳನ್ನು ನಿಯಂತ್ರಿಸಬಹುದು. ಕಾಯಿಗಳು ಡಿಸೆಂಬರ್ - ಜನವರಿ ತಿಂಗಳುಗಳಲ್ಲಿ ಬಲಿಯುತ್ತವೆ. ಕಾಯಿಗಳು ಬಲಿತ ಬಳಿಕ ಬಳ್ಳಿ ಒಣಗುತ್ತದೆ.ಕೌಟೆ ಕಾಯಿಗಳು ಬೇಗ ಕೊಳೆತು ಹಾಳಾಗುವುದಿಲ್ಲ. ರಬ್ಬರ್‌ನಂತೆ ಗಟ್ಟಿಯಾಗಿರುತ್ತವೆ. ಬರಿಗೈಯಿಂದ ಹೋಳು ಮಾಡುವುದು ಕಷ್ಟ. ಒಂದೊಂದು ಬಳ್ಳಿಯಲ್ಲಿ ಹತ್ತಿಪ್ಪತ್ತು ಕಾಯಿಗಳು ಬಿಡುವುದರಿಂದ ಒಂದೆರಡನ್ನು ಅಲ್ಲಿಯೇ ಬಿಟ್ಟು ಉಳಿದವುಗಳನ್ನು ಕಿತ್ತು ಒಂದೆಡೆ ಇಟ್ಟು ಬೇಕಾದಾಗ ಬಳಸಬಹುದು. ಒಂದು ಡ್ರಂ  ನೀರಿಗೆ 5 ರಿಂದ 10 ಲೀಟರ್ ಗಂಜಲವನ್ನು ಸೇರಿಸಿ ಬಳಿಕ 5-10 ಕೌಟೆ ಕಾಯಿಗಳನ್ನು ಚೆನ್ನಾಗಿ ಜಜ್ಜಿ ನೀರಿನೊಂದಿಗೆ ಕಲೆಸಿ ಸಿಂಪರಣೆಗೆ ಬಳಸಿಕೊಳ್ಳಬಹುದು.ಕೌಟೆ ಕಾಯಿಗಳು ಬಲಿತ ಬಳಿಕ ಹಣ್ಣಾಗಿ ಮೆತ್ತಗಾಗುವುದು ವಿರಳ. ಕೆಲವು ಕಡೆ ಇದೇ ಜಾತಿಗೆ ಸೇರಿದ ಬುಡಮೆ ಕಾಯಿಗಳು ಹಣ್ಣಾದಾಗ ರುಚಿಯಾಗಿರುತ್ತವೆ..  ಈ ಸಸ್ಯ ಪ್ರಬೇಧವನ್ನು ಸಂರಕ್ಷಿಸಲು ರೈತರು ಕಾಳಜಿ ವಹಿಸಬೇಕು. ಜಾನುವಾರುಗಳ ಗಾಯಗಳಿಗೆ  ಔಷಧ. ಮನುಷ್ಯರಲ್ಲಿ ಕಾಣಿಸುವ ‘ಉಗುರು ಸುತ್ತು’ ನಿವಾರಣೆಗೆ ಕೌಟೆ ಕಾಯಿ ಕತ್ತರಿಸಿ ಉಗುರಿಗೆ ಸಿಕ್ಕಿಸಿಕೊಳ್ಳುತ್ತಾರೆ.  ಹಳೆಯ ಹಸಿ ಗಾಯಗಳನ್ನು ವಾಸಿ ಮಾಡಬಹುದು. ಉರಿಗಾಯಗಳಿಗೆ ಇದನ್ನು ಬೆಂಕಿಯಲ್ಲಿ ಬಾಡಿಸಿ ಚಟ್ನಿಯಂತೆ ಮಾಡಿ ಲೇಪಿಸುತ್ತಾರೆ.

             

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.