ಸೋಮವಾರ, ಮೇ 17, 2021
27 °C

ದೇಹಕ್ಕೆ ಕಸುವು ತುಂಬುವ ಬೀಟ್‌ರೂಟ್ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಬೀಟ್‌ರೂಟ್ ಈಗ ಕ್ರೀಡಾಪಟುಗಳ ಸಾಮರ್ಥ್ಯ ಹೆಚ್ಚಿಸುವ ತರಕಾರಿ ಎಂಬ ಖ್ಯಾತಿಯನ್ನು  ಪಡೆದಿದೆ....!

ಅಮೆರಿಕದ ಸೇಂಟ್ ಲೂಯಿಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕ್ರೀಡಾಪಟುಗಳಿಗೆ ಬೀಟ್‌ರೂಟ್ ತಿನ್ನಿಸಿ ನಡೆಸಿದ ಅಧ್ಯಯನದಿಂದ ಈ ವಿಚಾರವನ್ನು ಪತ್ತೆ ಹಚ್ಚಿದ್ದಾರೆ.

ಈ ಅಧ್ಯಯನಕ್ಕೆ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಬೀಟ್‌ರೂಟ್ ಜ್ಯೂಸ್ ಕುಡಿದು 5 ಕಿ.ಮೀ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು, ಕ್ಯಾನ್‌ಬೆರ‌್ರಿ (ಬೀಟ್‌ರೂಟ್ ಗುಣವಿರುವ ಕೆಂಪು ಹಣ್ಣು) ಸೇವಿಸಿ ಓಡಿದ ಕ್ರೀಡಾಪಟುಗಳಿಗಿಂತ ಉತ್ತಮ ಸಾಮರ್ಥ್ಯ ಪ್ರದರ್ಶಿಸಿದ್ದರು ಎಂದು ಸಂಶೋಧಕರು ತಿಳಿಸಿದ್ದಾರೆ.

ಅಧ್ಯಯನದ ಪ್ರಕಾರ ಬೀಟ್‌ರೂಟ್ ಜ್ಯೂಸ್‌ನಿಂದ ದೇಹದಲ್ಲಿನ ಶಕ್ತಿ ಹೆಚ್ಚಾಗುತ್ತದೆ. ಜೊತೆಗೆ ಮಾಂಸಖಂಡಗಳ ಸಾಮರ್ಥ್ಯ ಕೂಡ ಉತ್ತಮವಾಗುತ್ತದೆ. ಗೆಡ್ಡೆ ತರಕಾರಿಗಳಲ್ಲಿ ನೈಟ್ರೇಟ್‌ನಂತಹ ರಾಸಾಯನಿಕಗಳ ಅಂಶ ಹೆಚ್ಚಿರುತ್ತದೆ. ಇವು ವ್ಯಕ್ತಿಯ ದೇಹದ ಶಕ್ತಿಯನ್ನು ಇಮ್ಮಡಿಗೊಳಿಸುತ್ತದೆ.

ಇತ್ತೀಚೆಗೆ ಇದೇ ಅಧ್ಯಯನಕ್ಕೆ ಸಂಬಂಧಿಸಿದ ಲೇಖನ ಅಕಾಡೆಮಿ ಆಫ್ ನ್ಯೂಟ್ರಿಷನ್ ಅಂಡ್ ಡೈಟಿಕ್ಸ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಲೇಖನದಲ್ಲಿನ ಸಾರಂಶ ಹೀಗಿದೆ; ಸಂಶೋಧಕರ ತಂಡವೊಂದು ಆರೋಗ್ಯಪೂರ್ಣ ಪುರುಷ ಮತ್ತು ಮಹಿಳಾ ಸದಸ್ಯರನ್ನು ಆಯ್ಕೆ ಮಾಡಿಕೊಂಡು ಅವರಿಗೆ `ಟ್ರೇಡ್ ಮಿಲ್~ ಮೇಲೆ 5 ಕಿ.ಮೀ ಓಟದ ಸ್ಪರ್ಧೆ ಆಯೋಜಿಸಿದ್ದಾರೆ. ಈ ಸ್ಪರ್ಧೆಯಲ್ಲೂ ಬೀಟ್‌ರೂಟ್ ಸೇವಿಸಿ ಓಟದಲ್ಲಿ ಭಾಗವಹಿಸಿದವರೇ ಮೇಲುಗೈ ಸಾಧಿಸಿದ್ದಾರೆ.

`ಗೆಡ್ಡೆ ತರಕಾರಿಗಳ ಬೇರಿನಲ್ಲಿ ನೈಟ್ರೇಟ್ ಅಂಶ ಹೆಚ್ಚಾಗಿರುತ್ತದೆ. ನೈಟ್ರೇಟ್ ಅಂಶ ಸೇವನೆಯಿಂದ ಕ್ರೀಡಾಪಟುಗಳ ಓಟದ ಸಾಮರ್ಥ್ಯ ಹೆಚ್ಚಾಗುತ್ತದೆ~ ಎಂದು ಅಧ್ಯಯನದ ನೇತೃತ್ವವಹಿಸಿದ್ದ ಮಾರ್ಗರೇಟ್ ಮರ್ಫಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.