ಗುರುವಾರ , ಮೇ 19, 2022
23 °C

ದೋಷಪೂರಿತ ಗುರುತಿನ ಚೀಟಿ: ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ತಾಲ್ಲೂಕಿನಲ್ಲಿ ಇತ್ತೀಚೆಗೆ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಪುರಸಭೆಯಿಂದ ನೀಡಿರುವ ಗುರುತಿನ ಚೀಟಿಗಳಲ್ಲಿ ಶೇ.90ರಷ್ಟು ದೋಷದಿಂದ ಕೂಡಿವೆ.

ಹೊಸದಾಗಿ ಸೇರ್ಪಡೆಗೊಂಡ ಮತದಾರರು, ವರ್ಗಾವಣೆಗೊಂಡ ನೌಕರರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡು ಗುರುತಿನ ಪತ್ರ ಪಡೆದಿದ್ದಾರೆ. ಈ ಗುರುತಿನ ಚೀಟಿಗಳಲ್ಲಿ ಜನ್ಮ ದಿನಾಂಕ, ಪೋಷಕರ ಹೆಸರು, ವಿಳಾಸ ಸೇರಿದಂತೆ ವಿವಿಧ ರೀತಿಯ ಲೋಪದೋಷಗಳು ಎದ್ದುಕಾಣುತ್ತಿವೆ.ನಿಗದಿತ ಅರ್ಜಿ ನಮೂನೆಯಲ್ಲಿ ಗುರುತಿನ ಚೀಟಿ ಪಡೆಯಲು ಅರ್ಜಿ ಸಲ್ಲಿಸಿದ್ದೆವು. ನಮ್ಮ ಕುಟುಂಬದ  ಆರು ಮಂದಿ ಸದಸ್ಯರ ಗುರುತಿನ ಪತ್ರದಲ್ಲೂ ದೋಷಗಳಿವೆ. ಈ ಬಗ್ಗೆ ತಾಲ್ಲೂಕು ಚುನಾವಣಾ ಶಿರಸ್ತೆದಾರರನ್ನು ಕೇಳಿದರೆ ಪುರಸಭೆಯಲ್ಲಿ ತಿದ್ದುಪಡಿಗೆ ಅರ್ಜಿಸಲ್ಲಿಸಿ ಎಂದು ಹೇಳುತ್ತಾರೆ. ಆದರೆ ಪುರಸಭೆ ಅಧಿಕಾರಿಗಳು ನಮಗೆ ಯಾವುದೇ ಆದೇಶ ಬಂದಿಲ್ಲ ಇದು ನಮ್ಮ ಕೆಲಸವಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆ ಎಂದು ದೋಷ ಪೂರಿತ ಮತದಾರರ ಗುರುತಿನ ಚೀಟಿ ಹೊಂದಿರುವ ವಿಶ್ವನಾಥ್ ಹಿರೇಮಠ ಆಕ್ರೋಶ ವ್ಯಕ್ತಪಡಿಸುತ್ತಾರೆ.ಪಾಸ್‌ಪೋರ್ಟ್, ವಾಹನ ಚಾಲಕರ ಪರವಾನಗಿ, ಬ್ಯಾಂಕ್ ವ್ಯವಹಾರ ಸೇರಿದಂತೆ ಪ್ರತಿಯೊಂದು ಇಲಾಖೆಗಳಲ್ಲಿ ಮತದಾರರ ಗುರುತಿನ ಚೀಟಿಯನ್ನು ಪ್ರಮುಖ ದಾಖಲೆಯಾಗಿ ಕೇಳುವುದರಿಂದ ಗುರುತಿನ ಚೀಟಿಯಲ್ಲಿನ ದೋಷಗಳು ಸಮಸ್ಯೆಯಾಗಿ ಪರಿಣಮಿಸಿದೆ  ಎಂದು ಮುನಿರಾಜು ದೂರುತ್ತಾರೆಸ್ಪಷ್ಟನೆ : ಮತದಾರರ ಗುರುತಿನ ಚೀಟಿಯಲ್ಲಿ ದೋಷವಿದ್ದಲ್ಲಿ ನಮೂನೆ 7 ಮತ್ತು 8ರ ಅಡಿ ಅರ್ಜಿ ಪಡೆದು ಹೊಸ ಗುರುತಿನ ಚೀಟಿ ನೀಡುವಂತೆ ಪುರಸಭೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಹಶೀಲ್ದಾರ್ ಮತ್ತು ಚುನಾವಣಾ ಶಿರಸ್ತೇದಾರರು ಸ್ಪಷ್ಟನೆ ನೀಡುತ್ತಾರೆ. ಆದರೆ ಪುರಸಭೆ ಅಧಿಕಾರಿಗಳು ನಮಗೆ ಯಾವುದೇ ಆದೇಶ ಬಂದಿಲ್ಲ ಎಂದು ಹೇಳುತ್ತಾರೆ.

ಗುರುತಿನ ಚೀಟಿ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಲು ನಿಗದಿತ ಕೇಂದ್ರದ ವ್ಯವಸ್ಥೆ ಎಲ್ಲಿ ಎಂಬುದು ಇದುವರೆವಿಗೂ ತಿಳಿದಿಲ್ಲ. ಇದರಿಂದ ನಾಗರಿಕರಿಗೆ ತೀವ್ರ ತೊಂದರೆಯಾಗಿದ್ದು, ಸಂಬಂಧ ಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದುನಾಗರಿಕರ ಒತ್ತಾಯ.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.