ನವದೆಹಲಿ (ಪಿಟಿಐ): ರಾಹುಲ್ ದ್ರಾವಿಡ್ ತಾಳ್ಮೆ ಕಳೆದುಕೊಂಡ ಉದಾಹರಣೆ ಇಲ್ಲ. ಆದರೆ ಪತ್ನಿ ವಿಜೇತಾ ಹೇಳುವ ಪ್ರಕಾರ ಅವರೊಮ್ಮೆ ಸಿಟ್ಟಿನಿಂದ ಕುರ್ಚಿಯನ್ನು ಬಿಸಾಡಿದ್ದರಂತೆ!
``ಒಮ್ಮೆ ಟೆಸ್ಟ್ ಸರಣಿಯಿಂದ ಹಿಂತಿರುಗಿದ್ದ ಅವರು, `ನನಗೆ ತುಂಬಾ ಸಿಟ್ಟು ಬಂತು, ಆ ರೀತಿ ನಾನು ಮಾಡಬಾರದಿತ್ತು~ ಎಂದು ನನಗೆ ಹೇಳಿದ್ದರು. ಆದರೆ ಹೆಚ್ಚಿನ ವಿವರ ನೀಡಿರಲಿಲ್ಲ.

ಸ್ವಲ್ಪ ದಿನ ಕಳೆದ ಮೇಲೆ ನನಗೆ ಮತ್ತೊಂದು ವಿಷಯ ಗೊತ್ತಾಯಿತು. ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತ ಸೋಲು ಕಂಡ ಕಾರಣ ದ್ರಾವಿಡ್ ಕುರ್ಚಿಯನ್ನು ಬಿಸಾಡಿದ್ದರಂತೆ. ತಂಡ ಕೆಟ್ಟದಾಗಿ ಸೋತ ಕಾರಣ ಈ ರೀತಿ ಮಾಡಿದ್ದರಂತೆ. ಈ ವಿಷಯವನ್ನು ನನಗೆ ತಿಳಿಸಿದ್ದು ವೀರೇಂದ್ರ ಸೆಹ್ವಾಗ್~~ ಎಂದು ವಿಜೇತಾ ಹೇಳಿದ್ದಾರೆ.

`ದ್ರಾವಿಡ್ 2007-08ರವರೆಗೆ ಕ್ರಿಕೆಟ್ ಆಡಬೇಕು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ತಮಗಿದ್ದ ಕ್ರಿಕೆಟ್ ಪ್ರೀತಿ ಹಾಗೂ ಫಿಟ್ನೆಸ್ ಅವರನ್ನು ಇಲ್ಲಿಯವರೆಗೆ ಕರೆದುಕೊಂಡುಬಂದಿದೆ~ ಎಂದೂ ಅವರು ನುಡಿದಿದ್ದಾರೆ.

`ರಾಹುಲ್ ಪ್ರವಾಸಕ್ಕೆ ತೆರಳುವ ಮುನ್ನ ಅವರು ತೆಗೆದುಕೊಂಡು ಹೋಗಬೇಕಾದ ವಸ್ತುಗಳನ್ನೆಲ್ಲಾ ಜೋಡಿಸಿ ಬ್ಯಾಗ್ನಲ್ಲಿಡುತ್ತಿದ್ದೆ. ಆದರೆ ಅವರ ಕ್ರಿಕೆಟ್ ಕಿಟ್ ಮಾತ್ರ ನಾನು ಮುಟ್ಟುತ್ತಿರಲಿಲ್ಲ. ಏಕೆಂದರೆ ಅದು ಅವರಿಗೆ ಪವಿತ್ರವಾದುದು. ದ್ರಾವಿಡ್ ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುತ್ತಿದ್ದರು.

ಎರಡು ಜೊತೆ ಬಟ್ಟೆಗಳನ್ನು ಇಟ್ಟರೆ ಅವರು ಇಡೀ ಪ್ರವಾಸದಲ್ಲಿ ಅವುಗಳನ್ನೇ ಮತ್ತೆ ಮತ್ತೆ ತೊಡುತ್ತಿದ್ದರು. 20 ವರ್ಷಗಳಿಂದ ಒಂದೇ ರೀತಿಯ ಕ್ರೀಮ್ ಬಳಸುತ್ತಿದ್ದರು~ ಎಂಬ ವಿಷಯವನ್ನು ವಿಜೇತಾ ಬಹಿರಂಗಪಡಿಸಿದ್ದಾರೆ.

`ಬಟ್ಟೆಗಳು ಯಾವ ರೀತಿ ಇದ್ದರೂ ಆ ಬಗ್ಗೆ ಅವರು ಯೋಚಿಸುತ್ತಿರಲಿಲ್ಲ. ವಾಚ್, ಕಾರಿನ ಬ್ರಾಂಡ್ ಬದಲಾದರೂ ಚಿಂತಿಸುತ್ತಿರಲಿಲ್ಲ. ಆದರೆ ಬ್ಯಾಟ್ ತೂಕದಲ್ಲಿ ಒಂದು ಗ್ರಾಂ ವ್ಯತ್ಯಾಸವಾದರೂ ಅದು ಬೇಗ ಅವರ ಗಮನಕ್ಕೆ ಬರುತಿತ್ತು. ಈ ಬಗ್ಗೆ ಹೆಚ್ಚು ಗಮನ ಹರಿಸಿ ಅದನ್ನು ಸರಿಪಡಿಸಿಕೊಳ್ಳುತ್ತಿದ್ದರು~ ಎಂದು ತಿಳಿಸಿದ್ದಾರೆ.

ದ್ರಾವಿಡ್ ಸಿದ್ಧತೆ ನಡೆಸುತ್ತಿದ್ದ ಬಗ್ಗೆ ಪ್ರತಿಕ್ರಿಯಿಸಿರುವ ವಿಜೇತಾ, `ನಾನು ಮೊದಲ ಬಾರಿ ಅಂದರೆ 2003-04ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅವರ ಜೊತೆ ಹೋಗಿದ್ದೆ. ಅವರು ಅಭ್ಯಾಸ ನಡೆಸುತ್ತಿದ್ದ ರೀತಿ ನನ್ನಲ್ಲಿ ಅಚ್ಚರಿ ಉಂಟು ಮಾಡುತಿತ್ತು. ಯಾವುದ್ಯಾವುದೋ ಸಮಯದಲ್ಲಿ ಅಭ್ಯಾಸ ನಡೆಸುತ್ತಿದ್ದರು. ನಿದ್ದೆಗಣ್ಣಿನಲ್ಲಿ ನಡೆಯುತ್ತಿದ್ದಾರೆ ಎಂದು ನಾನೊಮ್ಮೆ ಭಾವಿಸಿದ್ದೆ!~ ಎಂದಿದ್ದಾರೆ.

`ಅಪ್ಪನನ್ನು ಏಕಾಂಗಿಯಾಗಿರಲು ಬಿಡಿ ಎಂದು ಪಂದ್ಯದ ಹಿಂದಿನ ದಿನ ಮಕ್ಕಳಿಗೆ ತಿಳಿಸಲಾಗುತಿತ್ತು. ರಾಹುಲ್ ಒಂದು ಕೊಠಡಿಗೆ ತೆರಳಿ ಧ್ಯಾನದಲ್ಲಿ ತೊಡಗುತ್ತಿದ್ದರು. ಪಂದ್ಯದ ದಿನ ಎದ್ದ ಕೂಡಲೇ ಮತ್ತೊಮ್ಮೆ ಧ್ಯಾನದಲ್ಲಿ ತೊಡಗುತ್ತಿದ್ದರು~ ಎಂದೂ ಅವರು ವಿವರಿಸಿದ್ದಾರೆ.

ದ್ರಾವಿಡ್ ಅವರಿಗಿದ್ದ ಮೂಢನಂಬಿಕೆಗಳ ಬಗ್ಗೆ ಪ್ರತಿಕ್ರಿಯಿಸಿರುವ ವಿಜೇತಾ, `ಸರಣಿ ವೇಳೆ ಮತ್ತೊಂದು ಹೊಸ ಬ್ಯಾಟ್ನಲ್ಲಿ ಆಡಲು ಪ್ರಯತ್ನಿಸುತ್ತಿರಲಿಲ್ಲ. ಬಲಗಾಲಿಗೆ ಮೊದಲು ಪ್ಯಾಡ್ ಕಟ್ಟುತ್ತಿದ್ದರು~ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.